ಬಿ.ಎಡ್‌. ಪದವೀಧರನಿಂದ ಸಾವಯವ ಕೃಷಿಯಲ್ಲಿ ಸಾಧನೆ


Team Udayavani, Sep 11, 2019, 5:49 AM IST

organic-farming

ಸಿದ್ದಾಪುರ: ರೈತನ ಮಗನೊಬ್ಬ ಬಿ. ಎಡ್‌. ಪದವಿ ಪಡೆದು ಶಿಕ್ಷಕ ವೃತ್ತಿಗೆ ಹೋಗದೆ, ಕೃಷಿಯಲ್ಲಿ ಎನಾದರೂ ಸಾಧನೆ ಮಾಡಬೇಕೆಂಬ ಹಂಬಲದೊಂದಿಗೆ ಸಾವಯವ ಕೃಷಿಯಲ್ಲಿ ತೊಡಗಿಕೊಂದು ಸಾಧನೆ ಮಾಡಲು ಹೊರಟಿದ್ದಾರೆ.

ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಹೊಳೆ ಶಂಕರನಾರಾಯಣದ ಸಮೀಪದ ಬೆಚ್ಚಳ್ಳಿಯ ಕೃಷಿ ಕುಟುಂಬದಲ್ಲಿ ಹುಟ್ಟಿರುವ ರಾಜೇಂದ್ರ ಪೂಜಾರಿ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎಡ್‌. ಪದವಿ ಮುಗಿಸಿದ್ದಾರೆ. ಅವರಿಗೆ ಸರಕಾರಿ ಉದ್ಯೋಗ ಅರಸಿ ಬಂದರೂ, ಅದನ್ನು ಬಿಟ್ಟು ಕೃಷಿಯಲ್ಲಿ ಮುಂದುವರಿದಿದ್ದಾರೆ. ಪ್ರತಿ ಬುಧವಾರ ಸಿದ್ದಾಪುರ ಸಂತೆ ಮತ್ತು ಪ್ರತಿ ಶನಿವಾರ ಕುಂದಾಪುರ ಸಂತೆಯಲ್ಲಿ ತಾವು ಬೆಳೆದ ತರಕಾರಿ ಹಾಗೂ ಇತರ ಬೆಳೆಗಳನ್ನು ಮಾರುತ್ತಾರೆ.

ರಾಜೇಂದ್ರ ಪೂಜಾರಿ ಅವರ ತಂದೆ ಭೋಜ ಪೂಜಾರಿ ಹಾಗೂ ಅವರ ಕುಟುಂಬ ತರಕಾರಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಯಾವುದೇ ರಸಾಯನಿಕ ಔಷಧಗಳನ್ನು ಬಳಸದೆ ಸಾವಯವ ಗೊಬ್ಬರಗಳ ಬಳಕೆ ಮಾಡಿ, ಈ ಮೂಲಕ ಉತ್ತಮವಾದ ಫಸಲು ಪಡೆಯುತ್ತಿದ್ದಾರೆ. ಅವರು ಬೆಚ್ಚಳ್ಳಿ ಮಾತ್ರವಲ್ಲದೆ ಕಾವ್ರಾಡಿ ಗ್ರಾಮದ ಮುಂಭಾರಿನಲ್ಲಿಯೂ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ತಂದೆಯ ಕೃಷಿ ಕೈಂಕರ್ಯಕ್ಕೆ ಮಗನೂ ಮನಸ್ಸು ಮಾಡಿದ್ದು ಇತರ ಶಿಕ್ಷಿತ ವರ್ಗಕ್ಕೂ ಮಾದರಿಯಾಗಿದ್ದಾರೆ.

ರಾಜೇಂದ್ರ ಪೂಜಾರಿ ಅವರ ಇಡೀ ಕುಟುಂಬ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಈ ಮೂಲಕ ಉತ್ತಮ ಆದಾಯವನ್ನೂ ಗಳಿಸುತ್ತಿದ್ದಾರೆ. ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಬಾಳೆ, ಚಿಕ್ಕು, ದುಡ್ಲೆಕಾಯಿ, ದಿವೆಲ್ಸಿನಕಾಯಿ, ಕಾಳು ಮೆಣಸು, ಕಬ್ಬು. ತರಕಾರಿ ಬೆಳೆಗಳಾದ ಸುವರ್ಣಗಡ್ಡೆ, ಮರಸನಗಡ್ಡೆ, ಅನಾನಸು, ಪಪ್ಪಾಯಿ, ನುಗ್ಗೆಕಾಯಿ, ಆಮ್ಟೆಕಾಯಿ ಇದರಲ್ಲಿ ಸಿಹಿ ಮತ್ತು ಹುಳಿ, ಮರಗೆಣಸು, ಕೆಸು, ಬೆಂಡೆ, ಪಡವಲಕಾಯಿ, ಅಲಸಂಡೆ, ಇಬ್ಬುಡ್ಲ, ಮುಳ್ಳುಸೌತೆ, ಹಾಗಲಕಾಯಿ, ಸಾಂಬರ್‌ಸೌತೆ, ಹರಿವೆೆ ಸೊಪ್ಪು ಇದರಲ್ಲಿ ಕೆಂಪು ಮತ್ತು ಬಿಳಿ, ಬಸಳೆ ಸೊಪ್ಪು, ಮೆಣಸು, ಬದನೆಕಾಯಿ, ಸಿಹಿ ಮತ್ತು ಬೂದು ಗುಂಬಾಳಕಾಯಿ, ತೊಂಡೆಕಾಯಿ, ಅವಡೆ, ಶುಂಠಿ ಇತ್ಯಾದಿಗಳನ್ನು ಇವರ ತೋಟದಲ್ಲಿ ನಾವು ಕಾಣಬಹುದಾಗಿದೆ.

– ಸತೀಶ್‌ ಆಚಾರ್‌ ಉಳ್ಳೂರ್‌

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

Kota-Shrinivas

Manipal: ಕೇಂದ್ರ ಸರಕಾರದ ಯೋಜನೆ ಫ‌ಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.