ಮಂಠಾಳ: ಕಸ ವಿಲೇವಾರಿ ವ್ಯವಸ್ಥೆಗೆ ಚಾಲನೆ

Team Udayavani, Sep 14, 2019, 11:45 AM IST

14-Spectember-6

ಬಸವಕಲ್ಯಾಣ: ಮಂಠಾಳ ಗ್ರಾಮದಲ್ಲಿ ಕಸವಿಲೇವಾರಿ ಕೈಗಾಡಿಗಳಿಗೆ ಚಾಲನೆ ನೀಡಲಾಯಿತು. ಗ್ರಾಪಂ ಅಧ್ಯಕ್ಷೆ ಭಾರತಬಾಯಿ, ಉಪಾಧ್ಯಕ್ಷ ಗುರುಲಿಂಗಪ್ಪಾ ಮುಸ್ತಾಪೂರೆ, ಪಿಡಿಒ ಎ.ಕೆ.ಆನಂದ ಇದ್ದರು.

ಹುಮನಾಬಾದ: ಆರೋಗ್ಯವಂತ ಶರೀರಕ್ಕೆ ಪೌಷ್ಟಿಕ ಆಹಾರ ಸೇವನೆ ಅತ್ಯಂತ ಅವಶ್ಯವಾಗಿದೆ. ಗರ್ಭಿಣಿಯರು ತಪ್ಪದೇ ಇದನ್ನು ಪಾಲಿಸಿ ಹುಟ್ಟುವ ಮಗುವಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧಿಧೀಶೆ ಸರಸ್ವತಿ ದೇವಿ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಇಲಾಖೆಗಳು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಸಮತೋಲನ ಆಹಾರದಿಂದಾಗಿ ಶೇ.20 ಪುರುಷರು ಮತ್ತು ಶೇ.10 ಮಹಿಳೆಯರು ಅನಾರೋಗ್ಯದಿಂದ ನರಳುತ್ತಿದ್ದಾರೆ. ಮನೆಯಲ್ಲಿ ಮೊದಲಿನಂತೆ ಮನೆಯಲ್ಲಿ ಆಹಾರ ಸಿದ್ಧಪಡಿಸದೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿದ್ಧ ಆಹಾರ ಸೇವಿಸುತ್ತಿದ್ದಾರೆ. ಮಕ್ಕಳಿಗೆ ಮ್ಯಾಗಿ, ಕುರ್‌ಕುರೆ ಇನ್ನಿತರ ತಿನಿಸು ನೀಡುತ್ತಿರುವುದರ ಜೊತೆಗೆ ಮಾರುಕಟ್ಟೆಯಲ್ಲಿ ರಾಸಾಯನಿಕ ಸಿಂಪಡಿಸಿದ ಹಣ್ಣುಗಳೇ ಮಾರಾಟ ಆಗುತ್ತಿರುವ ಕಾರಣ, ನೈಸರ್ಗಿಕವಾಗಿ ಪಕ್ವಗೊಂಡ ಹಣ್ಣು ಲಭಿಸದಿರುವುದರಿಂದ ಲಭ್ಯವಿರುವ ಹಣ್ಣನ್ನೇ ಸೇವಿಸಿ ಮನುಷ್ಯನು ತನ್ನ ಆರೋಗ್ಯವನ್ನು ತಾನೇ ಹಾಳು ಮಾಡಿಕೊಳ್ಳುತ್ತಿದ್ದಾನೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೇ ಭವಿಷ್ಯದಲ್ಲಿ ಆಪತ್ತು ತಪ್ಪಿದ್ದಲ್ಲ ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಶಂಭುಲಿಂದ ದೇಸಾಯಿ ವಿಶೇಷ ಉಪನ್ಯಾಸ ನೀಡಿ, ಮೊದಲು ಬೇಗನೆ ಎದ್ದು ಧಾನ್ಯ ಬೀಸುವುದು ಮತ್ತು ಕುಟ್ಟಿ ನಸುಕಿನ ಜಾವದಲ್ಲೇ ರೊಟ್ಟಿ ಬಡಿಯುತ್ತಿದ್ದ ಹಿನ್ನೆಲೆಯಲ್ಲಿ ಕೆಲಸಕ್ಕಾಗಿ ತೆರಳುವ ಪುರಷರಿಗೆ ಸೋರ್ಯೋದಯಕ್ಕೂ ಮುಂಚೆ ಬಿಸಿ ರೊಟ್ಟಿ, ಸೇಂಗಾ ಮತ್ತಿತರ ಚಟ್ನಿ, ಕೆನೆ ಮೊಸರು ಮೊದಲಾದ ಪೌಷ್ಟಿಕ ಆಹಾರ ಸಿಗುತ್ತಿತ್ತು. ಈಗ ಮನೆಯಲ್ಲಿರುವ ಸತಿ-ಪತಿಗಳಿಬ್ಬರೂ ಕೆಲಸಕ್ಕೆ ಹೋಗುವ ಕಾರಣ ಆಹಾರ ತಯಾರಿಕೆಗೆ ಯಾರಿಗೂ ಸಮಯ ಸಿಗುತ್ತಿಲ್ಲ. ಜೊತೆಗೆ ಮಕ್ಕಳನ್ನು ಬೆಳಗ್ಗೆಯೇ ಶಾಲೆಗೆ ಕಳಿಸಬೇಕಾಗಿರುವ ಕಾರಣ ಜೀವನವೇ ಯಾಂತ್ರಿಕವಾಗಿ ಮಾರ್ಪಟ್ಟಿದೆ. ಇದರಿಂದ ಮನುಷ್ಯ ಸಿದ್ಧ ಆಹಾರದ ಮೊರೆ ಹೋಗುತ್ತಿದ್ದಾನೆ. ಇದು ಬದಲಾಗದ ಹೊರತು ಆರೋಗ್ಯ ಸುಧಾರಣೆಯಾಗದು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಮಾತನಾಡಿ, ನಾವೆಲ್ಲ ಚಿಕ್ಕವರಿರುವಾಗ ತಾಯಿ ಮುಷ್ಠಿ ತುತ್ತಿನ ಜೊತೆಗೆ ತಮ್ಮ ವಾತ್ಸಲ್ಯ ಮಿಶ್ರಣ ಮಾಡಿ ಕೊಡುತ್ತಿದ್ದ ಆಹಾರ ದೇಹ, ಮನಸ್ಸುಗಳೆರನ್ನೂ ಸಂತುಷ್ಟಗೊಳಿಸುತ್ತಿತ್ತು. ಈಗ ತಂದೆ ತಾಯಿ ಇಬ್ಬರು ನೌಕರಿಗೆ ಹೂಗುತ್ತಿರುವ ಕಾರಣ ಇಂದಿನ ಬದುಕು ಸಂಪೂರ್ಣ ಯಾತ್ರಿಕವಾಗಿ ಮಕ್ಕಳು ಪಾಲಕರ ಪ್ರೀತಿ, ವಾತ್ಸಲ್ಯದಿಂದ ವಂಚಿತರಾಗುತ್ತಿದ್ದಾರೆ. ಕಾರಣ ಮಕ್ಕಳು ದೈಹಿಕ ಸದೃಢತೆ ಕೊರತೆಯ ಜೊತೆಗೆ ಮಾನಸಿಕವಾಗಿಯೂ ಬಳಲುತ್ತಿವೆ. ಪಾಲಕರು ಹಣಕ್ಕಿಂತ ಮಕ್ಕಳ ಆರೋಗ್ಯ ಮತ್ತು ಉತ್ತಮ ಭವಿಷ್ಯ ನಿರ್ಮಿಸುವತ್ತ ಚಿತ್ತ ಹರಿಸಬೇಕಿದೆ ಎಂದರು.

ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ ಮಾತನಾಡಿ, ದೇಹಕ್ಕೆ ಒಂದೂ ಶ್ರಮ ಕೊಡದೇ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಮೊರೆ ಹೋಗುತ್ತಿರುವ ಕಾರಣ ಸರಳ ಹೆರಿಗೆ ಅಪರೂಪವಾಗಿದೆ. ಜೊತೆಗೆ ಕೆಲವು ವೈದ್ಯರು ಸರಳ ಹೆರಿಗೆ ಆಗುವ ಪ್ರಕರಣವನ್ನೂ ಹಣದ ಆಸೆಗಾಗಿ ಸಿಜೇರಿಯನ್‌ ಹೆರಿಗೆ ಮಾಡುವುದನ್ನು ಇದೀಗ ವ್ಯವಹಾರ ಮಾಡಿಕೊಂಡಿದ್ದಾರೆ. ಕಾರಣ ಮಹಿಳೆಯರು ಜೀವನಪೂರ್ತಿ ಆನಾರೋಗ್ಯದಿಂದ ಬಳಲಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ|ಅಶೋಕ ಮೈಲಾರಿ ಮಾತನಾಡಿ, ಊಟ ಸ್ವಾದಭರಿತವಾಗಿದೆ ಎಂದು ಬೇಕಾಬಿಟ್ಟಿ ತಿನ್ನುವುದು, ಕೆಲಸದ ಒತ್ತಡದ ಕಾರಣ ಅಲ್ಪೋಪಹಾರ ಸೇವಿಸಿ ಇಡೀ ದಿನ ಬರಿ ಹೊಟ್ಟೆಯಲ್ಲಿದ್ದರೆ ಅನಾರೋಗ್ಯ ಉಂಟಾಗುತ್ತದೆ. ಅತ್ತ ಅಲ್ಪ, ಇತ್ತ ಅತಿ ಈ ಎರಡರಲ್ಲಿ ಯಾವುದಕ್ಕೂ ಹಚ್ಚಿಕೊಳ್ಳದೇ ಹಿತ ಮತ್ತು ಮಿತ ಆಹಾರ ಸೇವಿಸುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಡಾ|ಗೋವಿಂದ ಮಾತನಾಡಿ, ಸ್ವಯಂ ಜಾಗೃತಿಯಾಗದ ಹೊರತು ಬದಲಾವಣೆ ಅಸಾಧ್ಯ. ಪೌಷ್ಠಿಕ ಆಹಾರ ಸಪ್ತಾಹ ಆಚರಣೆಗೆ ಸೀಮಿತಗೊಳ್ಳದೇ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಆರೋಗ್ಯ ಕಾಪಾಡಕೊಳ್ಳಲು ಸಾಧ್ಯ. ತಾಯಿ ಎದೆಹಾಲು ಮಗುವಿಗೆ ಅಮೃತಕ್ಕೆ ಸಮಾನ. ಆದರೆ ಇತ್ತೀಚಿನ ತಾಯಂದಿರು ಮಕ್ಕಳಿಗೆ ಎದೆ ಹಾಲು ಉಣಿಸುವುದರಿಂದ ಸೌಂದರ್ಯ ಕೆಡುತ್ತದೆಂಬ ನೆಪವೊಡ್ಡಿ ಬಾಟಲಿ ಹಾಲು ಕುಡಿಸಿ, ಪರೋಕ್ಷವಾಗಿ ಮಕ್ಕಳ ಅಪೌಷ್ಠಿಕತೆಗೆ ತಾಯಂದಿರೇ ಕಾರಣರಾಗುತ್ತಿದ್ದಾರೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಬಸಲಿಂಗಪ್ಪ ದೊಡ್ಮನಿ, ಪ್ರಧಾನ ಕಾರ್ಯದರ್ಶಿ ಸಿ.ಎಸ್‌.ಚನ್ನಪ್ಪ, ವಕೀಲ ವಿಜಯಕುಮಾರ ನಾತೆ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು. ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ಔಷ ಕಿಟ್ ವಿತರಿಸಲಾಯಿತು. ಇದೇ ವೇಳೆ ಪೌಷ್ಠಿಕ ಆಹಾರ ಪದಾರ್ಥಗಳ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. ಆಶಾದೇವಿ ಬಡದಾಳೆ ಪ್ರಾರ್ಥಿಸಿದರು. ಹಿರಿಯ ಆರೋಗ್ಯ ಸಹಾಯಕ ಶಿವಕುಮಾರ ಕಿವಡೆ ಸ್ವಾಗತಿಸಿದರು. ಹಿರಿಯ ಆರೋಗ್ಯ ಸಹಾಯಕ ತೀರ್ಥಪ್ಪ ಭೀಮಶೆಟ್ಟಿ ನಿರೂಪಿಸಿದರು. ಪಾರ್ವತಿ ವಂದಿಸಿದರು.

ಟಾಪ್ ನ್ಯೂಸ್

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

KAUP: ಸಂವಿಧಾನ ಉಳಿಸಿ ಬೃಹತ್‌ ಜಾಥಾ ಮತ್ತು ಸಾರ್ವಜನಿಕ ಸಭೆ

KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್‌ ರಾಜ್‌ ಮೌರ್ಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

15-uv-fusion

Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.