ಬದುಕು, ಸಂಬಂಧ ಕಟ್ಟಲು ಜನಪದ ಸಾಹಿತ್ಯದಿಂದ ಮಾತ್ರ ಸಾಧ್ಯ
Team Udayavani, Sep 12, 2019, 3:00 AM IST
ಕೊಳ್ಳೇಗಾಲ: ಭಾರತೀಯ ಸಂಸ್ಕೃತಿಯನ್ನು ನಾವು ಜನಪದ ಸಾಹಿತ್ಯದಲ್ಲಿ ಮಾತ್ರ ಕಾಣಲು ಸಾಧ್ಯ, ಬದುಕು ಹಾಗೂ ಸಂಬಂಧವನ್ನು ಕಟ್ಟಲು ಜನಪದ ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಶಾಸಕ ಎನ್.ಮಹೇಶ್ ಹೇಳಿದರು. ಪಟ್ಟಣದ ಜೆಎಸ್‌ಎಸ್ ಬಾಲಕಿಯ ಪದವಿ ಪೂರ್ವ ಕಾಲೇಜಿನಲ್ಲಿ ಚಾಮರಾಜನಗರದ ರಂಗವಾಹಿನಿ ಏರ್ಪಡಿಸಿದ್ದ ಜಾನಪದ ಸಂಗೀತ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮೆಲ್ಲ ಸಾಹಿತ್ಯದ ಬೇರು ಜನಪದ: ನಮ್ಮೆಲ್ಲರ ಗಾಯಕರ ಮೂಲಕ ಜನಪದ ಸಾಹಿತ್ಯ ಹಾಗೂ ಸಂಗೀತದ ಪರಿಕರಗಳು ಜನಪದ ಮೂಲವಗಿದೆ. ಜನಪದ ಸಾಹಿತ್ಯ ಕಲೆ ಈ ಮಣ್ಣಿನಿಂದ ಉದ್ಭವಿಸಿದ್ದು ಹಾಗೂ ನಮ್ಮೆಲ್ಲ ಸಾಹಿತ್ಯದ ಬೇರು ಜನಪದ, ಎಲ್ಲಾ ಸಾಹಿತ್ಯಕ್ಕೆ ಜನಪದ ತಾಯಿ ಬೇರಾಗಿದೆ. ಜಾನಪದ ಗೀತೆಗಳು, ಜಾನಪದ ಸಾಹಿತ್ಯ ಉಳಿಯಬೇಕು ಅಂದರೆ ಜಾನಪದ ಸಂಗೀತ ಸಂಭ್ರಮ, ಜಾನಪದ ಸಂವಾದ-ಹಾಡು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.
ಮಕ್ಕಳು ಜನಪದದ ಬಗ್ಗೆ ತಿಳಿಯಬೇಕು: ಜಾನಪದ ಸಂಭ್ರಮವನ್ನು ವಿದ್ಯಾರ್ಥಿಗಳು ಆನಂದಿಸಿ, ಸಂಭ್ರಮಿಸಿ, ಅನುಭವಿಸಬೇಕು. 21ನೇ ಶತಮಾನದಲ್ಲಿ ಕನಸನ್ನು ಕಟ್ಟಿಕೊಂಡು ಅದನ್ನು ಅನುಭವಿಸುತ್ತಾ ಸುಖವಾಗಿರಬೇಕೆಂದು ತಿಳಿಸುತ್ತಾ ಪಿಯುಸಿ ಓದುವ ವಿದ್ಯಾರ್ಥಿಗಳಾದ ನಿಮಗೆ ಈ ಅವಧಿ ಅತ್ಯಂತ ಮಹತ್ವವಾದದ್ದು, ದೇಹ, ಮನಸ್ಸು ಎಲ್ಲವೂ ಪರಿವರ್ತನೆಯಾಗುವ ವಯಸ್ಸು ಈ ವಯಸ್ಸಿನಲ್ಲಿ ಏನನ್ನು ಗ್ರಹಿಸಿಕೊಳ್ಳುತ್ತೀರಿ ಅದನ್ನು ಅಳವಡಿಸಿಕೊಳ್ಳುತ್ತೀರಿ ಅದುವೇ ಮುಂದೆ ನಿಮ್ಮ ಬದುಕಾಗುತ್ತದೆ ಎಂದು ತಿಳಿಸುತ್ತಾ, ಪ್ರತಿಯೊಂದು ಮಗುವು ಹುಟ್ಟತ್ತಾ ವಿಶ್ವಮಾನವವಾಗಿ ಬೆಳೆಯುತ್ತಾ ಸಂಕುಚಿತ ಮನಸ್ಸಿನವನಾಗುತ್ತಾನೆ, ವಿದ್ಯಾರ್ಥಿಗಳಾದ ನೀವು ಆದಾಗಬಾರದು ಎಂದು ಹೇಳಿದರು.
ಜಿಲ್ಲೆ ಜನಪದದ ತವರೂರು: ಬೆಂಗಳೂರಿನ ಪ್ರಸಿದ್ಧ ಅಂತಾರಾಷ್ಟ್ರೀಯ ಜಾನಪದ ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು ಮಾತನಾಡಿ, ಪಾಮರರ, ಶ್ರಮಿಕರ ಸಂಸ್ಕೃತಿ ನಮ್ಮ ಜನಪದರದು, ಇಲ್ಲಿ ಯಾರು ಶ್ರೇಷ್ಠರಲ್ಲ ಯಾರು ಕನಿಷ್ಠರಲ್ಲ ಈ ನೆಲದ ಜಾನಪದ ಸಂಸ್ಕೃತಿ ಶ್ರೇಷ್ಠ, ನನ್ನ ಜನಾಂಗ, ಶ್ರಮಿಕ ಜನಾಂಗ ಅವರೇ ನನ್ನ ಜಾನಪದರು. ಚಾಮರಾಜನಗರ ಜಿಲ್ಲೆ ಜನಪದದ ತವರೂರು ಆಗಾಗಿ ಜನಪದ ನನ್ನ ತಾಯಂದಿರಲ್ಲಿ ಇಂದಿಗೂ ಉಳಿದಿದೆ. ಜನಪದ ಹಾಡುಗಳನ್ನು ಹಾಡುವುದರ ಮೂಲಕ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆದುಕೊಂಡು ವಿದ್ಯಾರ್ಥಿಗಳನ್ನು ಮಂತ್ರ ಮುಗ್ಧರನ್ನಾಗಿಸಿದರು.
ನಂತರ ಅವರನ್ನು ಸಂಸ್ಥೆಯ ವತಿಯಿಂದ ಮೈಸೂರು ಪೇಟ ತೊಡಿಸುವುದರ ಮೂಲಕ ಸನ್ಮಾನಿಸಲಾಯಿತು. ಚಾಮರಾಜನಗರ ಸಮಾಜಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮುನಿರಾಜು, ಪ್ರಾಂಶುಪಾಲರಾದ ಎನ್.ಮಹದೇವಸ್ವಾಮಿ, ರಂಗ ಕಲಾವಿದ ನರಸಿಂಹಮೂರ್ತಿ, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಡಿ.ಕೆ.ಶಿಲ್ಪ, ವೇದಿಕೆಯ ಸಂಚಾಲಕಿ ರುದ್ರೇಶ್, ಗಾಯಕ ಮಾಂಬಳ್ಳಿ ಅರುಣ್‌ಕುಮಾರ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.