ವಾಹನಗಳು ಲಕ್ಷ ಲಕ್ಷ… ಮಾಲಿನ್ಯ ತಪಾಸಣೆ ಕೇಂದ್ರ ಬರೀ ಎರಡು!

Team Udayavani, Sep 14, 2019, 3:09 PM IST

Udayavani Kannada Newspaper

ತಿಪ್ಪೇಸ್ವಾಮಿ ನಾಕಿಕೆರೆ
ಚಿತ್ರದುರ್ಗ: ಜಿಲ್ಲೆಯಲ್ಲಿರುವ ವಾಹನಗಳ ಸಂಖ್ಯೆ ಬರೋಬ್ಬರಿ 3.60 ಲಕ್ಷ. ಆದರೆ, ಇಷ್ಟೂ ವಾಹನಗಳ ಮಾಲಿನ್ಯ ತಪಾಸಣೆಗೆ ಇರುವ ಕೇಂದ್ರಗಳ ಸಂಖ್ಯೆ ಕೇವಲ ಎರಡು.

ಹೊಗೆ ತಪಾಸಣೆ ಅಥವಾ ಮಾಲಿನ್ಯ ತಪಾಸಣೆ ಕುರಿತು ಜಿಲ್ಲೆಯ ವಾಹನ ಸವಾರರು, ಮಾಲೀಕರಲ್ಲಿ ಇರುವ ಗಾಂಭೀರ್ಯತೆಯನ್ನು ಈ ಅಂಕಿ ಅಂಶಗಳು ಎತ್ತಿ ತೋರಿಸುತ್ತವೆ.

ಈ ಹಿಂದೆಯೂ ಪೊಲೀಸರು ಎಮಿಷನ್‌ ಟೆಸ್ಟ್‌ ಮಾಡಿಸಿದ ಪ್ರಮಾಣ ಪತ್ರ ಇಲ್ಲದಕ್ಕೆ ದಂಡ ಹಾಕುತ್ತಿದ್ದರು. ಆದರೆ, ಇದು ದೊಡ್ಡ ಮಟ್ಟದ ವಾಹನಗಳಿಗೆ ಮಾತ್ರ ಹೆಚ್ಚು ಪರಿಣಾಮಕಾರಿಯಾಗಿತ್ತು. ಉಳಿದಂತೆ ಅಷ್ಟೇನು ಗಂಭೀರವಾಗಿರಲಿಲ್ಲ ಎನ್ನುವುದು ಕೆಲ ವಾಹನ ಸವಾರರ ಅಭಿಪ್ರಾಯ.

ಈಗ ಕೇಂದ್ರ ಸರ್ಕಾರ ಸಂಚಾರಿ ನಿಯಮಗಳನ್ನು ಬಿಗಿಗೊಳಿಸಿ, ದಂಡದ ಪ್ರಮಾಣವನ್ನು ದೊಡ್ಡ ಮಟ್ಟದಲ್ಲಿ ಏರಿಸಿದ್ದರಿಂದ ಸಹಜವಾಗಿ ವಾಹನ ಸವಾರರು ಎಮಿಷನ್‌ ಸೆಂಟರ್‌ಗಳ ವಿಳಾಸಗಳನ್ನು ಹುಡುಕಾಡುತ್ತಿದ್ದಾರೆ.

ಸುಮಾರು 16 ಲಕ್ಷ ಜನ ಸಂಖ್ಯೆ, 3,60,343 ವಾಹನಗಳಿವೆ. ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯಲ್ಲಿ 5 ತಾಲೂಕು ಕೇಂದ್ರಗಳಿವೆ. ಎಲ್ಲಾ ವಾಹನಗಳು ಪ್ರತಿ 6 ತಿಂಗಳಿಗೊಮ್ಮೆ ತಪಾಸಣೆ ಮಾಡಿಸಬೇಕು. ಹೀಗಿದ್ದರೂ ಇಲ್ಲಿರುವ ತಪಾಸಣಾ ಕೇಂದ್ರಗಳ ಸಂಖ್ಯೆ ಕೇವಲ 2. ಈ ಎರಡು ಕೇಂದ್ರ ಕೂಡಾ ಚಿತ್ರದುರ್ಗ ನಗರದಲ್ಲೇ ಇವೆ. ಉಳಿದ ಐದೂ ತಾಲೂಕು ಕೇಂದ್ರದಲ್ಲಿ ಮಾಲಿನ್ಯ ತಪಾಸಣೆ ಅಷ್ಟಕ್ಕಷ್ಟೇ.

ಸದ್ಯ ಕಾರ್ಯನಿರ್ವಹಿಸುತ್ತಿರುವ ಮಾಲಿನ್ಯ ತಪಾಸಣೆ ಕೇಂದ್ರಗಳು ಸಂಪೂರ್ಣ ಆನ್‌ಲೈನ್‌ ಆಗಿವೆ. ಹಾಗಾಗಿ ಕೈ ಬರವಣಿಗೆಯ ಪ್ರಮಾಣ ಪತ್ರಗಳನ್ನು ಪೊಲೀಸರು ನಿರಾಕರಿಸುತ್ತಾರೆ. ಈವರೆಗೆ ಈ ಕೇಂದ್ರಗಳ ಬಗ್ಗೆ ಆರ್‌ಟಿಒ ಕಚೇರಿಗೆ ಯಾವುದೇ ದೂರುಗಳು ದಾಖಲಾಗಿಲ್ಲ.

ಕೇಂದ್ರ ಸರ್ಕಾರ ದಂಡದ ಪ್ರಮಾಣ ಹೆಚ್ಚಳ ಮಾಡಿದ್ದರಿಂದ ತಪಾಸಣೆ ಮಾಡುವ ಕೇಂದ್ರಗಳನ್ನು ತೆರೆಯಲು ನಿಧಾನವಾಗಿ ಆಸಕ್ತಿ ತೋರಿಸುತ್ತಿದ್ದಾರೆ. ಈಗಾಗಲೇ ಚಳ್ಳಕೆರೆ ಹಾಗೂ ಹಿರಿಯೂರು ನಗರದಲ್ಲಿ ಕೇಂದ್ರಗಳನ್ನು ತೆರೆಯಲು ಎರಡು ಅರ್ಜಿಗಳು ಸಲ್ಲಿಕೆಯಾಗಿದ್ದು, 15 ದಿನಗಳಲ್ಲಿ ಕಾರ್ಯನಿರ್ವಹಿಸಲಿವೆ. ಹೊಸದುರ್ಗ, ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳಲ್ಲಿ ಕೇಂದ್ರಗಳಿಲ್ಲ. ನಿರ್ದಿಷ್ಟವಾಗಿ ತಪಾಸಣೆ ಪ್ರಮಾಣ ಪತ್ರಕ್ಕಾಗಿ ನಾವು ದಂಡ ಹಾಕಿಲ್ಲ ಎನ್ನುತ್ತಾರೆ ಆರ್‌ಟಿಒ ಜಿ.ಎಸ್‌. ಹೆಗಡೆ

ಟಾಪ್ ನ್ಯೂಸ್

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

up

Ranji match: ಉತ್ತರಪ್ರದೇಶ ಬೃಹತ್‌ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

siddanna-2

Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

up

Ranji match: ಉತ್ತರಪ್ರದೇಶ ಬೃಹತ್‌ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.