ಭದ್ರತೆಗೆ ಸಿಸಿ ಕ್ಯಾಮೆರಾ ಕಣ್ಗಾವಲು
Team Udayavani, Sep 9, 2019, 11:08 AM IST
ಸೇಡಂ: ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾ ನಾಲ್ಕು ಕಡೆ ಕಾರ್ಯನಿರ್ವಹಿಸುತ್ತಿದೆ. ಚೌರಸ್ತಾ ಬಳಿ ಮೂರು ರಸ್ತೆಗಳನ್ನು ಕಾವಲು ಕಾಯುತ್ತಿರುವ ಸಿಸಿ ಟಿವಿ ಕ್ಯಾಮೆರಾ. (ಬಲಚಿತ್ರ)
ಶಿವಕುಮಾರ ಬಿ. ನಿಡಗುಂದಾ
ಸೇಡಂ: ಕಳ್ಳತನ ಪ್ರಕರಣ, ಅಡ್ಡಾದಿಡ್ಡಿ ವಾಹನ ಚಾಲನೆ, ಕುಡಿದು ವಾಹನ ನಡೆಸುವವರಿಗೆ, ಕಾನೂನು ವಿರೋಧಿ ಚಟುವಟಿಕೆಗಳಿಗೆ ಬ್ರೇಕ್ ಬೀಳಲಿದೆ. ಏಕೆಂದರೆ ಈಗ ಪಟ್ಟಣ ಸಂಪೂರ್ಣ ಸಿಸಿ ಟಿವಿ (ಕ್ಲೋಸ್ಡ್ ಸರ್ಕ್ನೂಟ್ ಟೆಲಿವಿಜನ್) ಕ್ಯಾಮೆರಾ ಕಣ್ಗಾವಲಿಗೆ ಒಳಪಟ್ಟಿದೆ.
ಎಎಸ್ಪಿ ಅಕ್ಷಯ ಹಾಕೆ, ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ಸುಶೀಲಕುಮಾರ ಪತ್ರಕರ್ತರೊಂದಿಗೆ ಸಮಾಲೋಚನೆಗೆ ಇಳಿದಾಗ ಪಟ್ಟಣದಲ್ಲಿ ಸಿಸಿಟಿ ಅಳವಡಿಸುವ ಬಗ್ಗೆ ಚರ್ಚೆ ನಡೆದಿದ್ದವು. ಇದನ್ನು ಸವಾಲಾಗಿ ಸ್ವೀಕರಿಸಿದ ಎಎಸ್ಪಿ ಅಕ್ಷಯ ಹಾಕೆ ಮೂರ್‍ನಾಲ್ಕು ದಿನಗಳಲ್ಲೇ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಮೂಲಕ ಮಾದರಿ ಕಾರ್ಯಕ್ಕೆ ಕೈ ಹಾಕಿದ್ದಾರೆ.
ಇತ್ತೀಚೆಗೆ ಕಳ್ಳತನ ಪ್ರಕರಣಗಳು ಪಟ್ಟಣದಲ್ಲಿ ಹೆಚ್ಚಾದ ಪ್ರಯುಕ್ತ ಪೊಲೀಸರಿಗೆ ತಲೆನೋವಾಗಿತ್ತು. ಈಗ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಚೌರಸ್ತಾದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಕೊತ್ತಲ ಬಸವೇಶ್ವರ ದೇವಾಲಯ ರಸ್ತೆ, ಹಳೆ ಸಿನಿಮಾ ರಸ್ತೆ, ಮಸ್ಜೀದ್ ಏರಿಯಾ ರಸ್ತೆ, ಮುಖ್ಯ ರಸ್ತೆ, ರೈಲು ನಿಲ್ದಾಣ, ಪೊಲೀಸ್ ಠಾಣೆ, ಬಸ್ ನಿಲ್ದಾಣ, ರೆಹಮತ್‌ನಗರ ರಸ್ತೆ, ಜಿ.ಕೆ. ರಸ್ತೆಯಲ್ಲಿ ಸಿಸಿ ಟಿವಿ ಕ್ಯಾಮೆರಾಗಳು ನಿಗಾ ಇಡಲಿವೆ.
ಅಪರಾಧ ಕಡಿಮೆ ಮಾಡುವ ನಿಟ್ಟಿನಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪುರಸಭೆ ಇದಕ್ಕೆ ಸಹಕಾರ ನೀಡಿದೆ. ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ಸುಶೀಲಕುಮಾರ ನಿರಂತರ ಶ್ರಮವಹಿಸಿದ್ದಾರೆ. ಊಡಗಿ ಕ್ರಾಸ್, ಜಿ.ಕೆ. ಕ್ರಾಸ್ ಸೇರಿದಂತೆ 13 ಕಡೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾಗಳು ಕೆಲಸ ಮಾಡಲಿವೆ. ಅಪಘಾತ, ಕಳ್ಳತನ, ರೌಡಿ ಚಟುವಟಿಕೆಗಳ ಮೇಲೆ ಇವು ನಿಗಾ ಇಡಲಿವೆ. ಇದರಿಂದ ಅಪರಾಧ ಪ್ರಕರಣಗಳು ಕಡಿಮೆಯಾಗಲಿವೆ. ಇದೇ ರೀತಿ ಚಿಂಚೋಳಿಯಲ್ಲೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.
•ಅಕ್ಷಯ ಹಾಕೆ,
ಎಎಸ್ಪಿ, ಉಪ ವಿಭಾಗ, ಚಿಂಚೋಳಿ
ಪೊಲೀಸರ ಕಾರ್ಯಕ್ಕೆ ಶ್ಲಾಘನೆ
ಪೊಲೀಸರ ಈ ಕಾರ್ಯ ಪ್ರಶಂಸನೀಯ. ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಯಿಂದ ಕಳ್ಳರು, ಡಕಾಯಿತರಲ್ಲದೇ ಅಪಘಾತ, ಕ್ಷುಲ್ಲಕ ಕಾರಣಗಳಿಗೆ ನಡೆಯುವ ಜಗಳಗಳ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಬಹುದು. ವಿನಾಕಾರಣ ನಡೆಯುವ ಜಗಳಗಳು ಸಿಸಿ ಕ್ಯಾಮೆರಾ ಅಳವಡಿಕೆಯಿಂದ ಕಡಿಮೆಯಾಗಲಿವೆ.
• ರಮೇಶ ತಾಪಾಡಿಯಾ,
ಉದ್ಯಮಿ, ಸೇಡಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.