ವಾಹನ ಮಾಲಿನ್ಯ ಸಾರಿಗೆ ಇಲಾಖೆಗೆ ಗೊತ್ತೇ ಆಗೋದಿಲ್ವಂತೆ!
Team Udayavani, Sep 14, 2019, 12:29 PM IST
ಯಾದಗಿರಿ: ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿರುವ ಮಾಲಿನ್ಯ ತಪಾಸಣೆ ಕೇಂದ್ರದಲ್ಲಿ ಕಾರಿನ ಮಾಲಿನ್ಯ ತಪಾಸಣೆ ಮಾಡುತ್ತಿರುವುದು.
ಯಾದಗಿರಿ: ಪ್ರಸ್ತುತ ಸಾರಿಗೆ ನಿಯಮಾವಳಿಗಳಲ್ಲಿ ವಾಹನದ ಮಾಲಿನ್ಯ ತಪಾಸಣೆ ಕಾಲ ಕಾಲಕ್ಕೆ ಮಾಡಲಾಗಿದೆಯೋ? ವಾಹನ ಹೆಚ್ಚಿನ ಹೊಗೆ ಹೊರ ಬಿಡುತ್ತಿದೆಯೋ ಅಥವಾ ರಸ್ತೆಗಿಳಿದ ವಾಹನಕ್ಕೆ ವಿಮೆ ಮಾಡಿಸಲಾಗಿದೆಯೋ ಎನ್ನುವ ಅಂಶದ ಮಾಹಿತಿ ಸಾರಿಗೆ ಇಲಾಖೆ ಬಳಿಯೇ ಇರಲ್ಲ.
ಹೊಸದಾಗಿ ವಾಹನ ಖರೀದಿಸಿ ಬಳಿಕ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿಸಲಾಗುತ್ತದೆ. ಬಳಿಕ ಹೊಸ ವಾಹನಗಳಿಗೆ ಮಾಲಿನ್ಯ ತಪಾಸಣೆಗೆ ಒಂದು ವರ್ಷದವರೆಗೆ ತಪಾಸಣೆ ಮಾಡಿಸುವುದರಿಂದ ವಿನಾಯಿತಿ ಇದೆ ಎನ್ನುತ್ತವೆ, ಸಾರಿಗೆ ಇಲಾಖೆ ಮೂಲಗಳು ಬಳಿಕ ಎಲ್ಲಾ ವಾಹನಗಳಿಗೆ ಕಡ್ಡಾಯವಾಗಿ 6 ತಿಂಗಳಿಗೊಮ್ಮೆ ಮಾಲಿನ್ಯ ತಪಾಸಣೆ ಮಾಡಿಸುವುದು ಕಡ್ಡಾಯವಾಗಿದೆ. ವಿಪರ್ಯಾಸವೆಂದರೇ ಎಷ್ಟು ವಾಹನಗಳು ಮಾಲಿನ್ಯ ತಪಾಸಣೆ ಮಾಡಿಸಿವೆ, ಎಷ್ಟು ವಾಹನಗಳು ಪರಿಸರಕ್ಕೆ ಹಾನಿಯಾಗುವ ಅಪಾಯಕಾರಿ ಹೊಗೆ ಹೊರ ಹಾಕುತ್ತಿವೆ ಎನ್ನುವ ಮಾಹಿತಿ ಸಾರಿಗೆ ಇಲಾಖೆಗೆ ಗೊತ್ತೇ ಆಗಲ್ವಂತೆ.
ಪ್ರಮುಖವಾಗಿ ವಾಹನಗಳ ತಪಾಸಣೆ ವೇಳೆ ಅಷ್ಟೇ ವಾಹನ ಸವಾರರಿಂದ ದಾಖಲೆಗಳು ಪರಿಶೀಲಿಸುವ ವೇಳೆ ಮಾತ್ರ ಮಾಲಿನ್ಯ ತಪಾಸಣೆ ಮತ್ತು ವಿಮೆ ಮಾಡಿಸಲಾಗಿದೆಯೇ ಇಲ್ಲವೆ ಎನ್ನುವ ಕುರಿತು ಮಾಹಿತಿ ಬಹಿರಂಗವಾಗಲಿದೆ. ಅದಲ್ಲದೇ ವಾಹನಗಳನ್ನು ಮಾರಾಟ ಮಾಡುವ ವೇಳೆ ಒಬ್ಬರ ಹೆಸರಿಂದ ಇನ್ನೊಬ್ಬರಿಗೆ ವರ್ಗಾಯಿಸುವಾಗ ಕಡ್ಡಾಯವಾಗಿ ದಾಖಲೆ ಗಮನಿಸಲಾಗುತ್ತದೆ.
ಸಾರಿಗೆ ಇಲಾಖೆಯಲ್ಲಿನ ಇಂತಹ ಅವೈಜ್ಞಾನಿಕ ಕಾರಣದಿಂದಾಗಿ ಅದೆಷ್ಟೋ ವಾಹನ ಸವಾರರು ಸಮಯಕ್ಕೆ ಸರಿಯಾಗಿ ಮಾಲಿನ್ಯ ತಪಾಸಣೆ ಮತ್ತು ವಿಮೆ ಮಾಡಿಸದೇ ವಾಹನಗಳನ್ನು ಚಲಾಯಿಸುತ್ತಿರುವುದು ಹೆಚ್ಚಾಗಿದೆ. ಇದರಿಂದಾಗಿ ಪರಿಸರದ ಮೇಲೆ ಹಾನಿಯಾಗುವುದಲ್ಲದೇ ಗ್ರಾಮೀಣ ಭಾಗದ ಜನರಿಗೆ ಸೂಕ್ತ ತಿಳುವಳಿಕೆಯಿಲ್ಲದೇ ಅಪಘಾತ ಸಂದರ್ಭದಲ್ಲಿ ವಿಮೆ ಇಲ್ಲದಿರುವುದು ಸಾಕಷ್ಟು ತೊಂದರೆ ಅನುಭವಿಸುವಂತಾಗುತ್ತದೆ.
