ತಂದೆಗೆ ಮಗಳ ಸಾವಿನ ಸುದ್ದಿ ತಿಳಿಸದೆನಿರ್ಲಕ್ಷ್ಯ ಮಾಡಿದ್ದ ಎಟಿಐ ಹೇಮಾವತಿ ಅಮಾನತು
Team Udayavani, Sep 8, 2019, 1:44 PM IST
ಗಂಗಾವತಿ: ಮಗಳ ಸಾವಿನ ಸುದ್ದಿಯನ್ನು ತಂದೆಗೆ ತಿಳಿಸದೆ ಡ್ಯೂಟಿ ಹಾಕಿದ್ದ ಈಶಾನ್ಯ ಸಾರಿಗೆ ಸಂಸ್ಥೆಯ ಗಂಗಾವತಿ ಘಟಕದ ಡಿಪೋ ನಿಯಂತ್ರಣಾಧಿಕಾರಿ ಹೇಮಾವತಿ ಅವರನ್ನು ಅಮಾನತು ಮಾಡಿ ಈಶಾನ್ಯ ಸಾರಿಗೆ ಸಂಸ್ಥೆಯ ಕೊಪ್ಪಳ ಡಿಸಿ ಮಹಮದ್ ಫಯಾಜ್ ಆದೇಶ ಮಾಡಿದ್ದಾರೆ.
ಬುಧವಾರ ಬಾಗಲಕೋಟೆ ಜಿಲ್ಲೆಯ ರಾಂಪೂರ ಗ್ರಾಮದಲ್ಲಿ ಕವಿತಾ(11) ಇವರು ಟೈಪೈಡ್ ಜ್ವರದಿಂದ ಬಳಲಿ ಮೃತಪಟ್ಟಿದ್ದರು . ಮಗಳ ಸಾವಿನ ಸುದ್ದಿಯನ್ನು ಗಂಗಾವತಿ ಡಿಪೋ ದಲ್ಲಿ ಕಂಡಕ್ಟರ್ ಆಗಿರುವ ಮಂಜುನಾಥ ಇವರಿಗೆ ತಿಳಿಸದೆ ಕೊಲ್ಲಾಪುರ ಮಾರ್ಗಕ್ಕೆ ಡ್ಯೂಟಿ ಹಾಕಲಾಗಿತ್ತು. ಕವಿತಾ ಸಾವನ್ನಪ್ಪಿರುವ ಕುರಿತು ಮನೆಯವರು ಗಂಗಾವತಿ ಬಸ್ ಡಿಪೋ ದಲ್ಲಿ ಕರ್ತವ್ಯ ದಲ್ಲಿದ್ದ ನಿಯಂತ್ರಣಾಧಿಕಾರಿ ಗಮನಕ್ಕೆ ತಂದರೂ ಕರ್ತವ್ಯ ಕ್ಕೆ ತೆರಳಿದ್ದ ಮಂಜುನಾಥ ಅವರಿಗೆ ಮಾಹಿತಿ ನೀಡಿರಲಿಲ್ಲ.
ಗುರುವಾರ ಸಂಜೆ ಡ್ಯೂಟಿ ಇಂದ ಇಳಿದ ನಂತರ ಮಂಜುನಾಥ ಗೆ ಗೊತ್ತಾಗಿ ಎಟಿಐ ಹೇಮಾವತಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಹೃದಯವಿದ್ರಾವಕ ಘಟನೆ ಪತ್ರಿಕೆ ಮತ್ತು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿತ್ತು. ನಂತರ ಈಶಾನ್ಯ ಸಾರಿಗೆ ಹಿರಿಯ ಅಧಿಕಾರಿಗಳಾದ ಡಿಟಿಒ ಗೌಡಗೇರಿ ಮತ್ತು ಡಿಟಿಒ ದೇವಾನಂದ್ ಬಿರದಾರ್ ಶುಕ್ರವಾರ ಮತ್ತು ಶನಿವಾರ ಭೇಟಿ ನೀಡಿ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಈಶಾನ್ಯ ಸಾರಿಗೆ ಸಂಸ್ಥೆಯ ಡಿಸಿ ಅವರಿಗೆ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಟಿಐ ಹೇಮಾವತಿ ಅವರನ್ನು ಅಮಾನತು ಮಾಡಲಾಗಿದೆ.
ಮಗಳ ಸಾವಿನ ಸುದ್ದಿ ತಿಳಿಸದೆ ಈಶಾನ್ಯ ಸಾರಿಗೆ ಸಂಸ್ಥೆ ಅಧಿಕಾರಿ ಎಂದು ಉದಯವಾಣಿ ದಿನಪತ್ರಿಕೆಯಲ್ಲಿ ವಿಸ್ತೃತ ವರದಿ ಪ್ರಕಟವಾಗಿತ್ತು. ಈಶಾನ್ಯ ಸಾರಿಗೆ ಸಂಸ್ಥೆ ನೌಕರರು ಮತ್ತು ಎಐಟಿಸಿಯು ಮತ್ತು ಸಿಐಟಿಯು ಕರವೇ ಕಾರ್ಯಕರ್ತರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿ ಎಟಿಐ ಅಧಿಕಾರಿ ಅಮಾನತುಗೊಳಿಸುವಂತೆ ಒತ್ತಾಯಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.