ಪಾರ್ಕಿಂಗ್‌ ಸಮಸ್ಯೆ ಪರಿಹಾರ ಅಗತ್ಯ


Team Udayavani, Sep 15, 2019, 5:15 AM IST

as-14

ಮಂಗಳೂರು ನಗರದಲ್ಲಿ ಪಾರ್ಕಿಂಗ್‌ ಕೊರತೆ ಪ್ರಮುಖ ಸಮಸ್ಯೆಗಳಲ್ಲೊಂದು. ನಗರ ಬೆಳೆದ, ಬೆಳೆಯುತ್ತಿರುವ ಗತಿಗೆ ಪೂರಕವಾಗಿ ಇಲ್ಲಿ ಪಾರ್ಕಿಂಗ್‌ ಸೌಲಭ್ಯಗಳಿಲ್ಲ. ಪಾರ್ಕಿಂಗ್‌ಗಾಗಿ ಮಹಾನಗರ ಪಾಲಿಕೆ ರೂಪಿಸಿದ ಯೋಜನೆಗಳು ದಶಕಕಗಳಿಂದ ಕಡತಗಳಲ್ಲೇ, ಪ್ರಸ್ತಾವನೆಯಲ್ಲೇ ಸುತ್ತು ಹೊಡೆಯುತ್ತಿವೆ. ವಾಹನ ಚಾಲಕರು ವಾಹನ ನಿಲುಗಡೆಗೆ ಅಲೆದಾಡುವ ಪರಿಸ್ಥಿತಿ ಇದೆ. ಎಲ್ಲಿಯಾದರೂ ಒಂದು ಕಡೆ ಜಾಗ ಸಿಕ್ಕಿದರೆ ಅದು ಅನಧಿಕೃತ ಪಾರ್ಕಿಂಗ್‌ಗಾಗಿ ದುಬಾರಿ ದಂಡದ ಆತಂಕ ಕಾಡುತ್ತದೆ.

ಹೊಸ ಮೋಟಾರ್‌ ಕಾಯ್ದೆ ಜಾರಿಗೆ ಬಂದಿದೆ. ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳುತ್ತಿದೆ. ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸಲಾಗುತ್ತದೆ. ಅನಧಿಕೃತ ಪಾರ್ಕಿಂಗ್‌ಗೆ 1,000 ರೂ. ವರೆಗೆ ದಂಡ ತೆರಬೇಕಾಗುತ್ತದೆ. ದಂಡ ವಿಧಿಸುವುದಕ್ಕೆ ಆಕ್ಷೇಪವಿಲ್ಲ. ಆದರೆ ಪೂರಕ ಸೌಲಭ್ಯಗಳನ್ನು ಕಲ್ಪಿಸುವ ಹೊಣೆಗಾರಿಕೆ ಕೂಡಾ ದಂಡ ವಿಧಿಸುವ ವ್ಯವಸ್ಥೆಯ ಮೇಲಿರುತ್ತದೆ. ಮಂಗಳೂರು ನಗರದಲ್ಲಿ ಪಾರ್ಕಿಂಗ್‌ ಕೊರತೆ ಪ್ರಮುಖ ಸಮಸ್ಯೆಗಳಲ್ಲೊಂದು. ನಗರ ಬೆಳೆದ, ಬೆಳೆಯುತ್ತಿರುವ ಗತಿಗೆ ಪೂರಕವಾಗಿ ಇಲ್ಲಿ ಪಾರ್ಕಿಂಗ್‌ ಸೌಲಭ್ಯಗಳಿಲ್ಲ. ಪಾರ್ಕಿಂಗ್‌ಗಾಗಿ ಮಹಾನಗರ ಪಾಲಿಕೆ ರೂಪಿಸಿದ ಯೋಜನೆಗಳು ದಶಕಗಳಿಂದ ಕಡತಗಳಲ್ಲೇ, ಪ್ರಸ್ತಾವನೆಯಲ್ಲೇ ಸುತ್ತು ಹೊಡೆಯುತ್ತಿವೆ. ವಾಹನ ಚಾಲಕರು ವಾಹನ ನಿಲುಗಡೆಗೆ ಅಲೆದಾಡುವ ಪರಿಸ್ಥಿತಿ ಇದೆ. ಎಲ್ಲಿಯಾದರೂ ಒಂದು ಕಡೆ ಜಾಗ ಸಿಕ್ಕಿದರೆ ಅದು ಅನಧಿಕೃತ ಪಾರ್ಕಿಂಗ್‌ಗಾಗಿ ದುಬಾರಿ ದಂಡದ ಆತಂಕ ಕಾಡುತ್ತದೆ.

