ಭೋಪಾಲ : ಮಳೆ ತಗ್ಗಲು ಕಪ್ಪೆಗಳಿಗೆ ವಿಚ್ಛೇದನ
Team Udayavani, Sep 13, 2019, 9:35 PM IST
ಭೋಪಾಲ: ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ರಾಜಧಾನಿ ಭೋಪಾಲದಲ್ಲಿ ಮಳೆ ಬರಲಿ ಎಂದು ಕಪ್ಪೆಗಳಿಗೆ ಮದುವೆ ಮಾಡಿಸಲಾಗಿತ್ತು. ಇದೀಗ ಅವುಗಳಿಗೆ “ವಿಚ್ಛೇದನ’ ಕೊಡಿಸಲಾಗಿದೆ. ಕಪ್ಪೆಗಳ ಮದುವೆ ಬಳಿಕ ಸಾಕೋ ಸಾಕು ಎನ್ನುವ ರೀತಿಯಲ್ಲಿ ರಾಜ್ಯದಲ್ಲಿ ಮಳೆಯಾಯಿತು. ಈಗಲೂ ಕೆಲವು ಕಡೆಗಳಲ್ಲಿ ಮಳೆ ಮುಂದುವರಿದಿದೆ.
ಹೀಗಾಗಿ, ಭೋಪಾಲದ ಇಂದ್ರಪುರಿ ಎಂಬಲ್ಲಿ ಕೆಲ ತಿಂಗಳ ಹಿಂದೆ ಓಂ ಶಿವಶಕ್ತಿ ಮಂಡಲ ಎಂಬ ಸ್ಥಳೀಯ ಯುವಕರ ಗುಂಪು ಮಳೆಯಾಗುವ ನಿಟ್ಟಿನಲ್ಲಿ ಕಪ್ಪೆಗಳಿಗೆ ಜುಲೈನಲ್ಲಿ ಮದುವೆ ಮಾಡಿಸಿತ್ತು. ಇದೀಗ ಮಳೆ ಅಗತ್ಯಕ್ಕಿಂತ ಹೆಚ್ಚಾಗಿದೆ. ಹೀಗಾಗಿ ಅವುಗಳನ್ನು ಹುಡುಕಿ ತಂದು ವಿಚ್ಛೇದನ ಮಾಡಿಸಿದ್ದೇವೆ ಎಂದು ಸಂಘಟನೆಯ ಪ್ರಮುಖ ನಾಯಕ ಸುರೇಶ್ ಅಗರ್ವಾಲ್ ಹೇಳಿದ್ದಾರೆ.
ತುಂರತ್ ಮಹಾದೇವ್ ದೇಗುಲದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಕಪ್ಪೆ ದಂಪತಿಯನ್ನು ಪ್ರತ್ಯೇಕ ಮಾಡುವ ಪ್ರಕ್ರಿಯೆಯನ್ನು ವೇದಘೋಷಗಳೊಂದಿಗೆ ವೈಭವಯುತವಾಗಿ ನಡೆಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.