ಸೌರವ್ಯವಸ್ಥೆ ಹೊರಗೂ ನೀರಿದೆ
ಕೆ2-18ಬಿ ಎಂಬ ಗ್ರಹದಲ್ಲಿ ನೀರಿರುವುದು ಪತ್ತೆ
Team Udayavani, Sep 13, 2019, 6:00 AM IST
ಲಂಡನ್: ಅತ್ಯಂತ ಮಹತ್ವದ ಸಂಶೋಧನೆಯೊಂದರಲ್ಲಿ ನಮ್ಮ ಸೌರ ವ್ಯವಸ್ಥೆಯ ಹೊರಗಿನ ಕೆ2-18ಬಿ ಗ್ರಹದಲ್ಲಿ ನೀರು ಇರುವುದು ಕಂಡುಬಂದಿದೆ. ನೇಚರ್ ಆಸ್ಟ್ರಾನಮಿ ಎಂಬ ನಿಯತಕಾಲಿಕೆಯಲ್ಲಿ ಈ ಕುರಿತ ವರದಿ ಪ್ರಕಟವಾಗಿದ್ದು, ಭೂಮಿಯನ್ನು ಹೊರತುಪಡಿಸಿದರೆ ಇದೊಂದೇ ಗ್ರಹದಲ್ಲಿ ವಾಸಿಸಲು ಅನುಕೂಲವಾಗುವಂಥ ನೀರು ಮತ್ತು ವಾತಾವರಣ ಇದೆ ಎಂಬುದನ್ನು ಕಂಡುಕೊಳ್ಳಲಾಗಿದೆ.
ಭೂಮಿಗಿಂತ 8 ಪಟ್ಟು ದೊಡ್ಡ ಗ್ರಹ: ಭೂಮಿಯಿಂದ 118 ಜ್ಯೋತಿರ್ವರ್ಷ ದೂರದಲ್ಲಿ ಇರುವ ಈ ಗ್ರಹ, ಭೂಮಿಗಿಂತ ಎಂಟು ಪಟ್ಟು ಹೆಚ್ಚು ದೊಡ್ಡದಾಗಿದೆ. ನಾಸಾದ ಹಬಲ್ ಸ್ಪೇಸ್ ಟೆಲಿಸ್ಕೋಪ್ ಬಳಸಿ ಅಧ್ಯಯನ ನಡೆಸಲಾಗಿದೆ ಎಂದು ಲಂಡನ್‌ನ ಯೂನಿವರ್ಸಿಟಿ ಕಾಲೇಜಿನ ಆಂಗೆಲೋಸ್ ಸಿಯಾರಾಸ್ ಹೇಳಿದ್ದಾರೆ. ಕೆ2-18ಬಿ ಎಂಬುದು ಭೂಮಿ 2.0 ಅಲ್ಲ. ಭೂಮಿಗಿಂತ ದೊಡ್ಡದು ಹಾಗೂ ವಿಭಿನ್ನ ವಾತಾವರಣವನ್ನು ಹೊಂದಿದೆ.
ಈಗ ಲಭ್ಯವಿರುವ ದತ್ತಾಂಶ ಹಾಗೂ ಸಂಶೋಧನೆ ಮಾಹಿತಿಯನ್ನೇ ಬಳಸಿಕೊಂಡಿರುವ ಇವರು, ವಾತಾವರಣದಲ್ಲಿ ನೀರಿನ ಕಣಗಳು ಇರುವುದನ್ನು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಗ್ರಹದ ವಾತಾವರಣದಲ್ಲಿ ಹೀಲಿಯಂ ಕೂಡ ಲಭ್ಯವಿದೆ. ನೈಟ್ರೋಜನ್ ಹಾಗೂ ಮೀಥೇನ್ ಕೂಡ ಇಲ್ಲಿ ಇರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ನಾವು ಕಂಡುಕೊಂಡ ಅತ್ಯಂತ ತಂಪಾದ ಗ್ರಹ ಇದಾಗಿದೆ ಎಂದು ಇನ್ನೊಬ್ಬ ಸಂಶೋಧಕಿ ಜೋಶ್ ಲೋತ್ರಿಂಗರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.