ಓಡುವ ಮೋಡಗಳೇ ನಿಲ್ಲಿ
Team Udayavani, Sep 10, 2019, 10:42 AM IST
ಆಳಂದ: ಆಕಾಶದಲ್ಲಿ ಕಂಡು ಬಂದ ಕಾರ್ಮೋಡ.
ಆಳಂದ: ಇಂದಲ್ಲ ನಾಳೆ ವರುಣದೇವ ಕೃಪೆ ತೋರುತ್ತಾನೆ ಎಂದು ನಿತ್ಯ ಮೋಡ ಮುಸುಕಿದ ವಾತಾವರಣದಲ್ಲೇ ಮುಗಿಲಿನತ್ತ ಚಿತ್ತ ಇಡುತ್ತಿರುವ ರೈತರಿಗೆ ಮಳೆ ಬಾರದಿರುವುದರಿಂದ ಚಿಂತೆ ಶುರುವಾಗಿದೆ.
ವಾರದಿಂದ ಆಕಾಶದಲ್ಲಿ ಮೋಡ ಮುಸುಕಿದ ವಾತಾವರಣ ಕಂಡರೂ ತುಂತುರು ಮಳೆ ಬಿಟ್ಟರೆ, ಭೂಮಿ ತೇವಾಂಶ ಆಗುವಷ್ಟು ಮಳೆ ಬರುತ್ತಿಲ್ಲ. ಇದರಿಂದ ಬಿತ್ತನೆಯಾದ ಬೆಳೆ ಗತಿಯೇನಪ್ಪ ಎಂದು ಕೈಚೆಲ್ಲಿ ಕುಳಿತಿದ್ದಾರೆ.
ರಾತ್ರಿ, ಹಗಲು ಆಕಾಶದಲ್ಲಿ ಮುಗಿಲು ಕಿತ್ತು ಬೀಳುವಂತೆ ಮೋಡಗಳು ಅಪ್ಪಳಿಸಿದರೂ ನಿರೀಕ್ಷಿತ ಮಳೆಯಾಗದೇ ಇರುವುದು ಮುಂದುವರಿದಿದೆ.
ಕಳೆದೊಂದು ವರ್ಷದಿಂದ ‘ಬರ’ ಎದುರಾಗಿದೆ. ಅಲ್ಲದೇ ಪ್ರಸಕ್ತ ಸಾಲಿನ ಮುಂಗಾರು ಮಳೆಯೂ ನಿರೀಕ್ಷಿತವಾಗಿ ಬಾರದೆ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು, ಸೋಯಾಬಿನ್ ಬೆಳೆ ಕೈಕೊಟ್ಟಿವೆ. ಬೆಳೆದರೂ ಇಳುವರಿಯಲ್ಲಿ ಗಣನೀಯವಾಗಿ ಕುಂಠಿತವಾಗಿದೆ.
ಸದ್ಯ ಮಳೆ ಕಣ್ಣು ಮುಚ್ಚಾಲೆ ನಡುವೆ ಹಿಂದು, ಮುಂದಾಗಿ ಬಿತ್ತನೆಯಾದ ಬೆಳೆಗಳಲ್ಲಿ ತೊಗರಿ, ಸೂರ್ಯಕಾಂತಿ ಹೀಗೆ ಇನ್ನಿತರ ಬೆಳೆಗಳು ಮಳೆ ಸಕಾಲಕ್ಕೆ ಬಂದರೆ ಮಾತ್ರ ಉತ್ತಮ ಇಳುವರಿ ನೀಡುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಕೃಷಿಗೆ ಮಾಡಿದ ಖರ್ಚು ಭರಿಸಲಾಗದೆ ರೈತರು ಆರ್ಥಿಕ ದಿವಾಳಿ ಎದುರಿಸುವಂತಾಗುತ್ತದೆ.
ಮತ್ತೂಂದಡೆ ಪಟ್ಟಣಗಳಲ್ಲಿನ ವ್ಯಾಪಾರ ವಹಿವಾಟಿಗೂ ತೀವ್ರ ಹಿನ್ನಡೆಯಾಗಿದೆ. ಮಳೆಯಿಲ್ಲದಕ್ಕೆ ಹಳ್ಳಿಯ ಗ್ರಾಹಕರೇ ಬರುತ್ತಿಲ್ಲ. ನಿತ್ಯದ ವ್ಯಾಪಾರ ಇಲ್ಲದೆ ಆಳುಗಳ ಪಗಾರ, ಅಂಗಡಿ ಬಾಡಿಗೆ ಭರಿಸುವುದು ಕಷ್ಟವಾಗಿ ಪರಿಣಮಿಸಿದೆ ಎಂದು ವ್ಯಾಪಾರಿಗಳು ಅವಲತ್ತುಕೊಳ್ಳುತ್ತಿದ್ದಾರೆ.
ಕಿಸಾನ್ ಸಮ್ಮಾನ ಯೋಜನೆ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ರೈತರ ನೆರವಿಗಾಗಿ ಘೋಷಿಸಿದ ವರ್ಷದಲ್ಲಿ ಮೂರು ಕಂತಿನ 10 ಸಾವಿರ ರೂ.ಗಳು ಅನೇಕರ ಖಾತೆಗೆ ಬಂದಿಲ್ಲ. ಸಂಕಷ್ಟದಲ್ಲಿರುವ ರೈತರಿಗೆ ಆರ್ಥಿಕ ನೆರವು ನೀಡಿ, ಕೃಷಿ ಸಲಕರಣೆ, ಬೀಜ, ಗೊಬ್ಬರ ಕಳೆನಾಶಕ, ಕೀಟನಾಶಕ ಔಷಧ ಸಂಪೂರ್ಣ ಉಚಿತವಾಗಿ ನೀಡಿ, ಬೆಳೆದ ಬೆಳೆಗೆ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ಆರಂಭಿಸಿ ತಕ್ಷಣವೇ ಹಣ ಒದಗಿಸಬೇಕು.• ಮಹಾದೇವಿ ಎ. ವಣದೆ,ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
•ಮಹಾದೇವ ವಡಗಾಂವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.