ಟಿ20 ಬೌಲಿಂಗ್ ರ್‍ಯಾಂಕಿಂಗ್: ಒಮ್ಮೆಲೇ 20 ಸ್ಥಾನ ಜಿಗಿದ ಲಸಿತ ಮಾಲಿಂಗ
Team Udayavani, Sep 8, 2019, 5:22 AM IST
ದುಬಾೖ: ನ್ಯೂಜಿಲ್ಯಾಂಡ್ ಎದುರಿನ ಅಂತಿಮ ಟಿ20 ಪಂದ್ಯದಲ್ಲಿ ಸತತ 4 ಎಸೆತಗಳಲ್ಲಿ 4 ವಿಕೆಟ್ ಉರುಳಿಸಿ, ಒಟ್ಟು 6 ರನ್ನಿಗೆ ಐವರನ್ನು ಪೆವಿಲಿಯನ್ನಿಗೆ ಅಟ್ಟಿ ಮ್ಯಾಜಿಕ್ ಮಾಡಿದ ಶ್ರೀಲಂಕಾದ ಲಸಿತ ಮಾಲಿಂಗ ನೂತನ ಟಿ20 ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಭರ್ಜರಿ ನೆಗೆತ ಕಂಡಿದ್ದಾರೆ. ಒಮ್ಮೆಲೇ 20 ಸ್ಥಾನ ಮೇಲೇರಿ 21ನೇ ಸ್ಥಾನ ಅಲಂಕರಿಸಿದ್ದಾರೆ.
ಲಸಿತ ಮಾಲಿಂಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2 ಸಲ ಸತತ 4 ಎಸೆತಗಳಲ್ಲಿ 4 ವಿಕೆಟ್ ಹಾರಿಸಿದ ವಿಶ್ವದ ಮೊದಲ ಬೌಲಿಂಗ್ ಸಾಧಕ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾಲಿಂಗ ಸಾಧಿಸಿದ 5ನೇ ಹ್ಯಾಟ್ರಿಕ್ ಇದಾಗಿದೆ. ಈ ಸಾಧನೆ ಯೊಂದಿಗೆ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್ ಉರುಳಿಸಿದ ಮೊದಲ ಬೌಲರ್ ಎಂಬ ದಾಖಲೆಗೂ ಪಾತ್ರರಾದರು. ಅವರೀಗ 76 ಟಿ20 ಪಂದ್ಯಗಳಿಂದ 104 ವಿಕೆಟ್ ಕೆಡವಿದ್ದಾರೆ.
ರಶೀದ್ , ಆಜಂ ನಂ.1
ಅಫ್ಘಾನಿಸ್ಥಾನದ ರಶೀದ್ ಖಾನ್ ಬೌಲಿಂಗ್ ರ್‍ಯಾಂಕಿಂಗ್ ಯಾದಿಯ ಅಗ್ರಸ್ಥಾನ ಅಲಂಕರಿಸಿದ್ದಾರೆ. ನ್ಯೂಜಿಲ್ಯಾಂಡ್‌ನ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಅವರದು 6 ಸ್ಥಾನಗಳ ಪ್ರಗತಿ. ಅವರೀಗ 5ನೇ ಸ್ಥಾನ ತಲುಪಿದ್ದಾರೆ. ಕುಲದೀಪ್ ಟಾಪ್-10 ಯಾದಿಯಲ್ಲಿರುವ ಭಾರತದ ಏಕೈಕ ಬೌಲರ್ (8).
ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಪಾಕಿಸ್ಥಾನದ ಬಾಬರ್ ಆಜಂ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಕಾಲಿನ್ ಮುನ್ರೊ 2ರಿಂದ 3ಕ್ಕೆ ಇಳಿದರೆ, ಗ್ಲೆನ್ ಮ್ಯಾಕ್ಸ್‌ವೆಲ್ 3ರಿಂದ 2ನೇ ಸ್ಥಾನ ತಲುಪಿದ್ದಾರೆ. ಟಾಪ್-10 ಯಾದಿಯಲ್ಲಿರುವ ಭಾರತದ ಬ್ಯಾಟ್ಸ್ ಮನ್‌ಗಳೆಂದರೆ ಕೆ.ಎಲ್. ರಾಹುಲ್ (7) ಮತ್ತು ರೋಹಿತ್ ಶರ್ಮ (10).
ಮ್ಯಾಕ್ಸ್‌ವೆಲ್ ನಂ.1 ಆಲ್‌ರೌಂಡರ್
ಆಸ್ಟ್ರೇಲಿಯದ ಗ್ಲೆನ್ ಮ್ಯಾಕ್ಸ್‌ವೆಲ್ ಟಿ20ಯ ಅಗ್ರಮಾನ್ಯ ಆಲ್‌ರೌಂಡರ್ ಆಗಿದ್ದಾರೆ (390 ಅಂಕ). ದ್ವಿತೀಯ ಸ್ಥಾನದಲ್ಲಿರುವವರು ಬಾಂಗ್ಲಾದೇಶದ ಶಕಿಬ್ ಅಲ್ ಹಸನ್ (339). ಇವರಿಬ್ಬರ ನಡುವೆ 51 ಅಂಕಗಳ ಅಂತರವಿದೆ. ಅಫ್ಘಾನಿಸ್ಥಾನದ ಮೊಹಮ್ಮದ್ ನಬಿ 3ನೇ, ಬಾಂಗ್ಲಾದ ಮಹಮದುಲ್ಲ 4ನೇ ಸ್ಥಾನದಲ್ಲಿದ್ದಾರೆ. ಅಗ್ರ ಹತ್ತರಲ್ಲಿ ಭಾರತದ ಯಾವುದೇ ಕ್ರಿಕೆಟಿಗರಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2025: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.