ಅದಲ್ಲದೇ ಸಾರಿಗೆ ತಿದ್ದುಪಡಿ ನಿಯಮದಂತೆ ವಿಮೆಯಿಲ್ಲದೇ ವಾಹನ ಚಲಾಯಿಸಿದರೆ ಮೊದಲ ಬಾರಿಗೆ 2 ಸಾವಿರ ರೂಪಾಯಿ ದಂಡ ವಿಸಲಾಗುತ್ತದೆ. ಎರಡನೇ ಬಾರಿಗೆ ತಪ್ಪೆಸಗಿದರೆ ಆಗ 4 ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ ಎನ್ನುತ್ತದೆ ನಿಯಮ. ಅಲ್ಲದೇ ಮಾಲಿನ್ಯ ತಪಾಸಣೆ ಮಾಡಿಸಿದ ದಾಖಲೆ ಇಲ್ಲದಿದ್ದರೂ 1 ಸಾವಿರ ರೂಪಾಯಿ ವರೆಗೆ ದಂಡ ವಿಧಿಸಲಾಗುತ್ತದೆ.
ಮಾಲಿನ್ಯ ತಪಾಸಣೆ ಕೇಂದ್ರ: ಜಿಲ್ಲೆಯಲ್ಲಿ ಒಟ್ಟು 6 ಮಾಲಿನ್ಯ ತಪಾಸಣೆ ಕೇಂದ್ರಗಳಿವೆ. ಜಿಲ್ಲಾ ಕೇಂದ್ರದಲ್ಲಿ 3 ಹಾಗೂ ಶಹಾಪುರದಲ್ಲಿ 2 ಕೇಂದ್ರಗಳಿದ್ದು, ಅವುಗಳಿಗೆ ಸಾರಿಗೆ ಇಲಾಖೆಯಿಂದ ಪರವಾನಗಿ ನೀಡಲಾಗಿದೆ. ಈ ಕೇಂದ್ರಗಳ ಮೇಲೆ ಇಲಾಖೆ ನಿಯಂತ್ರಣ ಇರುವುದಿಲ್ಲ. ಇಲ್ಲಿ ವಾಹನದ ಮಾಲಿಕರೇ ನೇರವಾಗಿ ಬಂದು ತಮ್ಮ ವಾಹನದ ದಾಖಲೆ, ವಾಹನ ಸಂಖ್ಯೆ ನಮೂದಿಸಿ ಮಾಲಿನ್ಯ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ. ಮಾಲಿನ್ಯ ತಪಾಸಣೆ ಪಾರದರ್ಶಕವಾಗಿ ಆನ್‌ಲೈನ್ ಮೂಲಕ ನಡೆದು ಸಾರಿಗೆ ಇಲಾಖೆಯೇ ವೆಬ್‌ಸೈಟ್ ಮೂಲಕ ವರದಿ ನೀಡುತ್ತದೆ.
ಜಿಲ್ಲೆಯಲ್ಲಿ 2019ರ ಸೆ. 12ರ ಅಂಕಿ ಅಂಶಗಳ ಸಮೇತ ನೋಡುವುದಾದರೆ, ದ್ವಿಚಕ್ರ ವಾಹನ 1,20,841 ನೋಂದಣಿಯಾಗಿವೆ. ತ್ರಿಚಕ್ರ 10,778 ವಾಹನಗಳಿವೆ. ನಾಲ್ಕು ಚಕ್ರ 1,290 ಪ್ರಯಾಣಿಕರ ವಾಹನಗಳಿವೆ. 306 ಶಾಲಾ ಮಕ್ಕಳ ವಾಹನಗಳಿವೆ. 646 ಮ್ಯಾಕ್ಸೀ ಕ್ಯಾಬ್ ವಾಹನಗಳಿವೆ. ಸರಕು ಸಾಗಣೆ, ಸಣ್ಣ ಗಾತ್ರದ ವಾಹನಗಳು 987, ಮದ್ಯಮ ಗಾತ್ರದ ವಾಹನಗಳು 2,887, ದೊಡ್ಡ ಗಾತ್ರದ ವಾಹನಗಳು 2,358 ನೋಂದಣಿಯಾಗಿವೆ. ಟ್ಯಾಂಕರ್ ಸೇರಿದಂತೆ ಭಾರಿ ಗಾತ್ರದ 1,253 ವಾಹನಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
Bengaluru: ಸಾಲ ಕೊಡಿಸುವುದಾಗಿ 37 ಲಕ್ಷ ವಂಚನೆ
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
Bengaluru: ಶಾಲೆ ಮುಖ್ಯಸ್ಥನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ
Bengaluru: ಬೈಕ್ ಡಿಕ್ಕಿ: ರಾತ್ರಿಯಿಡೀ ರಸೇಲಿ ನರಳಿ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.