ರೈತ ಮತ್ತು ದನಗಳು
Team Udayavani, Sep 14, 2019, 5:00 AM IST
ಒಂದು ಊರಿನಲ್ಲಿ ಒಬ್ಬ ರೈತ ಇದ್ದನು. ಅವನಿಗೆ ಒಬ್ಬಳು ಹೆಂಡತಿಯಿದ್ದಳು. ಅವನ ಹೆಸರು ರಂಗಪ್ಪ. ಹೆಂಡತಿಯ ಹೆಸರು ಸೀತಮ್ಮ. ಅವರು ಎರಡು ದನಗಳನ್ನು ಸಾಕಿದ್ದರು. ದಿನಾಲು ಅವರು ದನಗಳನ್ನು ಕಾಡಿಗೆ ಮೇಯಲು ಬಿಡುತ್ತಿದ್ದರು. ಒಂದು ದಿನ ಸಂಜೆ ಒಂದು ದನ ಮಾತ್ರ ಹಿಂದೆ ಬಂತು. ಇನ್ನೊಂದು ಬರಲೇ ಇಲ್ಲ. ಇದನ್ನು ನೋಡಿ ರಂಗಪ್ಪ ದುಃಖೀಸಿ, ಅಳತೊಡಗಿದ. ಅವನ ಹೆಂಡತಿ, ಯಾಕೆ ಅಳುತ್ತಿದ್ದೀರಿ? ಎಂದು ಪ್ರಶ್ನಿಸಿದಳು. ವಿಷಯ ತಿಳಿದಾಗ ಅವಳು ಅವನನ್ನು ಸಮಾಧಾನಪಡಿಸುತ್ತಾ ನಮ್ಮ ದನ ನಮಗೆ ಸಿಗುತ್ತದೆ. ನೀವು ಚಿಂತೆ ಮಾಡಬೇಡಿ ಎಂದಳು.
ಮರುದಿನ ಅವರಿಬ್ಬರೂ ದನವನ್ನು ಹುಡುಕಿಕೊಂಡು ಹೊರಟರು. ಸಂಜೆಯಾದರೂ ದನ ಸಿಗಲೇ ಇಲ್ಲ. ಬೇಸರದಿಂದ ಮನೆಗೆ ಹಿಂತಿರುಗಿದರು. ಮನೆಗೆ ಬಂದ ಸೀತಮ್ಮ ಸ್ವಲ್ಪ ಹಣವನ್ನು ತಂದು ರಂಗಪ್ಪನಿಗೆ ಕೊಟ್ಟು, ಈ ಹಣವನ್ನು ನಾನು ಕಷ್ಟಕಾಲಕ್ಕೆಂದು ತೆಗೆದಿಟ್ಟಿದ್ದೆ. ಇದರಿಂದ ನಾಳೆ ಹೋಗಿ ಹೊಸ ದನವನ್ನು ತರೋಣ ಎಂದಳು. ಮರುದಿವಸ ಅವರಿಬ್ಬರೂ ದನ ಮಾರುವವನಲ್ಲಿಗೆ ಬಂದು, ನಮಗೆ ಕಪ್ಪು ದನ ಬೇಕು ಎಂದು ಹಣ ಕೊಟ್ಟರು. ಮಾರಾಟಗಾರ ಹಣವನ್ನು ತೆಗೆದುಕೊಂಡು ಕಪ್ಪು ದನವನ್ನು ತೋರಿಸಿದನು. ದನವನ್ನು ನೋಡಿದ ಹೆಂಡತಿ ರಂಗಪ್ಪನಲ್ಲಿ ಇದುವೇ ನಮ್ಮ ದನ ಎಂದಳು. ಅವಳು ಆ ವ್ಯಾಪಾರಿಯನ್ನು ತೋರಿಸುತ್ತಾ ಕಳ್ಳ, ಕಳ್ಳ ಎಂದು ಕಿರುಚಿದಳು. ಆದರೆ ಅವನು ಇದು ನನ್ನದೇ ದನ ಎಂದು ಹೇಳಿದ. ಒಂದು ಉಪಾಯ ಮಾಡಿದ ಸೀತಮ್ಮ ದನದ ಕಣ್ಣುಗಳಿಗೆ ಕೈ ಅಡ್ಡಹಿಡಿದು, ದನದ ಯಾವ ಕಣ್ಣಿಗೆ ಪೆಟ್ಟಾಗಿದೆ ಎಂದು ಹೇಳಿದರೆ ದನ ನಿನ್ನದೇ ಎಂದಳು. ಆಗ ಅವನು ಎಡಗಣ್ಣಿಗೆ ಎಂದ. ಆಗ ಸೀತಮ್ಮ, ನೋಡು ಯಾವ ಕಣ್ಣಿಗೂ ಪೆಟ್ಟಾಗಿಲ್ಲ. ನೀನು ಸಾಕಿದ ದನವಾಗಿದ್ದರೆ ಅದರ ಬಗ್ಗೆ ನಿನಗೆ ತಿಳಿದಿರುತ್ತಿತ್ತು ಎಂದಳು. ಆಗ ಅಲ್ಲಿ ಸೇರಿದ ಜನರೆಲ್ಲ ಆ ವ್ಯಾಪಾರಿಗೆ ಸರಿಯಾಗಿ ಹೊಡೆದರು. ರೈತ ಮತ್ತು ಹೆಂಡತಿ ತಮ್ಮ ಹಣವನ್ನು ವಾಪಸು ಪಡೆದು, ದನವನ್ನು ತಮ್ಮ ಮನೆಗೆ ಕರೆದೊಯ್ದರು.
· ರಕ್ಷಿತಾ ಕೆ., 9ನೇ ತರಗತಿ, ಕೆಯ್ಯೂರು ಕೆಪಿಎಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.