ಕಾವೇರಿ ತೀರದಲ್ಲಿ ಸದ್ಗುರು ಅಭಿಯಾನ
Team Udayavani, Sep 15, 2019, 3:03 AM IST
ತಿರುವರೂರು: ಕಾವೇರಿ ನದಿ ಉಳಿಸಲು “ಕಾವೇರಿ ಕೂಗು’ ಎಂಬ ಅಭಿಯಾನ ನಡೆಸುತ್ತಿರುವ ಈಶ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು, ಶನಿವಾರ ತಮಿಳುನಾಡಿನ ತಿರುವರೂರಿನಲ್ಲಿ ರೈತರ ಜತೆ ಸಂವಾದ ನಡೆಸಿದರು. ನದಿ ದಡದ 20 ಲಕ್ಷ ರೈತರು ಮತ್ತು 30 ಲಕ್ಷ ಭೂರಹಿತ ರೈತರು ಈ ಸಂವಾದಕ್ಕೆ ಹಾಜರಾಗಿದ್ದರು.
12 ಸಾವಿರ ವರ್ಷಗಳಿಂದ ಈ ಭೂಮಿಯಲ್ಲಿ ಕೃಷಿ ನಡೆಯುತ್ತಿದೆ. ಈ ಭೂಮಿ ಎಷ್ಟು ಫಲವತ್ತಾಗಿದೆ ಎಂಬುದು ಇದರಿಂದ ತಿಳಿದು ಬರುತ್ತದೆ. ಇಂತಹ ಫಲವತ್ತಾದ ಮಣ್ಣನ್ನು ನಾವು ಬರಡಾಗಿಸುತ್ತಿದ್ದೇವೆ. ಈ ಭಾಗದಲ್ಲಿ ಮೊದಲು ಮರಗಳೇ ತುಂಬಿದ್ದವು. ಈಗ ಜನಸಂಖ್ಯೆ ಹೆಚ್ಚಾಗಿದೆ. ನಮಗೆ ಬೆಳೆ ಬೆಳೆಯಬೇಕಿದೆ. ಆದರೆ, ಮರಗಳಿಲ್ಲದೇ ಬೆಳೆ ಬೆಳೆಯಲು ಸಾಧ್ಯವಿಲ್ಲ.
ಬೆಳೆ ಉತ್ತಮವಾಗಿ ಬೆಳೆಯಲು ಕನಿಷ್ಠ ಆರು ತಾಸುಗಳವರೆಗೆ ಭೂಮಿಯು ಮರದ ನೆರಳಿನಲ್ಲಿರಬೇಕು. ಮರಗಳ ಜೊತೆಗೇ ನಮ್ಮ ಬೆಳೆಯನ್ನೂ ನಾವು ಬೆಳೆಯಬಹುದು ಎಂದು ಸಲಹೆ ನೀಡಿದರು. ಮಹಾತ್ಮ ಗಾಂಧಿಯವರ 150ನೇ ಜಯಂತಿ ಹಿನ್ನೆಲೆಯಲ್ಲಿ ಈಶ ಫೌಂಡೇಶನ್‌ನ ಎಲ್ಲ ನರ್ಸರಿಗಳನ್ನೂ ಮಹಾತ್ಮ ಗ್ರೀನ್ ಇಂಡಿಯಾ ಮಿಷನ್ ಎಂದು ಮರು ನಾಮಕರಣ ಮಾಡಲಾಗುತ್ತದೆ.
ಸದ್ಯ 35 ನರ್ಸರಿಗಳನ್ನು ನಾವು ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ 350 ನರ್ಸರಿಗಳನ್ನು ಆರಂಭಿಸಲಾಗುತ್ತದೆ ಎಂದರು. “ಕಾವೇರಿ ಕೂಗು’ ಅಭಿಯಾನವು ಅಂತಿಮ ಹಂತದಲ್ಲಿದ್ದು, ಕರ್ನಾಟಕದ ತಲಕಾವೇರಿಯಿಂದ ಇದು ಸೆ. 3ರಂದು ಆರಂಭವಾಗಿದೆ. ಕಾವೇರಿ ನದಿಯಾದ್ಯಂತ ನಡೆದ ಈ ಅಭಿಯಾನ ಸೆ. 17ರಂದು ಮುಕ್ತಾಯವಾಗಲಿದೆ. ಚೆನ್ನೈನಲ್ಲಿ ಸೆ.15 ರಂದು ಬೃಹತ್ ರ್ಯಾಲಿ ನಡೆಯಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.