ಯುಎಸ್ ಓಪನ್: ಮೆಡ್ವಡೇವ್-ನಡಾಲ್@ಫೈನಲ್
Team Udayavani, Sep 8, 2019, 6:00 AM IST
ನ್ಯೂಯಾರ್ಕ್: ಸ್ಪೇನಿನ ಅನುಭವಿ ಟೆನಿಸಿಗ ರಫೆಲ್ ನಡಾಲ್ ಮತ್ತು ರಶ್ಯದ ಯುವ ಆಟಗಾರ ಡ್ಯಾನಿಲ್ ಮೆಡ್ವಡೇವ್ ಯುಎಸ್ ಓಪನ್ ಪುರುಷರ ಸಿಂಗಲ್ಸ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ನಡಾಲ್‌ಗೆ ಇದು 27ನೇ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಫೈನಲ್ ಆಗಿದ್ದು, 18 ಪ್ರಶಸ್ತಿಗಳ ದೊರೆ ಎನಿಸಿಕೊಂಡಿದ್ದಾರೆ. ಆದರೆ ಮೆಡ್ವಡೇವ್‌ಗೆ ಇದೇ ಮೊದಲ ಗ್ರ್ಯಾನ್‌ಸ್ಲಾಮ್ ಫೈನಲ್ ಅನುಭವ.
ಸೆಮಿಫೈನಲ್ ಮುಖಾ ಮುಖೀಯಲ್ಲಿ ರಫೆಲ್ ನಡಾಲ್ ಇಟಲಿಯ ಮ್ಯಾಟಿಯೊ ಬೆರೆಟಿನಿ ಅವರನ್ನು 7-6 (8-6), 6-4, 6-1 ಅಂತರದಿಂದ ಪರಾಭವಗೊಳಿಸಿದರೆ, ಡ್ಯಾನಿಲ್ ಮೆಡ್ವಡೇವ್ ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ ಅವರಿಗೆ 7-6 (7-5), 6-4, 6-3ರಿಂದ ಆಘಾತವಿಕ್ಕಿದರು.
2ನೇ ಶ್ರೇಯಾಂಕದ ರಫೆಲ್ ನಡಾಲ್ ಯುಎಸ್ ಓಪನ್‌ನಲ್ಲಿ ಆಡಲಿರುವ 5ನೇ ಫೈನಲ್ ಇದಾಗಿದೆ. 2010, 2013 ಮತ್ತು 2017ರಲ್ಲಿ ಅವರು ಕಿರೀಟ ಧರಿಸಿಕೊಂಡಿದ್ದರು. 2011ರಲ್ಲಿ ಜೊಕೋವಿಕ್‌ಗೆ ಶರಣಾಗಿ ರನ್ನರ್ ಅಪ್ ಆಗಿದ್ದರು.
6 ತಿಂಗಳ ಅಮೋಘ ಫಾರ್ಮ್
23ರ ಹರೆಯದ, 5ನೇ ಶ್ರೇಯಾಂಕದ ಡ್ಯಾನಿಲ್ ಮೆಡ್ವಡೇವ್ ಕೇವಲ ಫೈನಲ್ ಮಾತ್ರವಲ್ಲ, ಗ್ರ್ಯಾನ್‌ಸ್ಲಾಮ್ ನಾಕೌಟ್ ತಲುಪಿದ್ದೇ ಇದು ಮೊದಲು. ಆದರೆ ಕಳೆದ 6 ತಿಂಗಳಲ್ಲಿ ಈ ರಶ್ಯನ್ ಟೆನಿಸಿಗನ ಫಾರ್ಮ್ ಅಮೋಘ ಮಟ್ಟದಲ್ಲಿರುವುದು ಗಮನಾ ರ್ಹ. ಆಡಿದ 24 ಪಂದ್ಯಗಳಲ್ಲಿ 22 ಗೆಲುವು ಸಾಧಿಸಿದ್ದಾರೆ. ಸಿನ್ಸಿನಾಟಿಯಲ್ಲಿ ಚಾಂಪಿ ಯನ್ ಆಗಿ ಮೂಡಿ ಬಂದಿದ್ದಾರೆ. ಎಡವಿದ್ದು ವಾಷಿಂಗ್ಟನ್ ಮತ್ತು ಕೆನಡಾ ಕೂಟಗಳ ಫೈನಲ್‌ಗಳಲ್ಲಿ ಮಾತ್ರ.
