ಅಸ್ಸಾಂನಲ್ಲಿ ಸ್ಥಾಪನೆಯಾಗುತ್ತಿದೆ ನಿರಾಶ್ರಿತರ ಬೃಹತ್ ಶಿಬಿರ
Team Udayavani, Sep 13, 2019, 5:04 AM IST
ಗುವಾಹಟಿ: ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಪಟ್ಟಿಯಲ್ಲಿ 19 ಲಕ್ಷ ಜನರನ್ನು ಹೊರಗಿಟ್ಟಿರುವ ಹಿನ್ನೆಲೆಯಲ್ಲಿ, ವಿದೇಶೀಯರು ಎಂದು ಪರಿಗಣಿಸಲ್ಪಟ್ಟ ಜನರಿಗಾಗಿ ನಿರಾಶ್ರಿತ ಶಿಬಿರವನ್ನು ಅಸ್ಸಾಂನಲ್ಲಿ ನಿರ್ಮಿಸಲಾಗುತ್ತಿದೆ. 2.5 ಹೆಕ್ಟೇರ್ನಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಈ ನಿರಾಶ್ರಿತ ಶಿಬಿರ 7 ಫುಟ್ಬಾಲ್ ಮೈದಾನಗಳಷ್ಟು ದೊಡ್ಡದಾಗಿದ್ದು, 3 ಸಾವಿರ ಜನರು ಉಳಿದುಕೊಳ್ಳಬಹುದಾಗಿದೆ. 15 ಮಹಡಿಯ ಕಟ್ಟಡವೊಂದನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತದೆ. ಈ ವರ್ಷದ ಡಿಸೆಂಬರ್ ಒಳಗೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುತ್ತದೆ.
ಇಲ್ಲಿ ಆಸ್ಪತ್ರೆ, ಆಡಿಟೋರಿಯಂ, ಅಡುಗೆ ಮನೆ, 180 ಶೌಚಾಲಯ ಇರಲಿದೆ. ನಿರಾಶ್ರಿತ ಕೇಂದ್ರದ ಹೊರಗೆ ಶಾಲೆ ಕೂಡ ಇರಲಿದೆ. 20 ಅಡಿ ಎತ್ತರದ ಬೃಹತ್ ಗೋಡೆಯನ್ನೂ ಹೊರ ಪ್ರಾಕಾರವಾಗಿ ನಿರ್ಮಿಸಲಾಗುತ್ತಿದೆ. ಆದರೆ ಇದು ಜೈಲಿನಂತೆ ಇರುವುದಿಲ್ಲ. ಒಂದೊಂದು ಕೋಣೆಯಲ್ಲೂ ಐದು ಜನರು ವಾಸಿಸಬಹುದಾದಷ್ಟು ವಿಶಾಲವಾಗಿರುತ್ತದೆ. ಹಾಸ್ಟೆಲ್ ರೀತಿಯ ರೂಮ್ ಇದಾಗಿರುತ್ತದೆ. ಬಾಗಿಲು ಹಾಗೂ ಬೆಳಕಿನ ವ್ಯವಸ್ಥೆ ಇರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.