81 ವರ್ಷದ ಮುದುಕನಂತೆ ವೇಷ ಧರಿಸಿ ವಿಮಾನವೇರಲು ಬಂದ 32ರ ಯುವಕ
Team Udayavani, Sep 10, 2019, 10:13 AM IST
ಹೊಸದಿಲ್ಲಿ: 32ರ ಹರೆಯದ ಯುವಕನೋರ್ವ 81 ವರ್ಷದ ಮುದುಕನಂತೆ ವೇಷ ಧರಿಸಿ ನ್ಯೂಯಾರ್ಕ್ ನಗರಕ್ಕೆ ಪ್ರಯಾಣಿಸಲೆತ್ನಿಸಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಘಟನೆ ಹೊಸದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಜಯೇಶ್ ಪಟೇಲ್ ವಿಮಾನ ನಿಲ್ದಾಣ ಭಧ್ರತಾ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದವ. ಈತ 81 ವರ್ಷದ ಆರ್ಮಿಕ್ ಸಿಂಗ್ ನಂತೆ ವೇಷ ಧರಿಸಿ ವಿಮಾನ ನಿಲ್ದಾಣಕ್ಕೆ ಬಂದಿದ್ದ.
ವೃದ್ಧರ ರೀತಿ ಗಡ್ಡ- ಕೂದಲಿಗೆ ಬಿಳಿ ಬಣ್ಣ ಬಳಿದು, ತಲೆಗೆ ಮುಂಡಾಸು ಸುತ್ತಿ, ಅಶಕ್ತರಂತೆ ವ್ಹೀಲ್ ಚೇರ್ ನಲ್ಲಿ ಕುಳಿತುಕೊಂಡು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ನಕಲಿ ಪಾಸ್ ಪೋರ್ಟ್ ಬಳಸಿ ಅಮೇರಿಕಾದ ನ್ಯೂಯಾರ್ಕ್ ಗೆ ಹಾರಲೆತ್ನಿಸಿದ ಈತನನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.
ವ್ಹೀಲ್ ಚೇರ್ ನಲ್ಲಿ ಬಂದ ಆಸಾಮಿಯನ್ನು ಪರಿಶೀಲನೆಗಾಗಿ ನಿಲ್ಲುವಂತೆ ಅಧಿಕಾರಿಗಳು ಹೇಳಿದಾಗ ಆತ ನಿರಾಕರಿಸಿದ್ದ. ಪಾಸ್ ಪೋರ್ಟ್ ಪ್ರಕಾರ ಆತನ ಹುಟ್ಟಿದ ದಿನಾಂಕ 1 ಫೆಬ್ರವರಿ 1938. ಆದರೆ ಆತನ ಚರ್ಮದಲ್ಲಿ ಯಾವುದೇ ಸುಕ್ಕು ಇರಲಿಲ್ಲ ಮತ್ತು ಧ್ವನಿ ಕೂಡಾ ವೃದ್ಧರಂತೆ ಇರಲಿಲ್ಲ. ಇದರಿಂದ ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.