ಜರ್ಪಾಲ್ ಕ್ವೀನ್ ಸಂಚಾರ!
Team Udayavani, Sep 9, 2019, 5:53 AM IST
ಲೇಹ್: 48 ವರ್ಷಗಳ ಹಿಂದೆ ಪಾಕ್ ಜೊತೆಗೆ ನಡೆದ ಯುದ್ಧದಲ್ಲಿ ಭಾರತಕ್ಕೆ ಸಿಕ್ಕ ಜರ್ಪಾಲ್ ಕ್ವೀನ್ ಸೌಂದರ್ಯ ಈಗಲೂ ಒಂದಿಂಚೂ ಕುಂದಿಲ್ಲ. ಈಗಲೂ ಅದೇ ಗತ್ತಿ ನಿಂದ ಇಡೀ ದೇಶ ತಿರುಗುವ ಸಾಮರ್ಥ್ಯ ಹೊಂದಿದೆ. ತೆಳ್ಳನೆಯ ಹಾಗೂ ಹೊಳಪಿನ ಮೈಯುಳ್ಳ ಈ ವಿಲ್ಲಿಸ್ ಜೀಪ್ ಅನ್ನು ಪಾಕಿಸ್ಥಾನದ ಜರ್ಪಾಲ್ನಲ್ಲಿ ವಶಪಡಿಸಿಕೊಳ್ಳ ಲಾಗಿತ್ತು. ಹೀಗಾಗಿ ಇದಕ್ಕೆ ಜರ್ಪಾಲ್ ಕ್ವೀನ್ ಎಂದು ನಾಮಕರಣ ಮಾಡಲಾಯಿತು. ಇದನ್ನು ವಾರ್ ಟ್ರೋಫಿ ಎಂದು ರೆಜಿಮೆಂಟ್ ಪರಿಗಣಿಸಲಾಗಿದೆ.
1971ರಲ್ಲಿ ನಡೆದ ಯುದ್ಧದಲ್ಲಿ ಸಿಕ್ಕ ಈ ಜೀಪ್ ಸದ್ಯ ಲೇಹ್‌ನಲ್ಲಿದೆ. ಇಲ್ಲಿ 3 ಗ್ರೆನೆಡಿಯರ್ ರೆಜಿಮೆಂಟ್‌ನ ಕ್ಯಾಂಪ್‌ನ ಭಾಗ ವಾಗಿರುವ ಇದು, ಈ ರೆಜಿಮೆಂಟ್ ಅನ್ನು ದೇಶದ ಯಾವ ಮೂಲೆಗೆ ನಿಯೋಜಿಸಿದರೂ ಈ ಜೀಪ್ ಕೂಡ ರೆಜಿಮೆಂಟ್ ಜೊತೆಗೆ ಸಾಗು ತ್ತದೆ. 50 ವರ್ಷ ಹಳೆಯದಾದರೂ ಹೊಸ ವಾಹನದಂತೆಯೇ ಸಾಗುತ್ತದೆ. ವಿಐಪಿ ಅತಿಥಿಗಳು ಈ ರೆಜಿಮೆಂಟ್ ವ್ಯಾಪ್ತಿಗೆ ಆಗಮಿಸಿದಾಗ ಅವರಿಗೆ ಈ ಜೀಪ್ ಅನ್ನು ಪ್ರದರ್ಶಿಸಲಾಗುತ್ತದೆ. ಅಲ್ಲದೆ, ಹಿರಿಯ ಅಧಿಕಾರಿಗಳಿಗೆ ಗೌರವ ವಂದನೆ ಸಲ್ಲಿಸಲೂ ಬಳಸಲಾಗುತ್ತದೆ. ಈಗಲೂ ಇದು ಉತ್ತಮ ಸ್ಥಿತಿಯಲ್ಲಿದೆ ಎಂದು ನಿವೃತ್ತ ಕರ್ನಲ್ ಜೆ.ಎಸ್. ಧಿಲ್ಲೋನ್ ಹೇಳಿದ್ದಾರೆ.
ಯಾವ ರಾಜ್ಯಕ್ಕೆ ರೆಜಿಮೆಂಟ್ ಹೋದರೂ ಆ ರಾಜ್ಯದ ಸಾರಿಗೆ ಇಲಾಖೆಯಿಂದ ಅನು ಮತಿ ಪಡೆದು ಅಲ್ಲಿನ ರಸ್ತೆಗಳಲ್ಲೂ ಇದನ್ನು ಚಲಾವಣೆ ಮಾಡಲಾ ಗುತ್ತದೆ. ಈವರೆಗೆ ಜೈಪುರ, ಕುಪ್ವಾರಾ, ಶಿಮ್ಲಾ, ಪೂಂಚ್, ಮೀರತ್, ಫಿರೋಜ್‌ಪುರ ಸಹಿತ ಹಲವು ಪ್ರದೇಶಗಳಿಗೆ ಈ ಜೀಪ್ ಪ್ರಯಾಣಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.