ಮೆಡ್ವಡೇವ್ ಈ ಫೈನಲ್‌ಗಳಲ್ಲಿ ಒಂದು ಸೋಲನ್ನು ರಫೆಲ್ ನಡಾಲ್ ವಿರುದ್ಧವೇ ಅನುಭವಿಸಿದ್ದರು. ಇದು ಕಳೆದ ಮಾಂಟ್ರಿಯಲ್ ಟೂರ್ನಿಯ ಪ್ರಶಸ್ತಿ ಕಾದಾಟದಲ್ಲಿ ಎದುರಾಗಿತ್ತು. ಮುಂದಿನ ವಾರವೇ ಮೆಡ್ವಡೇವ್ ಸಿನ್ಸಿನಾಟಿಯಲ್ಲಿ ಚಾಂಪಿಯನ್ ಆದರು. ಆದರೆ ಈ ಕೂಟದಲ್ಲಿ ನಡಾಲ್ ಆಡಿರಲಿಲ್ಲ.
ಅಸಾಮಾನ್ಯ ಆಟ ಅನಿವಾರ್ಯ
“ಮೆಡ್ವಡೇವ್ ಅತ್ಯಂತ ಬಲಿಷ್ಠ ಯುವ ಆಟಗಾರನಾಗಿದ್ದಾರೆ. ಈ ಋತುವಿನಲ್ಲಂತೂ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಅವರೆದುರು ನಾನು ಅಸಾಮಾನ್ಯ ಆಟವನ್ನೇ ಆಡಬೇಕಾಗುತ್ತದೆ’ ಎಂದು ರಫೆಲ್ ನಡಾಲ್ ಫೈನಲ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನಡಾಲ್‌ಗೆ ಸಾಟಿಯೇ?
ಯುಎಸ್ ಓಪನ್ ಪಂದ್ಯಾವಳಿಯ ಫೈನಲ್‌ಗೆ ಲಗ್ಗೆ ಇಡುವ ಮೂಲಕ ಡ್ಯಾನಿಲ್ ಮೆಡ್ವಡೇವ್ ಮೈಲುಗಲ್ಲೊಂದನ್ನು ನೆಟ್ಟಿದ್ದಾರೆ. ಅವರು ಒಂದೇ ಋತುವಿನಲ್ಲಿ ವಾಷಿಂಗ್ಟನ್, ಕೆನಡಾ, ಸಿನ್ಸಿನಾಟಿ ಮತ್ತು ನ್ಯೂಯಾರ್ಕ್ ಕೂಟಗಳ ಫೈನಲ್ ತಲುಪಿ ಆ್ಯಂಡ್ರೆ ಅಗಾಸಿ, ಇವಾನ್ ಲೆಂಡ್ಲ್ ಸಾಲಿನಲ್ಲಿ ಕಾಣಿಸಿಕೊಂಡರು. ಆದರೆ ಅಂದಿನ ನ್ಯೂಯಾರ್ಕ್ ಫೈನಲ್‌ನಲ್ಲಿ ಅಗಾಸ್ಸಿ, ಲೆಂಡ್ಲ್ ಇಬ್ಬರೂ ಸೋಲನು ಭವಿಸಿದ್ದರು. ಹೀಗಾಗಿ ಫೈನಲ್‌ನಲ್ಲಿ ಮೆಡ್ವಡೇವ್ ಗೆದ್ದರೆ ಹೊಸ ಇತಿಹಾಸ ಬರೆಯ ಲಿದ್ದಾರೆ.
ಮೆಡ್ವಡೇವ್ 2005ರ ಬಳಿಕ ಗ್ರ್ಯಾನ್‌ಸ್ಲಾಮ್ ಫೈನಲ್‌ಗೆ ಏರಿದ ರಶ್ಯದ ಮೊದಲ ಟೆನಿಸಿಗನೂ ಹೌದು. ಫೈನಲ್‌ನಲ್ಲಿ ಅವರು ನಡಾಲ್‌ಗೆ ಸಾಟಿಯಾಗುವರೇ ಎಂಬುದು ಎಲ್ಲರ ಕುತೂಹಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
FIFA ಸೌಹಾರ್ದ ಫುಟ್‌ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.