ಫ್ಯಾಮಿಲಿ “ಡಾಕ್ಟರ್’
ಮನೆಯಲ್ಲೇ ಮದ್ದು ಮಾಡಿ...
Team Udayavani, Sep 11, 2019, 5:00 AM IST
ಶೀತ, ಕೆಮ್ಮು, ಜ್ವರ, ಬಾಯಿಹುಣ್ಣು, ಹೊಟ್ಟೆನೋವು… ಇವು ನಮ್ಮನ್ನು ಕಾಡುವ ಅತೀ ಸಾಮಾನ್ಯ ಆರೋಗ್ಯ ಸಮಸ್ಯೆಗಳು. ಈ ಸಮಸ್ಯೆಗಳಿಗೆ ಪರಿಹಾರವೂ ಸರಳವೇ. ಅಡುಗೆಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಬಳಸಿ, ಹಲವು ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು.
ಶೀತ , ನೆಗಡಿ
-ತುಳಸಿ ಎಲೆಯನ್ನು ಬಿಸಿ ನೀರಿನಲ್ಲಿ ಕುದಿಸಿ ಕುಡಿದರೆ ಅಥವಾ ತುಳಸಿ ಎಲೆಯನ್ನು ತಿಂದರೆ ಶೀತ, ನೆಗಡಿ ಕಡಿಮೆ ಆಗುತ್ತದೆ.
-ಜೇನುತುಪ್ಪಕ್ಕೆ ಸ್ವಲ್ಪ ಶುಂಠಿ ರಸ ಮತ್ತು ಕರಿಮೆಣಸಿನ ಪುಡಿ ಹಾಕಿ ಕುಡಿಯಿರಿ.
ಅತಿಸಾರ
-ತುರಿದ ಸೇಬು ಹಣ್ಣನ್ನು ಹಾಲಿನಲ್ಲಿ ಬೆರೆಸಿ ಕುಡಿಯಿರಿ.
-ಕೆಂಪು ದಾಸವಾಳದ ತೊಟ್ಟನ್ನು ಕಲ್ಲು ಸಕ್ಕರೆ ಜೊತೆ ಸೇವಿಸಿ.
ಅಜೀರ್ಣ
-ದಾಳಿಂಬೆ ಹಣ್ಣಿನ ರಸ ಸೇವಿಸಿದರೆ ಜೀರ್ಣಶಕ್ತಿ ಹೆಚ್ಚುತ್ತದೆ.
-ಶುಂಠಿಯನ್ನು ನೀರಿನಲ್ಲಿ ಕುದಿಸಿ, ಜೇನುತುಪ್ಪ ಬೆರೆಸಿ ಸೇವಿಸಿ.
ಹೊಟ್ಟೆ ಹುಳ
-ಈರುಳ್ಳಿಯನ್ನು ಜಜ್ಜಿ 3-4 ಚಮಚ ರಸ ಸೇವಿಸಿ.
-2-3 ಚಮಚ ತುಳಸಿ ರಸಕ್ಕೆ 2 ಲವಂಗ ಸೇರಿಸಿ ಬೆಳಗಿನ ಜಾವ ಕುಡಿದರೆ ಜಂತುಹುಳುಗಳು ಸಾಯುತ್ತವೆ.
ವಾಂತಿ
-ಲಿಂಬೆರಸದಲ್ಲಿ ಸಕ್ಕರೆ ಕಲಸಿ ಆಗಾಗ್ಗೆ ಸ್ವಲ್ಪಸ್ವಲ್ಪವೇ ಕುಡಿಯಿರಿ.
-ಕೊತ್ತಂಬರಿಯನ್ನು ಪುಡಿ ಮಾಡಿ ನೀರಿನಲ್ಲಿ ನೆನೆಸಿ, ಸ್ವಲ್ಪ ಸಕ್ಕರೆ ಸೇರಿಸಿ ಕುಡಿಯಿರಿ.
ಮಲ ಬದ್ಧತೆ
-ಬೆಚ್ಚಗಿನ ನೀರಿಗೆ ಇಂಗು ಹಾಕಿ ಹೊಕ್ಕಳಿನ ಸುತ್ತ ಹಚ್ಚಿ ಮಸಾಜ್ ಮಾಡಿ.
-ಒಣ ದ್ರಾಕ್ಷಿಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ರಸದ ಜೊತೆ ಸೇವಿಸಿ.
ಚರ್ಮದ ತೊಂದರೆ
-ಕೊಬ್ಬರಿ ಅಥವಾ ಆಲಿವ್‌ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ ಚರ್ಮವ್ಯಾಧಿಗಳಿಂದ ದೂರವಿರಬಹುದು.
-ಹಾಲಿಗೆ ಅರಿಶಿಣ ಹಾಕಿ ಕುಡಿದರೆ ಚರ್ಮದ ತೊಂದರೆಗಳು ಬರುವುದಿಲ್ಲ.
ತಲೆನೋವು
-ನೀರಿಗೆ ಶುಂಠಿ ಅಥವಾ ಶುಂಠಿ ಪೌಡರ್ ಹಾಕಿ ಕುದಿಸಿ, ಆ ಹಬೆಯನ್ನು ತೆಗೆದುಕೊಳ್ಳಬೇಕು.
– ಖಾಲಿ ಹೊಟ್ಟೆಯಲ್ಲಿ ಒಂದು ಸೇಬುಹಣ್ಣನ್ನು ಉಪ್ಪು ಸೇರಿಸಿ ತಿನ್ನುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಒಂದು ವಾರ ಹೀಗೆ ಮಾಡಬೇಕು.
-ಡಾ. ಶ್ರೀಲತಾ ಪದ್ಯಾಣ, ಪ್ರಕೃತಿ ಚಿಕಿತ್ಸಾ ವೈದ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.