ರ್‍ಯಾಂಕಿಂಗ್: 5ಕ್ಕೆ ನೆಗೆದ ಬಿಯಾಂಕಾ : ಆ್ಯಶ್ಲಿ ಬಾರ್ಟಿ ಮರಳಿ ನಂಬರ್ 1
Team Udayavani, Sep 10, 2019, 5:10 AM IST
ನ್ಯೂಯಾರ್ಕ್: ಒಂದು ವರ್ಷದ ಹಿಂದೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 200ನೇ ಸ್ಥಾನಲ್ಲಿದ್ದ ಕೆನಡಿಯನ್ ಆಟಗಾರ್ತಿ ಬಿಯಾಂಕಾ ಆ್ಯಂಡ್ರಿಸ್ಕಾ ಈಗ ಮೊದಲ ಸಲ ಟಾಪ್-5 ಯಾದಿಯನ್ನು ಅಲಂಕರಿಸಿದ್ದಾರೆ.
ಇದಕ್ಕೆ ಕಾರಣ, ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್ ಗೆಲುವು.
ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್ ಅವರನ್ನು ಮಣಿಸಿ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನೆತ್ತಿದ ಬಿಯಾಂಕಾ ಈಗ 10 ಸ್ಥಾನ ನೆಗೆದು 5ಕ್ಕೆ ಬಂದಿದ್ದಾರೆ.
ಹಾಲಿ ಚಾಂಪಿಯನ್ ನವೋಮಿ ಒಸಾಕಾ ಪರಾಭವಗೊಂಡಿದ್ದರಿಂದ ನಂಬರ್ 1 ಪಟ್ಟವನ್ನು ಕಳೆದುಕೊಂಡು 4ಕ್ಕೆ ಇಳಿದಿದ್ದಾರೆ. ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಮತ್ತೆ ನಂ.1 ಆಟಗಾರ್ತಿಯಾಗಿ ಮೂಡಿ ಬಂದಿದ್ದಾರೆ. ಕ್ಯಾರೋಲಿನಾ ಪ್ಲಿಸ್ಕೋವಾಗೆ 2ನೇ ಸ್ಥಾನ ಲಭಿಸಿದೆ. ಆದರೆ ಬಾರ್ಟಿ-ಪ್ಲಿಸ್ಕೋವಾ ನಡುವಿನ ಅಂಕಗಳ ಅಂತರ 400ರಷ್ಟೂ ಇಲ್ಲ.
ತೃತೀಯ ಸ್ಥಾನಕ್ಕೇರಿದ ಎಲಿನಾ ಸ್ವಿಟೋಲಿನಾ ಅವರದು 2 ಸ್ಥಾನಗಳ ಜಿಗಿತ. ಸಿಮೋನಾ ಹಾಲೆಪ್‌ಗೆ 2 ಸ್ಥಾನ ನಷ್ಟವಾಗಿದೆ. ಪೆಟ್ರಾ ಕ್ವಿಟೋವಾ, ಕಿಕಿ ಬರ್ಟೆನ್ಸ್, ಸೆರೆನಾ ವಿಲಿಯಮ್ಸ್ ಒಂದೊಂದು ಸ್ಥಾನ ಕೆಳಕ್ಕೆ ಇಳಿದಿದ್ದಾರೆ. ಬೆಲಿಂಡಾ ಬೆನ್ಸಿಕ್ 2 ಸ್ಥಾನಗಳ ಪ್ರಗತಿಯೊಂದಿಗೆ 10ನೇ ಸ್ಥಾನಿಯಾಗಿದ್ದಾರೆ.
ಸುಮಿತ್ ಜೀವನಶ್ರೇಷ್ಠ 174 ಯುಎಸ್ ಓಪನ್ ಮೊದಲ ಸುತ್ತಿನಲ್ಲಿ ರೋಜರ್ ಫೆಡರರ್‌ಗೆ ಬೆವರಿಳಿಸಿದ ಭಾರತದ ಸುಮಿತ್ ನಾಗಲ್ ನೂತನ ಎಟಿಪಿ ರ್‍ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 174ನೇ ಸ್ಥಾನ ಪಡೆದಿದ್ದಾರೆ. ಪ್ರಜ್ಞೆàಶ್ ಗುಣೇಶ್ವರನ್ 3 ಸ್ಥಾನಗಳ ಪ್ರಗತಿ ಸಾಧಿಸಿ 85ಕ್ಕೆ ತಲುಪಿದ್ದಾರೆ. ರಾಮ್‌ಕುಮಾರ್ ರಾಮನಾಥನ್ ಒಂದು ಸ್ಥಾನ ಮೇಲೇರಿದ್ದಾರೆ (176).
ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ 4 ಸ್ಥಾನ ಕುಸಿದರೆ, ದಿವಿಜ್ ಶರಣ್ 49ನೇ, ಲಿಯಾಂಡರ್ ಪೇಸ್ 78ನೇ ಸ್ಥಾನದಲ್ಲಿದ್ದಾರೆ. ವನಿತಾ ಸಿಂಗಲ್ಸ್‌ನಲ್ಲಿ ಅಂಕಿತಾ ರೈನಾ ಅವರೇ ಭಾರತದ ಟಾಪ್ ಆಟಗಾರ್ತಿ (194).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.