ಮಂಗಳೂರು ನಗರದಲ್ಲಿ ಪ್ರಮುಖವಾಗಿ ಹಳೆ ಬಸ್‌ನಿಲ್ದಾಣ, ಕ್ಲಾಕ್‌ಟವರ್‌ನಿಂದ ಎ.ಬಿ.ಶೆಟ್ಟಿ ರಸ್ತೆಯಲ್ಲಿ ನೆಹರೂ ಮೈದಾನ್‌ ಬದಿಯ ರಸ್ತೆ , ವಿವಿ ಕಾಲೇಜು ಮುಂಭಾಗ, ಲಾಲ್‌ಭಾಗ್‌ನಿಂದ ಲೇಡಿಹಿಲ್‌ ವೃತ್ತದವರೆಗಿನ ರಸ್ತೆಯಲ್ಲಿ ಮಂಗಳಾ ಸ್ಟೇಡಿಯಂನ ಬಳಿಯ ರಸ್ತೆ , ಸ್ಟೇಟ್‌ಬ್ಯಾಂಕಿನ ಅಕ್ಕಪಕ್ಕದ ರಸ್ತೆಗಳು ಸೇರಿದಂತೆ ಹೀಗೆ ಕೆಲವು ಜಾಗಗಳಲ್ಲಿ ಪಾರ್ಕಿಂಗ್‌ ಜಾಗಗಳನ್ನು ಗುರುತಿಸಿ ಬೋರ್ಡ್‌ ಹಾಕಲಾಗಿದೆ. ಇದು ಹೊರತು ಪಡಿಸಿದರೆ ಬಹಳಷ್ಟು ಕಡೆಗಳಲ್ಲಿ ಅಧಿಕೃತವಾಗಿ ಪಾರ್ಕಿಂಗ್‌ ವ್ಯವಸ್ಥೆಗಳಿಲ್ಲ. ನಗರದ ಹೃದಯಭಾಗದ ಹಂಪನಕಟ್ಟೆ , ಸ್ಟೇಟ್‌ಬ್ಯಾಂಕ್‌, ಬಂದರು, ಕದ್ರಿ , ಲಾಲ್‌ಬಾಗ್‌, ಉರ್ವಾಸ್ಟೋರ್‌, ಕುಳೂರು, ಕಾವೂರು, ಕೆಪಿಟಿ , ಬಲ್ಮಠ , ಕಂಕನಾಡಿ, ವೆಲೆನ್ಸಿಯಾ, ಮಂಗಳಾದೇವಿ , ಪಂಪ್‌ವೆಲ್‌, ಪಿವಿಎಸ್‌ ವೃತ್ತದಿಂದ ಕರಂಗಲ್ಪಾಡಿ, ಪಿವಿಎಸ್‌ ವೃತ್ತದಿಂದ ಲಾಲ್‌ಬಾಗ್‌ವರೆಗಿನ ಪ್ರದೇಶ , ಕೊಟ್ಟಾರ ಚೌಕಿ , ಬಿಕರ್ನಕಟ್ಟೆ ಕೈಕಂಬ ಮುಂತಾದ ಪ್ರದೇಶಗಳಲ್ಲಿ ವಾಹನ ಪಾರ್ಕಿಂಗ್‌ ತಾಣಗಳಿಲ್ಲ. ರಸ್ತೆಬದಿಗಳಲ್ಲಿ ಇಲ್ಲವೆ ಯಾರದ್ದೊ ವಾಣಿಜ್ಯ ಮಳಿಗೆಗಳ ಜಾಗದಲ್ಲಿ ನಿಲ್ಲಿಸುವ ಅನಿವಾರ್ಯ ಇದೆ. ಕೆಲವು ಬಾರಿ ಪಾರ್ಕಿಂಗ್‌ ವಿಚಾರದಲ್ಲಿ ಸಂಘರ್ಷಗಳು ನಡೆಯುವುದೂ ಇದೆ. ಕೆಲವು ಪ್ರದೇಶದಲ್ಲಿ ಪಾವತಿ ಪಾರ್ಕಿಂಗ್‌ ತಾಣಗಳಿದ್ದರೂ ಇದರ ನಿರ್ವಹಣೆ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಪಾರ್ಕಿಂಗ್‌ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.

