ಜಾಧವ ಗೆಲ್ಲಿಸುವಲ್ಲಿ ಚಿಂಚನಸೂರ ಪಾತ್ರ ಪ್ರಮುಖ
ಚಿಂಚನಸೂರಗೆ ಸೂಕ್ತ ಸ್ಥಾನಮಾನ: ಸಾಧ್ವಿ ನಿರಂಜನ್ ವಿಶ್ವಾಸ ಟೋಕ್ರಿ ಸಮುದಾಯದಿಂದ ಅಭಿನಂದನೆ
Team Udayavani, Sep 9, 2019, 12:02 PM IST
ಹುಮನಾಬಾದ: ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರಿಗೆ ನಾಗಭೂಷಣ ಸಂಗಮ ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು.
ಹುಮನಾಬಾದ: ಟೋಕ್ರಿ ಕೋಲಿ ಸಮಾಜಕ್ಕೆ ಎಸ್‌ಟಿ ಮಾನ್ಯತೆ ನೀಡಬೇಕೆಂಬ ಬೇಡಿಕೆ ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದು, ಬರುವ ಚಳಿಗಾಲ ಅಧಿವೇಶನದಲ್ಲಿ ಇದನ್ನು ಜಾರಿಗೆ ತರುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮೇಲೆ ಒತ್ತಡ ಹೇರಿ ಯಶಸ್ವಿಗೊಳಿಸುವುದಾಗಿ ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಜಿಲ್ಲಾ ಟೋಕ್ರಿ ಕೋಳಿ ಸಮಾಜ, ಗಂಗಾಮತ ಕೋಲಿ, ಕಬ್ಬಲಿಗ ಸಮಾಜ ಸೇರಿದಂತೆ ಟೋಕ್ರಿ ಸಮುದಾಯಕ್ಕೆ ಒಳಪಡುವ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಯಾರಿಗೆ ಬಡತನದ ಅನುಭವ ಇರುತ್ತದೋ ಅವರಿಂದಲೇ ಬಡವರ ಉದ್ಧಾರ ಸಾಧ್ಯ. ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತ ಕಾಂಗ್ರೆಸ್ ಮುಖಂಡರಿಗೆ ಬಡವರ ನೋವು ಗೊತ್ತಾಗದು ಎಂದರು.
ಸಚಿವ ಅರ್ಜುನ ಮುಂಡಾ ಅವರೊಂದಿಗೂ ಈ ಕುರಿತು ಚರ್ಚಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮೋದಿ ಏಕಾಂಗಿ, ನಾನು ಏಕಾಂಗಿ, ರಾಜ್ಯದ ಟೋಕ್ರಿ ಕೋಲಿ ಸಮಾಜದ ನಾಯಕ ಬಾಬುರಾವ್ ಚಿಂಚನಸೂರ ಸಂಸಾರಿಯಾಗಿದ್ದರೂ ಆಸೆ ಇಲ್ಲದೇ ಸಮುದಾಯದ ಏಳ್ಗೆಗೆ ಹಗಲಿರುಳು ಶ್ರಮಿಸುತ್ತಿರುವುದು ಪ್ರಶಂಸನೀಯ ಎಂದರು.
ಬಿಎಸ್‌ವೈ-ಮೋದಿ ಭರವಸೆ: ರಾಜ್ಯದಲ್ಲಿ 25 ಲೋಕಸಭೆ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಅದರಲ್ಲೂ ವಿಶೇಷವಾಗಿ ನಾಲ್ಕು ದಶಕಗಳಿಂದ ಕೈ ವಶದಲ್ಲಿದ್ದ ಹಿರಿಯ ಕಾಂಗ್ರೆಸ್ ಡಾ| ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ, ಡಾ| ಉಮೇಶ ಜಾಧವ ಅವರನ್ನು ಗೆಲ್ಲಿಸುವುಲ್ಲಿ ಚಿಂಚನಸೂರ ಪಾತ್ರ ಅತ್ಯಂತ ಪ್ರಮುಖವಾಗಿದೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಅವರು ಚಿಂಚನಸೂರ್ ಅವರಿಗೆ ಸೂಕ್ತ ಸ್ಥಾನಮಾನ ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕರ್ನಾಟಕ ರಾಜ್ಯಕೆ ಟೋಕ್ರಿ ಕೋಲಿ ಸಮಾಜಕೆ ಲಿಯೇ ನಾಯಕ ಮಿಲಾ ಹೈ! ಮೈ ಯಾದ್ ರಕೂಂಗಾ’ ಎಂದು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಲಬುರ್ಗಿಗೆ ಬಂದಾಗ ಬಹಿರಂಗ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಅವರ ಮೇಲೆ ನನಗೆ ವಿಶ್ವಾಸವಿದೆ. ಶೇ.46ರಷ್ಟು ಇರುವ ಕೋಲಿ ಸಮಾಜದ ಜನರು ಅಶಿಕ್ಷಿತ ಮತ್ತು ನಿರುದ್ಯೋಗಿಗಳಾಗಿದ್ದಾರೆ. ಎಸ್‌ಟಿ ಮಾನ್ಯತೆ ದಕ್ಕಿದರೆ ನಮ್ಮವರು ಮೋದಿ ಮತ್ತು ನಿರಂಜನ್ ಜ್ಯೋತಿ ಅವರ ಭಾವಚಿತ್ರ ಪ್ರತಿ ಮನೆಯಲ್ಲಿಟ್ಟು ಪೂಜಿಸುತ್ತಾರೆ ಎಂದರು. ಹಳ್ಳಿಖೇಡ(ಕೆ) ದತ್ತಾತ್ರೇಯ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಂತಪ್ಪ ಕೋಡಿ, ಶಾಲಿನಿ ವಾಡೇಕರ್, ಬಸವರಾಜ ಬಗಲಿ, ಲಚ್ಚಪ್ಪ ಜಮಾದಾರ, ಹಣಮಂತ ಮಡ್ಡಿ, ಲಕ್ಷ್ಮಣ ಔಂಟಿ, ಗಂಗಾಮತ ಟೋಕ್ರಿ ಕೋಲಿ ಸಮಾಜ ಅಧ್ಯಕ್ಷ ನಾಗಭೂಷಣ ಸಂಗಮ್, ದಯಾನಂದ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
State Government Programme: ರೈತರಿಂದ ದೂರ ಸರಿದ ಕೃಷಿ ಯಂತ್ರಧಾರೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.