ಹೆದ್ದಾರಿ ಸವಾರಿ-ಹುಷಾರಾಗಿ ಸಾಗಿರಿ !
ಪಡೀಲ್ ಸರ್ಕಲ್ ಇಲ್ಲಿ ಎಲ್ಲ ಕಡೆಯಿಂದಲೂ ವಾಹನಗಳೇ. ಹಾಗಾಗಿ ಸುಗಮ ಸಂಚಾರ ಕೇಳುವಂತಿಲ್ಲ.
Team Udayavani, Sep 10, 2019, 6:00 AM IST
ಅಭಿವೃದ್ಧಿಯ ಪ್ರತೀಕವಾಗಿರುವಂಥವು ನಮ್ಮ ರಸ್ತೆಗಳು. ಆದರೆ ಅವುಗಳೇ ಇಂದು ಜನರ ಪ್ರಾಣನಷ್ಟಕ್ಕೆ ಕಾರಣವಾಗುತ್ತಿವೆ ಎಂದರೆ ಆತಂಕದ ಸಂಗತಿಯೇ. ಉದಯವಾಣಿಯ ಈ ವಾಸ್ತವ ವರದಿಯ ಉದ್ದೇಶ ಒಂದೇ-ನಮ್ಮ ರಾಷ್ಟ್ರೀಯ ಹೆದ್ದಾರಿಗಳು ಎಷ್ಟು ಸುರಕ್ಷಿತವಾಗಿವೆ ಎಂಬುದನ್ನು ನಮ್ಮ ಸಂಸದರಿಗೆ, ಶಾಸಕರಿಗೆ, ಉಳಿದ ಜನ ಪ್ರತಿನಿಧಿಗಳಿಗೆ, ರಾಷ್ಟ್ರೀಯ ಇಲಾಖೆ ಅಧಿಕಾರಿಗಳಿಗೆ, ಜಿಲ್ಲಾಡಳಿತಕ್ಕೆ ಮನದಟ್ಟು ಮಾಡಿಕೊಡುವುದು. ಆಗಲಾದರೂ ನಮ್ಮ ರಸ್ತೆಗಳು ಒಂದಿಷ್ಟು ಸುರಕ್ಷಿತವಾಗಬಲ್ಲವೋ ಎಂಬುದನ್ನು ಕಾದು ನೋಡಬೇಕು. ತಲಪಾಡಿಯಿಂದ ಶಿರೂರುವರೆಗಿನ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 (ಎನ್ ಎಚ್ 66) ರಲ್ಲಿನ ಪ್ರತಿ ಸಮಸ್ಯೆಗಳಿಗೂ ಕನ್ನಡಿ ಹಿಡಿಯುವ ಮಹತ್ವದ ವಾಸ್ತವ ವರದಿ ಸರಣಿ ಇಂದಿನಿಂದ.
ಮಂಗಳೂರು: ನಿಮಗೆ ಈ ಸಂಗತಿ ಗೊತ್ತಿರಬಹುದು. ಇಂದು ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುತ್ತಿರುವವರ ಸಂಖ್ಯೆಯಲ್ಲಿ ಯುವಜನರೇ ಹೆಚ್ಚು. ಒಂದು ವರ್ಷದಲ್ಲಿ ಘಟಿಸುವ ಅಪಘಾತಗಳಲ್ಲಿ ಮರಣಕ್ಕೀಡಾಗುವ 9 ಸಾವಿರ ಮಂದಿ 18 ವರ್ಷದೊಳಗಿನವರು.
ರಾಷ್ಟ್ರೀಯ ಹೆದ್ದಾರಿಗಳಿರ ಬಹುದು ಅಥವಾ ಇನ್ಯಾವುದೇ ರಾಜ್ಯ ಹೆದ್ದಾರಿ ಅಥವಾ ಒಳ ರಸ್ತೆಗಳಿರ ಬಹುದು -ರಸ್ತೆ ಅಪಘಾತ ಗಳು ಸಾಮಾನ್ಯ ಎನ್ನುವಂತಾ ಗಿವೆ. ಆದರೆ ನಮ್ಮ ಕಣ್ಣಮುಂದೆಯೇ ಘಟಿಸು ತ್ತಿರುವ ಇಂಥ ಸರಣಿ ರಸ್ತೆ ಅಪಘಾತಗಳಿಂದ ಆಗುವ ಪ್ರಾಣ ನಷ್ಟ, ಆಘಾತ ಏನೆಂಬುದು ಅಪಘಾತ ಸಂತ್ರಸ್ತ ಕುಟುಂಬ ಗಳಿಗಷ್ಟೇ ಗೊತ್ತು. ಹೀಗಿರುವಾಗ, ರಸ್ತೆ ಅಪಘಾತಗಳನ್ನು ತಪ್ಪಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕಾದುದು ಇಂದಿನ ತುರ್ತು.
