ರೋಗ ನಿರೋಧಕ ಸೋನಾ ಮಸೂರಿ ಭತ್ತ ತಳಿ ಅಭಿವೃದ್ಧಿ

ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿಗಳ ಸಾಧನೆ

Team Udayavani, Sep 14, 2019, 11:04 AM IST

14-Spectember-2

ಗಂಗಾವತಿ: ಕೃಷಿ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಿದ ಸುಧಾರಿತ ಸೋನಾ ಮಸೂರಿ (ಆರ್‌.ಪಿ.ಬಯೋ-226) ಭತ್ತದ ಬೀಜದ ತಳಿ

ಕೆ.ನಿಂಗಜ್ಜ
ಗಂಗಾವತಿ:
ರೋಗ ನಿರೋಧಕ ಮತ್ತು ಅಧಿಕ ಇಳುವರಿ ನೀಡುವ ಸುಧಾರಿತ ಸೋನಾ ಮಸೂರಿ(ಆರ್‌ಪಿ ಬಯೋ-226) ಭತ್ತದ ತಳಿಯನ್ನು ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಈ ಮೊದಲು ಕೃಷಿ ಸಂಶೋಧನಾ ಕೇಂದ್ರದಲ್ಲೇ ಅಭಿವೃದ್ಧಿಪಡಿಸಿದ್ದ ಸೋನಾ ಮಸೂರಿ (5204) ಭತ್ತದ ತಳಿ ಇತ್ತೀಚಿನ ದುಂಡಾಣು ಅಂಗಮಾರಿ (ದೋಮಿ, ವೈರಲ್, ಬೆಂಕಿ)ರೋಗ ವ್ಯಾಪಕವಾಗಿತ್ತು. ಕಾಳು ಕಟ್ಟುವ ಸಮಯದಲ್ಲಿ ನಷ್ಟವಾಗುತ್ತಿತ್ತು. ವಿಪರೀತವಾದ ಔಷಧಿ ಸಿಂಪರಣೆಯಿಂದ ಈ ಅಕ್ಕಿಯನ್ನು ಊಟ ಮಾಡದಂತಹ ಸ್ಥಿತಿಯುಂಟಾಗುತ್ತಿತ್ತು. ವಿದೇಶಗಳಿಗೆ ರಫ್ತಾಗುತ್ತಿದ್ದ ಅಕ್ಕಿ ತಿರಸ್ಕಾರಕ್ಕೊಳಗಾಗಿತ್ತು. ಇಡೀ ಭತ್ತದ ಗದ್ದೆ ಒಣಗಿದಂತಾಗಿ ಭತ್ತದ ಕಾಳು ಜೊಳ್ಳಾಗಿ ಇಳುವರಿ ಎಕರೆಗೆ 10-20 ಚೀಲ ಕಡಿಮೆ ಇಳುವರಿ ಬರುತ್ತಿತ್ತು.

ಗಂಗಾವತಿ ಸೋನಾ ಮಸೂರಿ (ಬಿಪಿಟಿ-5204) ಭತ್ತದ ತಳಿಯಲ್ಲಿ ರೋಗ ನಿರೋಧಕ ಶಕ್ತಿ ಇರದೇ ಇರುವುದರಿಂದ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಭಾರತೀಯ ಭತ್ತ ಸಂಶೋಧನಾ ಸಂಸ್ಥೆ ಸಹಕಾರದಲ್ಲಿ ದುಂಡಾಣು ಅಂಗಮಾರಿ ರೋಗಕ್ಕೆ ನಿರೋಧಕತೆ ಹೊಂದಿರುವ ಎಕ್ಸ್‌ಎ21, ಎಕ್ಸ್‌ಎ13 ಮತ್ತು ಎಕ್ಸ್‌ಎ5 ಎಂಬ ಭತ್ತದ ವಂಶವಾಹಿನಿ(ಜಿನ್ಸ್‌)ಯಿಂದ ಸುಧಾರಿತ ಸೋನಾ ಮಸೂರಿ ಭತ್ತದ ತಳಿ ಕಂಡು ಹಿಡಿಯಲಾಗಿದೆ. ನೂತನ ಭತ್ತದ ತಳಿಯಿಂದ ಎಕರೆಗೆ 8-10 ಚೀಲ ಹೆಚ್ಚುವರಿ ಇಳುವರಿ ಬರುತ್ತದೆ. ಕನಿಷ್ಟ ಎರಡು ಬಾರಿ ಔಷಧಿ ಸಿಂಪರಣೆ ಖರ್ಚು (ಸುಮಾರು 12 ಸಾವಿರ ರೂ.) ಉಳಿತಾಯವಾಗಿ ಮೊದಲಿನ ಸೋನಾ ಮಸೂರಿಗಿಂತ 8 ದಿನ ಮುಂಚಿತವಾಗಿ ಕಟಾವಿಗೆ ಬರುತ್ತದೆ.

