ವನಿತಾ ಹಾಕಿ: ರಾಣಿ ರಾಮ್‌ಪಾಲ್ ನಾಯಕಿ
Team Udayavani, Sep 14, 2019, 5:49 AM IST
ಹೊಸದಿಲ್ಲಿ: ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತದ ವನಿತಾ ಹಾಕಿ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಸ್ಟಾರ್ ಫಾರ್ವರ್ಡ್ ಆಟಗಾರ್ತಿ ರಾಣಿ ರಾಮ್‌ಪಾಲ್ ತಂಡವನ್ನು ಮುನ್ನಡೆಸಲಿದ್ದಾರೆ. ಗೋಲ್‌ಕೀಪರ್ ಸವಿತಾ ಉಪನಾಯಕಿ ಆಗಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ 5 ಟೆಸ್ಟ್ ಪಂದ್ಯಗಳನ್ನಾಡಲಿದ್ದು, ಸೆ. 27ರಿಂದ ಅ. 5ರ ತನಕ ಮಾರ್ಲೋದಲ್ಲಿ ನಡೆಯಲಿದೆ.
ಜಪಾನ್‌ನಲ್ಲಿ ನಡೆದ ಒಲಿಂಪಿಕ್ ಟೆಸ್ಟ್ ಸರಣಿ ಯಲ್ಲಿ ಆಡಿದ ಬಹುತೇಕ ಆಟಗಾರ್ತಿಯರು ಈ ತಂಡದಲ್ಲಿ ಮುಂದುವರಿದಿದ್ದಾರೆ. ಗಾಯಾಳಾಗಿ ಸುದೀರ್ಘ ಕಾಲ ಹೊರಗುಳಿದಿದ್ದ ಅನುಭವಿ ಮಿಡ್ ಫೀಲ್ಡರ್ ನಮಿತಾ ಟೊಪ್ಪೊ ತಂಡಕ್ಕೆ ವಾಪಸಾಗಿದ್ದಾರೆ. ಅವರು 2018ರ ಏಶ್ಯಾಡ್ ಬಳಿಕ ಭಾರತ ತಂಡದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು.
“ತಂಡ ಸಂತುಲಿತವಾಗಿದ್ದು, ಇಂಗ್ಲೆಂಡ್ ನೆಲದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ. ನಮಿತಾ ಟೊಪ್ಪೊ ಪುನರಾಗಮನದಿಂದ ತಂಡದ ಸಾಮರ್ಥ್ಯ ಹೆಚ್ಚಿದೆ. ಇಂಗ್ಲೆಂಡಿಗೆ ತೆರಳುವ ಮುನ್ನ ತಂಡ 10 ದಿನಗಳ ತರಬೇತಿಯಲ್ಲಿ ಪಾಲ್ಗೊಳ್ಳಲಿದೆ’ ಎಂದು ತಂಡದ ಕೋಚ್ ಸೋರ್ಡ್ ಮರಿನ್ ಹೇಳಿದರು.
ವರ್ಷಾಂತ್ಯ ಭುವನೇಶ್ವರದಲ್ಲಿ ನಡೆಯಲಿರುವ ಅಮೆರಿಕ ಎದುರಿನ ಎಫ್ಐಎಚ್ ಒಲಿಂಪಿಕ್ ಅರ್ಹತಾ ಸ್ಪರ್ಧೆಯ ಹಿನ್ನೆಲೆಯಲ್ಲಿ ಭಾರತದ ಪಾಲಿಗೆ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ.
ಭಾರತ ತಂಡ
ಗೋಲ್‌ಕೀಪರ್: ಸವಿತಾ (ಉಪನಾಯಕಿ), ರಜನಿ ಎಟಿಮರ್ಪು.
ಡಿಫೆಂಡರ್: ದೀಪ್ ಗ್ರೇಸ್ ಎಕ್ಕಾ, ಗುರ್ಜಿತ್ ಕೌರ್, ರೀನಾ ಖೋಕರ್, ಸಲೀಮಾ ಟೇಟೆ.
ಮಿಡ್ ಫೀಲ್ಡರ್: ಸುಶೀಲಾ ಚಾನು, ನಿಕ್ಕಿ ಪ್ರಧಾನ್, ಮೋನಿಕಾ, ನೇಹಾ ಗೋಯಲ್, ಲಿಲಿಮಾ ಮಿಂಝ್, ನಮಿತಾ ಟೊಪ್ಪೊ.
ಫಾರ್ವರ್ಡ್ಸ್: ರಾಣಿ ರಾಮ್‌ಪಾಲ್ (ನಾಯಕಿ), ವಂದನಾ ಕಟಾರಿಯಾ, ನವನೀತ್ ಕೌರ್, ಲಾಲ್ರೆಮಿÕಯಾಮಿ, ನವಜೋತ್ ಕೌರ್, ಶರ್ಮಿಳಾ ದೇವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Perth test: ಜೈಸ್ವಾಲ್-ರಾಹುಲ್ ಅಜೇಯ ಆಟ; ಪರ್ತ್ ನಲ್ಲಿ ಭಾರತದ ಮೇಲಾಟ
Mother: ಅಮ್ಮನ ಜೀವನವೇ ಆದರ್ಶ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.