ದೇಶದಲ್ಲಿ ಸುಮಾರು 56 ಲಕ್ಷ ಕಿ.ಮೀ. ಉದ್ದದ ರಸ್ತೆಯಿದ್ದು, ಆ ಪೈಕಿ 1.01 ಲಕ್ಷ ಕಿ.ಮೀ. ಉದ್ದದ ಹೆದ್ದಾರಿ ಇದೆ. ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯ 2017ರ ಅಂಕಿ-ಅಂಶದ ಪ್ರಕಾರ, ಆ ವರ್ಷದಲ್ಲಿ ಒಟ್ಟು 4,64,910 ಅಪಘಾತಗಳಾಗಿದ್ದು, 1.48 ಲಕ್ಷ ಮಂದಿ ಪ್ರಾಣ ಕಳೆದುಕೊಂಡರು. ಸುಮಾರು 4,70,975 ಮಂದಿ ಗಾಯಗೊಂಡರು. ಕರ್ನಾಟಕದಲ್ಲಿಯೂ 42,542 ಅಪಘಾತ ಗಳಾಗಿದ್ದು, 10,609 ಮಂದಿ ಪ್ರಾಣ ಕಳೆದುಕೊಂಡರೆ, 52,961 ಮಂದಿ ಗಾಯಗೊಂಡರು. ಇನ್ನು ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ 14,217 ಅಪಘಾತಗಳಲ್ಲಿ 3,792 ಮಂದಿ ಪ್ರಾಣ ಕಳೆದು ಕೊಂಡರೆ, 17,242 ಮಂದಿ ಗಾಯಗೊಂಡರು. ರಾಜ್ಯ ಹೆದ್ದಾರಿಗಳಲ್ಲಿಯೂ 11,193 ಅಪಘಾತ ಗಳಾಗಿದ್ದು, 3,102 ಮಂದಿ ಸತ್ತಿದ್ದಾರೆ. ಉಳಿದ ರಸ್ತೆಗಳಲ್ಲಿ ಒಟ್ಟು 20,816 ಅಪಘಾತಗಳು ದಾಖಲಾಗಿದ್ದು, 3,715 ಮಂದಿ ಸಾವನ್ನಪ್ಪಿದ್ದಾರೆ.
ದಕ್ಷಿಣ ಕನ್ನಡದಲ್ಲೂ 948 ಅಪಘಾತ
ರಾಷ್ಟ್ರೀಯ ಹೆದ್ದಾರಿಗಳ ಪೈಕಿ ಹಾಸನದಿಂದ ಮಂಗಳೂರುವರೆಗಿನ ಎನ್‌ಎಚ್-75 ಹಾಗೂ ತಲಪಾಡಿಯಿಂದ ಶಿರೂರು ವರೆಗಿನ ಎನ್‌ಎಚ್-66 ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಹಾದು ಹೋಗಿರುವ ಎರಡು ಪ್ರಮುಖ ರಸ್ತೆಗಳು. ಜತೆಗೆ, ಕುಲಶೇಖರದಿಂದ ಮೂಡುಬಿದಿರೆ ಮೂಲಕ 169 ರಾಷ್ಟ್ರೀಯ ಹೆದ್ದಾರಿ ಕೂಡ ಹಾದು ಹೋಗುತ್ತದೆ. ಜಿಲ್ಲೆಯಲ್ಲಿ ಒಟ್ಟು ಸುಮಾರು 177 ಕಿ.ಮೀ. ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು 142 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ.
ಆದರೆ ಬೆಂಗಳೂರು-ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-75, ಕೇರಳದಿಂದ ಮಂಗಳೂರಿಗೆ ಹಾಗೂ ಉಡುಪಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಎನ್‌ಎಚ್ -66ರಲ್ಲಿ ಅಪಘಾತ ಗಳ ಸಂಖ್ಯೆ ಹೆಚ್ಚುತ್ತಿದೆ. ಇದು ಆತಂಕ ಸೃಷ್ಟಿಸಿದೆ.
ಸರಕಾರದ ಅಂಕಿ-ಅಂಶದ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2018ರಲ್ಲಿ ಒಟ್ಟು 948 ಅಪಘಾತಗಳು ಸಂಭವಿಸಿದ್ದರೆ, ಆ ಪೈಕಿ 420 ಅಪಘಾತಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿವೆ.