ಬಹುಅಂತಸ್ತು ಪಾರ್ಕಿಂಗ್‌ ವ್ಯವಸ್ಥೆ ಸೂಕ್ತ
ಮಂಗಳೂರು ನಗರದಲ್ಲಿ ಸ್ಥಳಾವಕಾಶ ಕೊರತೆ ತೀವ್ರವಾಗಿದೆ. ಇದರಿಂದಾಗಿ ಪಾರ್ಕಿಂಗ್‌ಗೆ ವಿಶಾಲವಾದ ಜಾಗ ಹೊಂದಿಸಿಕೊಳ್ಳುವುದು ಕಷ್ಟ ಸಾಧ್ಯ. ಜಾಗದ ಬೆಲೆ ವಿಪರೀತವಾಗಿರುವುದರಿಂದ ಭೂಸ್ವಾಧೀನ ಪ್ರಕ್ರಿಯೆಯೂ ಕ್ಷಿಷ್ಟಕರ. ಈ ಹಿನ್ನೆಲೆಯಲ್ಲಿ ಲಭ್ಯ ಜಾಗಗಳಲ್ಲೇ ಅತೀ ಹೆಚ್ಚು ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡುವುದು ಅನಿವಾರ್ಯ . ಈ ಹಿನ್ನಲೆಯಲ್ಲಿ ಈಗಾಗಲೇ ದೇಶದ ಇತರ ಮಹಾನಗರಗಳಲ್ಲಿ ಇರುವ ಬಹು ಅಂತಸ್ತು ವಾಹನ ಪಾರ್ಕಿಂಗ್‌ ವ್ಯವಸ್ಥೆಯನ್ನು ಮಂಗಳೂರಿನಲ್ಲೂ ಅಳವಡಿಸಿಕೊಳ್ಳಬಹುದಾಗಿದೆ. ಕೆಲವು ಕಡೆ ಸರಕಾರಿ ಜಾಗವನ್ನು ಬಳಸಿಕೊಂಡು ಅಥವಾ ಖಾಸಗಿ ಜಾಗವನ್ನು ಪಡೆದುಕೊಂಡು ಸರಕಾರಿ- ಖಾಸಗಿ ಸಹಭಾಗಿತ್ವದೊಂದಿಗೆ ಬಹು ಅಂತಸ್ತು ವಾಹನ ಪಾರ್ಕಿಂಗ್‌ಗಳನ್ನು ರೂಪಿಸಬಹುದಾಗಿದೆ.

ನನೆಗುದಿಯಲ್ಲಿರುವ ಯೋಜನೆ
ನಗರದ ಹಂಪನಕಟ್ಟೆಯಲ್ಲಿ ಈ ಹಿಂದಿನ ಸರ್ವಿಸ್‌ ಬಸ್‌ನಿಲ್ದಾಣ ಜಾಗದಲ್ಲಿ ಬಹು ಅಂತಸ್ತು ವಾಹನ ನಿಲುಗಡೆ ಸಂಕೀರ್ಣ ನಿರ್ಮಿಸುವ ಪ್ರಸ್ತಾವನೆ ರೂಪಿಸಲ್ಪಟ್ಟು ದಶಕ ಕಳೆದಿದೆ. ಆದರೆ ಇನ್ನೂ ಕೂಡ ಇದಕ್ಕೆ ಸಾಕಾರ ಭಾಗ್ಯ ಬಂದಿಲ್ಲ. ಇದೀಗ ಸ್ಮಾರ್ಟ್‌ ನಗರ ಯೋಜನೆಯಲ್ಲಿ ಇದನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಹಳೆ ಸರ್ವಿಸ್‌ ಬಸ್‌ನಿಲ್ದಾಣದಲ್ಲಿ 2.15 ಎಕರೆ ಜಾಗದಲ್ಲಿ ಬಹುಮಹಡಿ ವಾಣಿಜ್ಯ ಕಮ್‌ ವಾಹನ ನಿಲುಗಡೆ ಕಾಂಪ್ಲೆಕ್ಸ್‌ ನಿರ್ಮಿಸುವ ಯೋಜನೆ ಇದಾಗಿದೆ.