ಹಳೆಯ ಸೋನಾ ಮಸೂರಿ (ಬಿಪಿಟಿ-5204) ಭತ್ತದ ತಳಿಯಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವ ಕಾರಣ ವಿನೂತನವಾಗಿ ರೋಗನಿರೋಧಕ ಸುಧಾರಿತ ಸೋನಾ ಮಸೂರಿ(ಆರ್‌.ಪಿ. ಬಯೋ-226)ಭತ್ತದ ತಳಿ ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಎಕರೆಗೆ 8-10 ಸಾವಿರ ರೂ. ಔಷಧಿ ಸಿಂಪರಣೆ ಖರ್ಚು ಕಡಿಮೆಯಾಗುತ್ತದೆ. 8 ದಿನ ಮುಂಚಿತವಾಗಿ ಕಟಾವಿಗೆ ಬರುತ್ತದೆ. ಈಗಾಗಲೇ ಪ್ರಾಯೋಗಿಕವಾಗಿ ರೈತರ ಗದ್ದೆಯಲ್ಲಿ ಭತ್ತವನ್ನು ಬೆಳೆದು ಲಾಭ ತೋರಿಸಲಾಗಿದೆ.
ಡಾ| ಕೆ. ಮಹಾಂತಶಿವಯೋಗಯ್ಯ ತಳಿ ವಿಜ್ಞಾನಿ (ಭತ್ತ)

ಸುಧಾರಿಯ ಸೋನಾ ಮಸೂರಿ (ಆರ್‌ಪಿ ಬಯೋ-226)ಭತ್ತದ ತಳಿ ನಾಟಿ ಮಾಡುವುದರಿಂದ ರೈತರಿಗೆ ಅಧಿಕ ಲಾಭವಿದೆ. ಪ್ರಾಯೋಗಿಕವಾಗಿ ಕೃಷಿ ಸಂಶೋಧನಾ ಕೇಂದ್ರದ ಫಾರ್ಮ್ನಲ್ಲಿ ನಾಟಿ ಮಾಡಿ ಲಾಭ ತೆಗೆಯಲಾಗಿದ್ದು, ಬೀಜೋತ್ಪಾದನೆ ಕೂಡ ಇಲ್ಲೇ ಮಾಡಲಾಗಿದೆ. ಹಲವಾರು ರೈತರಿಗೆ ನಾಟಿ ಮಾಡಲು ನೂತನ ತಳಿ ಬೀಜಗಳನ್ನು ನೀಡಲಾಗಿದೆ.
• ಡಾ| ಎಸ್‌.ಬಿ. ಗೌಡರ್‌, ಕ್ಷೇತ್ರ ಅಧೀಕ್ಷಕರು ಕೃಷಿ ಸಂಶೋಧನಾ ಕೇಂದ್ರ ಗಂಗಾವತಿ

ಹೊಸ ಸೋನಾ ಮಸೂರಿ ತಳಿಯನ್ನು 5 ಎಕರೆ ಪ್ರದೇಶದಲ್ಲಿ ಕಳೆದ ವರ್ಷ ನಾಟಿ ಮಾಡಲಾಗಿತ್ತು. ಎಕರೆಗೆ 40 ಕ್ವಿಂಟಲ್ವರೆಗೆ ಇಳುವರಿ ಬಂದಿದೆ. ಅನ್ಯ ಭತ್ತದ ತಳಿಗಿಂತಲೂ 8 ದಿನ ಮುಂಚಿತವಾಗಿ ಕಟಾವಿಗೆ ಬಂದಿದೆ. ಖರ್ಚು ಸಹ ಕಡಿಮೆಯಾಗಿದ್ದು, ರೈತರು ಹೊಸ ಸೋನಾ ಮಸೂರಿ ತಳಿ ಭತ್ತದ ನಾಟಿ ಮಾಡಬೇಕು.
• ರುದ್ರಗೌಡ, ಆರ್‌ಪಿ ಬಯೋ-226 ಭತ್ತ ಬೆಳೆದ ರೈತ

ಟಾಪ್ ನ್ಯೂಸ್

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ

Siddaramaiah is the outgoing CM: R Ashok

Kalaburagi; ಸಿದ್ದರಾಮಯ್ಯ ಔಟ್‌ ಗೋಯಿಂಗ್ ಸಿಎಂ: ಆರ್ ಅಶೋಕ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.