ಯುಪಿ ಯೋಧಾಗೆ ಶರಣಾದ ಗುಜರಾತ್
ತಮಿಳ್ ವಿರುದ್ಧ ಪಾಟ್ನಾಕ್ಕೆ 51-25 ಭರ್ಜರಿ ಗೆಲುವು
Team Udayavani, Sep 10, 2019, 11:30 PM IST
ಕೋಲ್ಕತಾ: ಪ್ರೊ ಕಬಡ್ಡಿ ಕೋಲ್ಕತಾ ಚರಣದ ಸೋಮವಾರದ ಪಂದ್ಯದಲ್ಲಿ ಯುಪಿ ಯೋಧಾ ತಂಡ 33-26 ಅಂಕಗಳಿಂದ ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡವನ್ನು ಸೋಲಿಸಿದೆ. ಈ ಗೆಲುವಿನೊಂದಿಗೆ ಯುಪಿ ಪರಿಸ್ಥಿತಿ ತುಸು ಸುಧಾರಿಸಿದೆ. ಪ್ಲೇ-ಆಫ್ ಪೈಪೋಟಿಯಲ್ಲಿ ಅದು ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದೆ (42 ಅಂಕ). ಪರಾಜಿತ ಗುಜರಾತ್ ತಂಡದ ಪರಿಸ್ಥಿತಿ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿದ್ದು, ಪ್ಲೇ-ಆಫ್ ಸಾಧ್ಯತೆ ಕ್ಷೀಣಿಸಿದೆ (34 ಅಂಕ).
ದಿನದ ದ್ವಿತೀಯ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡ 51-25 ಭರ್ಜರಿ ಅಂತರದಿಂದ ತಮಿಳ್ ತಲೈವಾಸ್ ತಂಡವನ್ನು ಮಣಿಸಿತು. ಆದರೆ ಕೊನೆಯ 2 ಸ್ಥಾನದಲ್ಲಿರುವ ಈ ಎರಡೂ ತಂಡಗಳಿಗೆ ಪ್ಲೇ-ಆಫ್ ಪ್ರವೇಶ ಬಹುತೇಕ ಮುಚ್ಚಿದೆ.
ಯುಪಿ ಮೇಲುಗೈ
ಗುಜರಾತ್ ವಿರುದ್ಧ ಯುಪಿ ಮೊದಲಿನಿಂದಲೇ ಮೇಲುಗೈ ಸಾಧಿಸುತ್ತ ಬಂತು. ಗುಜರಾತ್ ಸಂಘಟಿತ ಹೋರಾಟದದಲ್ಲಿ ತೀವ್ರ ಹಿನ್ನಡೆ ಕಂಡಿತು. ದಾಳಿ ವಿಭಾಗದಲ್ಲಿ ಸಚಿನ್ ಏಕಾಂಗಿಯಾಗಿ ಹೋರಾಟ ನಡೆಸಿದರು. ಅವರು 11 ಬಾರಿ ಎದುರಾಳಿ ಕೋಟೆಯೊಳಗೆ ನುಗ್ಗಿ 10 ಅಂಕ ಗಳಿಸಿದರು. ಸುನೀಲ್ ಕುಮಾರ್ ಎಲ್ಲ ವಿಭಾಗಗಳಲ್ಲೂ ಅತ್ಯುತ್ತಮ ಆಟವಾಡಿದರು. ಅವರು 6 ಬಾರಿ ದಾಳಿ ನಡೆಸಿ, 7 ಅಂಕ ಗಳಿಸಿದರು. ಆದರೆ ಇವರಿಗೆ ಬೇರೆ ಆಟಗಾರರ ನೆರವು ಲಭಿಸದ ಕಾರಣ ತಂಡ ಸೋಲು ಕಾಣಬೇಕಾಯಿತು.
ವಿಜೇತ ಯುಪಿ ಪರ ಶ್ರೀಕಾಂತ್ ಜಾಧವ್ ಉತ್ತಮ ದಾಳಿ ನಡೆಸಿದರು. ಅವರು 13 ಯತ್ನಗಳಲ್ಲಿ 6 ಅಂಕ ತಂದು ಕೊಟ್ಟರು. ರಕ್ಷಣೆಯಲ್ಲಿ ಸುಮಿತ್ ಯಶಸ್ವಿ ಪ್ರದರ್ಶನ ನೀಡಿದರು. ಇವರು 8 ಯತ್ನಗಳಲ್ಲಿ 5 ಅಂಕ ಗಳಿಸಿದರು. ತಂಡದ ಸಂಘಟಿತ ಆಟ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Khel Ratna Award: ನನ್ನಿಂದಲೇ ತಪ್ಪಾಗಿರಬಹುದು: ಮನು ಭಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.