ರಾಹುಲ್ ಫಾರ್ಮ್ ಚಿಂತೆ; ರೋಹಿತ್ ಗೆ ಟೆಸ್ಟ್ ಆರಂಭಿಕ ಸ್ಥಾನ: ಎಂಎಸ್ ಕೆ ಪ್ರಸಾದ್
Team Udayavani, Sep 10, 2019, 2:30 PM IST
ಹೊಸದಿಲ್ಲಿ: ಭಾರತೀಯ ಟೆಸ್ಟ್ ತಂಡದಲ್ಲಿ ಸದ್ಯ ಆರಂಭಿಕನಾಗಿರುವ ಕನ್ನಡಿಗ ಕೆ.ಎಲ್. ರಾಹುಲ್ ಸದ್ಯ ಕಳಪೆ ಫಾರ್ಮ್ ನಲ್ಲಿದ್ದು, ಮುಂದಿನ ಸರಣಿಗೆ ಅವರ ಬದಲಿಗೆ ರೋಹಿತ್ ಶರ್ಮಾ ಅವರನ್ನು ಆರಂಭಿಕನಾಗಿ ಕಣಕ್ಕಿಳಿಯಲು ಬಿಸಿಸಿಐ ಚಿಂತಿಸಿದೆ. ಭಾರತೀಯ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಈ ಬಗ್ಗೆ ಸುಳಿವು ನೀಡಿದ್ದಾರೆ,
ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಾಹುಲ್ ನಾಲ್ಕು ಇನ್ನಿಂಗ್ಸ್ ಗಳಲ್ಲಿ ಗಳಿಸಿದ್ದು ಕೇವಲ 101 ರನ್ ಮಾತ್ರ. ತೀವ್ರ ರನ್ ಬರಗಾಲ ಅನುಭವಿಸುತ್ತಿರುವ ಕೆ.ಎಲ್ ರಾಹುಲ್ ಟೆಸ್ಟ್ ಅರ್ಧಶತಕ ಗಳಿಸದೆ 12 ಇನ್ನಿಂಗ್ಸ್ ಗಳಾಯ್ತು. ಹೀಗಾಗಿ ಮುಂದಿನ ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆಯಾಗುವುದು ಅನುಮಾನ ಎನ್ನಲಾಗಿದೆ.
ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿದ ಎಂಎಸ್ ಕೆ ಪ್ರಸಾದ್,” ವೆಸ್ಟ್ ಇಂಡೀಸ್ ಸರಣಿಯ ನಂತರ ಆಯ್ಕೆ ಸಮಿತಿ ಸದಸ್ಯರು ಒಟ್ಟಾಗಿ ಸಭೆ ನಡೆಸಿಲ್ಲ. ಮುಂದಿನ ಸಲ ಸಭೆ ನಡೆಸಿದಾಗ ರೋಹಿತ್ ಶರ್ಮಾರನ್ನು ಆರಂಭಿಕರಾಗಿ ಕಣಕ್ಕಿಳಿಸುವ ಬಗ್ಗೆ ಖಂಡಿತ ಆಲೋಚನೆ ನಡೆಸುತ್ತೇವೆʼʼ ಎಂದರು.
“ಕೆ.ಎಲ್ ರಾಹುಲ್ ಖಂಡಿತವಾಗಿಯೂ ಅದ್ಭುತ ಪ್ರತಿಭೆ. ಆತ ಈಗ ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದಾನೆ. ಆತನ ಬಗ್ಗೆ ನಮಗೆ ಕಾಳಜಿ ಇದೆ. ರಾಹುಲ್ ಕ್ರೀಸ್ ನಲ್ಲಿ ಇನ್ನಷ್ಟು ಹೊತ್ತು ಇದ್ದು ತನ್ನ ನೈಜ ಆಟ ಆಡಬೇಕು” ಎಂದು ಪ್ರಸಾದ್ ಅಭಿಪ್ರಾಯಪಟ್ಟರು.
ರೋಹಿತ್ ಶರ್ಮ ನಿಗದಿತ ಓವರ್ ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ವಿಂಡೀಸ್ ವಿರುದ್ದದ ಟೆಸ್ಟ್ ಗೆ ಆಯ್ಕೆಯಾಗಿದ್ದರೂ ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.