ಸರ ಸುಲಿಗೆ: ಆರೋಪಿಯ ಬಂಧನ
Team Udayavani, Sep 13, 2019, 5:13 PM IST
ಉಡುಪಿ: ಮಂಚಿಕೋಡಿ ಗದ್ದೆಯ ಬಳಿ ಸೆ.12ರಂದು ಬೆಳಗ್ಗೆ ಲಲಿತಾ ನಾಯ್ಕ ಎಂಬವರ ಕುತ್ತಿಗೆಯಿಂದ ಸರ ಸುಲಿಗೆ ಮಾಡಿದ್ದ ಆರೋಪಿ, ಮಂಚಿಕುಮೇರಿ ನಿವಾಸಿ ಪ್ರವೀಣ ನಾಯ್ಕ(32) ಎಂಬಾತನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಿಂದ ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಎಸ್‌ಪಿ ನಿಶಾ ಜೇಮ್ಸ್, ಎಎಸ್‌ಪಿ ಕುಮರಾಚಂದ್ರ ಹಾಗೂ ಡಿವೈಎಸ್‌ಪಿ ಟಿ.ಜೈಶಂಕರ್ ಅವರ ಮಾರ್ಗದರ್ಶನದಲ್ಲಿ ಮಣಿಪಾಲ ಪ್ರಭಾರ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಎ. ಮತ್ತು ಉಪನಿರೀಕ್ಷಕ ಶ್ರೀಧರ ನಂಬಿಯಾರ್ ಎಂ.ಪಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಕರಣ ಹಿನ್ನೆಲೆ:
ಮಂಚಿಕೋಡಿಯ ಲಲಿತಾ (52) ಅವರು ಮಣಿಪಾಲದ ಸಂಸ್ಥೆಗೆ ಕೆಲಸಕ್ಕೆಂದು ನಡೆದುಕೊಂಡು ಹೋಗುತ್ತಿದ್ದಾಗ ಮಂಚಿಕೋಡಿ ಗದ್ದೆಯ ಬಳಿ ಹೆಲ್ಮೆಟ್, ರೈನ್‌ಕೋಟ್ ಧರಿಸಿದ್ದ ಯುವಕ ಕುತ್ತಿಗೆಗೆ ಕೈ ಹಾಕಿದ. ಲಲಿತಾ ಅವರು ಯುವಕನನ್ನು ತಳ್ಳಿದಾಗ ಆಯತಪ್ಪಿ ಗದ್ದೆಗೆ ಬಿದ್ದರು. ಬಿದ್ದಲ್ಲಿಗೆ ಮತ್ತೆ ಬಂದ ಯುವಕ ಲಲಿತಾರ ಕುತ್ತಿಗೆಯಲ್ಲಿದ್ದ ಸರ ಸೆಳೆದೊಯ್ದಿದ್ದಾನೆ.
ಎಳೆಯುವಾಗ ಸರ ತುಂಡಾ ಗಿದ್ದು ಒಂದು ತುಂಡು ಲಲಿತಾರ ಕುತ್ತಿಗೆಯಲ್ಲಿ ಉಳಿದುಕೊಂಡಿತು. ಸರ ಎಳೆದುಕೊಂಡಾತ ಅದೇ ಊರಿನ ಪ್ರವೀಣ್ ಎಂಬಾತ ಎಂದು ಗುರುತಿಸಲಾಗಿದೆ. ಎಳೆದೊಯ್ದ ಸರದ ಮೌಲ್ಯ 9,000 ರೂ.ಗಳು ಎಂದು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.