ಮಲಪ್ರಭಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರರ ರಕ್ಷಣೆ
Team Udayavani, Sep 8, 2019, 5:44 PM IST
ಗದಗ: ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ನೆರೆಯ ಪರಿಸ್ಥಿತಿ ತಲೆದೋರಿದೆ. ಪ್ರವಾಹದಿಂದ ಉಕ್ಕಿ ಹರಿಯುತ್ತಿರುವ ಮಲಪ್ರಭಾ ಪ್ರವಾಹದಲ್ಲಿ ಸಿಲುಕಿ ಕೊಚ್ಚಿಹೋಗುತ್ತಿದ್ದ ಇಬ್ಬರು ಬೈಕ್ ಸವಾರರನ್ನು ಜೆಸಿಬಿ ಸಹಾಯದಿಂದ ರಕ್ಷಿಸಲಾಗಿದೆ. ನರಗುಂದ ತಾಲೂಕಿನ ಕೊಣ್ಣೂರಿನಲ್ಲಿ ಈ ಘಟನೆ ನಡೆದಿದ್ದು ಜೆಸಿಬಿ ಚಾಲಕನ ಸಮಯ ಪ್ರಜ್ಞೆ ಈ ಇಬ್ಬರು ಯುವಕರ ಪ್ರಾಣವನ್ನು ಕಾಪಾಡುವಲ್ಲಿ ನೆರವಾಗಿದೆ.
ಬದಾಮಿ ಕಡೆಯಿಂದ ಕೊಣ್ಣೂರು ಗ್ರಾಮಕ್ಕೆ ಬೈಕ್ ನಲ್ಲಿ ಬರುತ್ತಿದ್ದ ಉಮೇಶ್ ಹಾಗೂ ಪ್ರವೀಣ ಎಂಬ ಯುವಕರು ಪ್ರವಾಹಕ್ಕೆ ತುಂಬಿ ಹರಿಯುತ್ತಿದ್ದ ನದಿಯನ್ನೂ ಲೆಕ್ಕಿಸದೇ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ಇವರಿದ್ದ ಬೈಕ್ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರ ಸಹಿತ ನೀರಿನಲ್ಲಿ ಕೊಚ್ಚಿ ಹೋಗಲಾರಂಭಿಸಿದರು.
ಇದನ್ನು ಗಮನಿಸಿದ ಅಲ್ಲೇ ಇದ್ದ ಜೆಸಿಬಿ ಚಾಲಕ ಸದ್ದಾಂ, ಜೆಸಿಬಿಯ ಎದುರು ಬಾಗವನ್ನು ಬೈಕ್ ಗೆ ಅಡ್ಡಗಟ್ಟಿದ್ದಾರೆ. ಇದನ್ನು ಹಿಡಿದುಕೊಂಡು ಈ ಯುವಕರು ನೀರಿನಿಂದ ಮೇಲೆ ಬಂದಿದ್ದಾರೆ. ಈ ರಕ್ಷಣಾ ಕಾರ್ಯದಲ್ಲಿ ಜೆಸಿಬಿ ಚಾಲಕನಿಗೆ ಸ್ಥಳದಲ್ಲಿ ನೆರೆದಿದ್ದವರೂ ಸಹ ಕೈಜೋಡಿಸಿದರು. ಇವರೆಲ್ಲರ ಸಂಘಟಿತ ಪ್ರಯತ್ನದಿಂದಾಗಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕರನ್ನು ಬೈಕ್ ಸಮೇತ ದಡ ಸೇರಿಸಲಾಯಿತು. ಜೆಸಿಬಿ ಚಾಲಕ ಸದ್ದಾಂ ಅವರ ಸಮಯ ಪ್ರಜ್ಞೆ ಇದೀಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಮಲಪ್ರಭಾ ನದಿ ನೀರು ಸರಾಗವಾಗಿ ಹರಿಯುವಂತಾಗಲು ಕೊಣ್ಣೂರಿನ ಸೇತುವೆ ಮೇಲಿನ ಮಣ್ಣು ಕಸದ ರಾಶಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಈ ಜಿಸಿಬಿ ತೊಡಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.