![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 8, 2019, 10:05 AM IST
ಹೆಬ್ರಿ: ಇಂದು ಬೆಳಿಗ್ಗೆ ಬೀಸಿದ ಭಾರಿ ಸುಂಟರಗಾಳಿಯ ಪರಿಣಾಮವಾಗಿ ಕುಚ್ಚೂರು ಬೇಳಂಜೆ ಪರಿಸರದ ಹಲವಾರು ಮನೆಗಳ ಹೆಂಚು ಶೀಟುಗಳು ಹಾರಿ ಹೋಗಿ ಅಪಾರ ನಷ್ಟ ಸಂಭವಿಸಿದೆ.
ಬೃಹತ್ ಮರಗಳು ರಸ್ತೆಗೆ ಬಿದ್ದ ಪರಿಣಾಮ ಬೇಳಂಜೆ -ಆರ್ಡಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಬೇಳಂಜೆ ಮಲ್ಲಿಕಾರ್ಜುನ ದೇವಸ್ಥಾನದ ಎದುರಿನ ಪ್ರಾಂಗಣ ಹಾನಿಗೊಂಡಿದೆ.
ಸುಮಾರು ಅರ್ಧ ಗಂಟೆ ಬೀಸಿದ ಭಾರೀ ಸುಂಟರಗಾಳಿಯಿಂದ ಅಡಿಕೆ. ತೆಂಗು, ರಬ್ಬರ್ ತೋಟಗಳಿಗೂ ಹಾನಿ ಯಾಗಿ ನಷ್ಟ ಸಂಭವಿಸಿದೆ.
ಗ್ರಾಮದ ತಮ್ಮಯ್ಯ ನಾಯಕ್ , ಜಯಲಕ್ಷ್ಮಿ, ರಾಮ ನಾಯಕ್ , ಪುರುಷ ನಾಯಕ್ ,ಲಕ್ಷ್ಮನ್ ನಾಯಕ್ ಮುಂತಾದವರ ಮನೆಗಳಿಗೆ ತೀವ್ರವಾದ ಹಾನಿಯಾಗಿದೆ.
ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರು , ತಾಲೂಕು ಪಂಚಾಯತ್ ಅಧ್ಯಕ್ಷರು ಹಾಗೂ ಕಂದಾಯ ನಿರೀಕ್ಷಕರು ಭೇಟಿ ನೀಡಿದ್ದು ಶೀಘ್ರ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.