ಕಳೆದ ವರ್ಷ ಜಿಲ್ಲೆಯಲ್ಲಿ 83 ಮಂದಿ ಪ್ರಾಣ ಕಳೆದುಕೊಂಡರು. 462 ಮಂದಿ ಗಾಯಗೊಂಡರು. ಈ ಅಪಘಾತಗಳ ಪೈಕಿ 81 ಮರಣಾಂತಿಕ ಹಾಗೂ 339 ಅಪಘಾತಗಳು ಮರಣಾಂತಿಕವಲ್ಲದ ಅಪಘಾತಗಳಾಗಿವೆ. ಜಿಲ್ಲೆಯಲ್ಲಿ ಹಾದು ಹೋದ 177 ಕಿ. ಮೀ. ವ್ಯಾಪ್ತಿಯಲ್ಲಿ ಘಟಿಸುತ್ತಿರುವ ಸಮಸ್ಯೆಯಿದು.
ಈ ಹಿನ್ನೆಲೆಯಲ್ಲೇ ಜಿಲ್ಲೆಯಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಘಟಿಸುತ್ತಿರುವ ಅಪಘಾತಗಳಿಗೆ ಕಾರಣಗಳೇನು? ಈ ಭಾಗದ ಹೆದ್ದಾರಿಗಳಲ್ಲಿ ಅವೈಜ್ಞಾನಿಕ ಕಾಮಗಾರಿ ಹೇಗೆ ಅಪಘಾತಕ್ಕೆ ಕಾರಣವಾಗುತ್ತಿವೆ, ಎಲ್ಲೆಲ್ಲಿ ಅಪಘಾತ ವಲಯಗಳಿವೆ, ಸಂಚಾರ ನಿಯಮ ಉಲ್ಲಂಘನೆಯೂ ಎಷ್ಟರ ಕೊಡುಗೆ ನೀಡುತ್ತಿದೆ-ಎಂಬಿತ್ಯಾದಿ ವಾಸ್ತವಾಂಶವನ್ನು ಅರಿಯಬೇಕಿದೆ.
ಅದರಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ “ಉದಯವಾಣಿ’ ತಂಡವು ಎನ್‌ಎಚ್-75ರಲ್ಲಿ ನಂತೂರಿನಿಂದ ಕೊಕ್ಕಡದ ಕ್ರಾಸ್‌ವರೆಗಿನ ಸುಮಾರು 60 ಕಿ.ಮೀ. ರಸ್ತೆ ಹಾಗೂ ಎನ್‌ಎಚ್-66ರಲ್ಲಿ ತಲಪಾಡಿಯಿಂದ ಹೆಜಮಾಡಿ ಟೋಲ್‌ವರೆಗಿನ ಸುಮಾರು 30 ಕಿ. ಮೀ. ಹೆದ್ದಾರಿಯಲ್ಲಿ ಪ್ರಯಾಣಿಸಿ ವಸ್ತುಸ್ಥಿತಿಯನ್ನು ಓದುಗರ ಮುಂದಿಡುವ ಪ್ರಯತ್ನ ಮಾಡಿದೆ. ಇದು ಮೊದಲ ಕಂತು. ಎರಡನೇ ಕಂತಿನಲ್ಲಿ ಹೆಜಮಾಡಿಯಿಂದ ಕುಂದಾಪುರ ಹಾಗೂ ಮೂರನೇ ಕಂತಿನಲ್ಲಿ ಕುಂದಾಪುರದಿಂದ ಶಿರೂರುವರೆಗಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಓದುಗರ ಮುಂದಿಡಲಿದೆ ನಮ್ಮ ತಂಡ.
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯ, ಹೆದ್ದಾರಿ ನಿರ್ವಹಣೆ ಹೊಣೆ ಹೊತ್ತಿರುವ ಗುತ್ತಿಗೆ ಕಂಪೆನಿಗಳ ಬೇಜವಾಬ್ದಾರಿ ತನ ಹಾಗೂ ರಾಜಕೀಯ ಇಚ್ಛಾಶಕ್ತಿ ಕೊರತೆಯನ್ನು ಜನರ ಮುಂದಿಡುವುದರ ಜತೆಗೆ, ನಾಗರಿಕ ರಾದ ನಾವೂ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸುವ ಮೂಲಕ ಅಪಘಾತ ಗಳನ್ನು ಹೇಗೆ ತಡೆಯಬಹುದು ಎಂಬುದನ್ನೂ ಇಲ್ಲಿ ವಿವರಿಸುವುದು ಉದಯವಾಣಿಯ ಆಶಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.