ಇದರಲ್ಲಿ ಸುಮಾರು 600 ಕಾರುಗಳಿಗೆ ನಿಲುಗಡೆ ಕಲ್ಪಿಸಲು ಉದ್ದೇಶಿಸಲಾಗಿದೆ. ಇದು ಕಾರ್ಯಗತಕೊಂಡರೆ ಹಂಪನಕಟ್ಟೆಯಲ್ಲಿ ಪಾರ್ಕಿಂಗ್‌ ಸಮಸ್ಯೆಗೆ ಒಂದಷ್ಟು ಪರಿಹಾರ ದೊರೆಯಲಿದೆ. ಈ ಯೋಜನೆಯನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರುವ ಕಾರ್ಯ ಅಗತ್ಯ.

ಸ್ಮಾರ್ಟ್‌ ಪಾರ್ಕಿಂಕ್‌ ಯೋಜನೆ ಜಾರಿಯಾಗಲಿ
ಮಂಗಳೂರು ನಗರ ಸ್ಮಾರ್ಟ್‌ ರೂಪವನ್ನು ಪಡೆಯುತ್ತಿದೆ. ಇದರ ಜತೆಗೆ ನಗರ ಸ್ಮಾರ್ಟ್‌ ಆಗುವಾಗ ವ್ಯವಸ್ಥೆಗಳು ಕೂಡಾ ಸ್ಮಾರ್ಟ್‌ ಆದರೆ ಅದಕ್ಕೆ ಇನ್ನಷ್ಟು ಮೆರುಗು ಲಭಿಸುತ್ತದೆ. ಈ ಸಾಲಿನಲ್ಲಿ ಗೋಚರಿಸುವ ಅಂಶಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಪ್ರಮುಖವಾದುದು. ಇಂತಹದೊಂದು ವ್ಯವಸ್ಥೆಯನ್ನು ಈಗಾಗಲೇ ಬೆಂಗಳೂರಿನಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ರೂಪಿಸಿದ್ದು ನಗರದಾದ್ಯಂತ ಅನುಷ್ಠಾನಗೊಳ್ಳುತ್ತಿದೆ.

ಸ್ಮಾರ್ಟ್‌ ಪಾರ್ಕಿಂಗ್‌ಗೆ ಪೂರಕವಾಗಿ ವಾಹನ ಸವಾರರಿಗೆ ನಿಲುಗಡೆ ಬಗ್ಗೆ ಮಾಹಿತಿ ಪಡೆಯಲು ಮೊಬೈಲ್‌ ಆ್ಯಪ್‌ ಸಹಾಯ ಮಾಡುತ್ತದೆ. ನಗರದ ಪ್ರಮುಖ ರಸ್ತೆಗಳ ಬದಿಗಳಲ್ಲಿ ಸ್ಮಾರ್ಟ್‌ಸ್ಕ್ರೀನ್‌ ಪೋಲ್‌ ಅಳವಡಿಸಲಾಗುತ್ತದೆ. ಈ ಪೋಲ್‌ಗ‌ಳಲ್ಲಿ ಮುಂದಿನ ಪಾರ್ಕಿಂಗ್‌
ಸ್ಥಳದ ವಿವರ, ಅಲ್ಲಿ ಎಷ್ಟು ವಾಹನಗಳಿಗೆ ನಿಲುಗಡೆಗೆ ಅವಕಾಶವಿದೆ ಎಂಬ ಮಾಹಿತಿ ಕ್ಷಣಕ್ಷಣಕ್ಕೆ ಲಭ್ಯವಾಗುತ್ತಲಿರುತ್ತದೆ. ಮಂಗಳೂರಿನಲ್ಲಿ ಸಾಧ್ಯವಿರುವ ಕಡೆ ಈ ರೀತಿಯ ವ್ಯವಸ್ಥೆಯತ್ತಲೂ ಗಮನಹರಿಸಬಹುದಾಗಿದೆ.

