ಶಾಲೆ ಹಾಜರಾತಿ ಹೆಚ್ಚಿಸಿದ್ದ ಲಕ್ಷ್ಮಿ ಇನ್ನಿಲ್ಲ
Team Udayavani, Sep 7, 2019, 10:29 PM IST
ಕರ್ನೂಲ್: ಮುಖ್ಯೋಪಾಧ್ಯಾಯರೂ ಸೇರಿ ಇಬ್ಬರೇ ಶಿಕ್ಷಕರಿರುವ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವಂಗಲಂಪಲ್ಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರತಿದಿನ ಅರ್ಧದಷ್ಟು ಹಾಜರಾತಿಯೂ ಇರಲಿಲ್ಲ. ಶಿಕ್ಷಕರು ಮಕ್ಕಳನ್ನು ಮನವೊಲಿಸಿ ಶಾಲೆಗೆ ಕರೆತರುವಲ್ಲಿ ಸೋತಿದ್ದರು. ಆದರೆ ಒಂದು ಮಂಗ ಈ ಶಾಲೆಯಲ್ಲಿ ಶೇ.100 ದಾಖಲಾತಿ ಇರುವಂತೆ ಮಾಡಿತ್ತು.
ಆ ಮಂಗ ಈಗ ನಾಯಿಗಳ ದಾಳಿಯಿಂದ ಮೃತಪಟ್ಟಿದ್ದು, ಶಾಲೆಯ ಎಲ್ಲಾ ಮಕ್ಕಳ ಕಣ್ಣೀರಿಗೆ ಕಾರಣವಾಗಿದೆ. ಪ್ರತಿದಿನವೂ ಶಾಲೆಗೆ ಬಂದು ವಿದ್ಯಾರ್ಥಿಗಳ ಜೊತೆ ಕುಳಿತುಕೊಳ್ಳುತ್ತಿದ್ದ ಈ ಕೋತಿಗೆ ಮಕ್ಕಳು ಪ್ರೀತಿಯಿಂದ ಲಕ್ಷ್ಮಿ ಎಂದು ಹೆಸರಿಟ್ಟಿದ್ದರು. ಮಕ್ಕಳ ಜೊತೆ ಪಾಠ ಕೇಳುವುದಲ್ಲದೇ, ಊಟವನ್ನೂ ಅವರೊಡನೆಯೇ ಮಾಡುತ್ತಿತ್ತು. ಶನಿವಾರ ಮಧ್ಯಾಹ್ನ ಲಕ್ಷ್ಮಿ ಶಾಲೆಯ ಆವರಣದಲ್ಲಿ ಬೀದಿ ನಾಯಿಗಳ ಹಾವಳಿಗೆ ಬಲಿಯಾಗಿದೆ ಎಂದು ಶಿಕ್ಷಕರು ದುಃಖದಿಂದ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.