ಸೂಕ್ತ ಪಾರ್ಕಿಂಗ್‌ ವ್ಯವಸ್ಥೆಗಳು ಅವಶ್ಯ
ಮಂಗಳೂರಿನಲ್ಲಿ ಸ್ಮಾರ್ಟ್‌ ನಗರ ಯೋಜನೆ ಅನುಷ್ಠಾನದಲ್ಲಿದೆ. ಮಂಗಳೂರು ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ ಮತ್ತು ಪಾಲಿಕೆ ಕೇಂದ್ರವಾಗಿದೆ. ಪ್ರಸಿದ್ಧ ಧಾರ್ಮಿಕ ಕೇಂದ್ರಗಳು, ಪ್ರವಾಸಿತಾಣಗಳು ಇರುವುದರಿಂದ ಹೊರ ಪ್ರದೇಶಗಳಿಂದ ಜನರು ಆಗಮಿಸುತ್ತಾರೆ. ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ದಿನವೊಂದಕ್ಕೆ ಮಂಗಳೂರಿಗೆ ಆಗಮಿಸಿ ನಿರ್ಗಮಿಸುತ್ತಾರೆ. ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ತಿಂಗಳಿಗೆ ಸುಮಾರು 2,500 ದ್ವಿಚಕ್ರ ವಾಹನಗಳು, ಕಾರು, ಘನವಾಹನಗಳು ಸುಮಾರು 1000 ರಷ್ಟು ನೋಂದಣಿಯಾಗುತ್ತಿವೆ. ಪ್ರಸ್ತುತ ಮಂಗಳೂರು ಪ್ರಾದೇಶಿಕ ಕಚೇರಿ ವ್ಯಾಪ್ತಿ ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನಲ್ಲಿ 3.22 ಲಕ್ಷ ದ್ವಿಚಕ್ರವಾಹನಗಳು, 97,000 ಚತುಷcಕ್ರ ವಾಹನಗಳು ಸೇರಿ 4.10 ಲಕ್ಷ ವಾಹನಗಳಿವೆ. ಇದರಲ್ಲಿ ಶೇ.75 ರಷ್ಟು ವಾಹನಗಳು ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿವೆ. ಇದಲ್ಲದೆ ಗಣನೀಯ ಸಂಖ್ಯೆಯಲ್ಲಿ ಟೂರಿಸ್ಟ್‌ ವಾಹನಗಳು ಆಗಮಿಸುತ್ತಿವೆ. ಆದರೆ ನಗರದಲ್ಲಿ ಎಲ್ಲಿ ಕೂಡಾ ಹೇಳಿಕೊಳ್ಳುವಂತಹ ಪಾರ್ಕಿಂಗ್‌ ವ್ಯವಸ್ಥೆಗಳಿಲ್ಲ. ಪರಿಣಾಮ ಜಾಗ ಸಿಕ್ಕಿದಲ್ಲಿ ವಾಹನಗಳನ್ನು ನಿಲ್ಲಿಸುವ ಅನಿವಾರ್ಯತೆ ಇದೆ.

-  ಕೇಶವ ಕುಂದರ್‌

ಟಾಪ್ ನ್ಯೂಸ್

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

Bhalla,-VK-Singh-Gov.

New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

k

Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗದ್ಗೀತೆಯ ಪ್ರಸ್ತುತತೆ ವಿಶೇಷ ಸಂವಾದ

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ

Bhalla,-VK-Singh-Gov.

New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.