ಭಾರತದಲ್ಲಿ ಪ್ರಾದೇಶಿಕ ಭಾಷೆಗಳಿಗೆ ಪ್ರಾಧ್ಯಾನ್ಯತೆ ಕಡಿಮೆಯಾಗುತ್ತಿದೆಯೇ ?
Team Udayavani, Sep 15, 2019, 3:27 PM IST
ಮಣಿಪಾಲ: ಒಂದು ದೇಶ ಒಂದು ಭಾಷೆ ಪರಿಕಲ್ಪನೆಯ ಅಡಿಯಲ್ಲಿ ಭಾರತದ ಅಧಿಕೃತ ಭಾಷೆ ಹಿಂದಿ ಎಂದು ಪರಿಗಣಿಸಲ್ಪಟ್ಟರೆ ಒಳಿತು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ ಬೆನ್ನಲ್ಲೇ ಪರ ವಿರೋಧ ಚರ್ಚೆ ಆರಂಭವಾಗಿದೆ. ಇದರ ಹಿನ್ನಲೆಯಲ್ಲಿ ಭಾರತದಲ್ಲಿ ಪ್ರಾದೇಶಿಕ ಭಾಷೆಗಳಿಗೆ ಪ್ರಾಧ್ಯಾನ್ಯತೆ ಕಡಿಮೆಯಾಗುತ್ತಿದೆಯೇ ? ನಿಮ್ಮ ಅಭಿಪ್ರಾಯವೇನು ? ಎಂಬ ಪ್ರಶ್ನೆಯನ್ನು ʼಉದಯವಾಣಿʼ ತನ್ನ ಓದುಗರಿಗೆ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.
ವಿಜಯ್ ಡಿ ವಿಜಯ್: ನಮ್ಮ ದೇಶ ಬಹುತ್ವ ಹೊಂದಿದ ದೇಶ. ಇಲ್ಲಿ ಎಲ್ಲರೂ ಸಮಾನರು. ನಾವು ಎಲ್ಲಿ ವಾಸಿಸುತ್ತಿದ್ದೆವೆಯೊ ಅಲ್ಲಿನ ನೆಲ ಜಲವನ್ನು ಗೌರವಿಸಬೇಕು. ಇಂಡಿಯ ಹೊಗಿ ಹಿಂದಿಯ ಮಾಡುತ್ತಿರುವ ಹಿಂದಿನ ಉದ್ದೇಶವೇನು?
ಪ್ರಶಾಂತ್ ಕೋಟ್ಯಾನ್: ಇಲ್ಲವೆ ಇಲ್ಲ. ಹಿಂದಿ ಭಾಷೆಯಿಂದ ಏನೂ ಆಪತ್ತು ಇಲ್ಲ. ಬೆಂಗಳೂರಲ್ಲಿ ತಮಿಳು ಭಾಷೆಯಿಂದ ಕನ್ನಡಿಗರಿಗೆ ಅನ್ಯಾಯ ಆಗಿದೆ.
ಚಂದು ನಾಯಕ: ನಮಗೆ ಬಿಟ್ಟಿದ್ದು ಅದು, ನಾವು ಕಡಿಮೆ ಅಂತ ಅಂದುಕೊಂಡರೆ ಕಡಿಮೆ ಆಗಿಬಿಡುತ್ತೆ. ನಾನು ನನ್ನ ತಾಯಿ ಹಾಗೂ ತಾಯಿ ನಾಡು, ಭಾಷೆಯನ್ನು ಕಡಿಮೆ ಮಾಡಲ್ಲ.
ತುಬ್ಗೆರೆ ನಾಗೇಂದ್ರ ಪ್ರಸಾದ್: ಹಾಗೇನಿಲ್ಲ, ನಮ್ಮ ಕನ್ನಡಿಗರಿಗೆ ಕನ್ನಡದಲ್ಲಿ ಮಾತನಾಡುವುದು, ವ್ಯವಹರಿಸುವುದು ಬೇಕಿಲ್ಲ. ಹಿಂದಿ ಸಿನಿಮಾ ನೋಡುವುದು, ಅಂಗ್ರೇಜಿಯ ವ್ಯಾಮೋಹ ತುಂಬಾ ಜಾಸ್ತಿ, ಬಳ್ಳಾರಿ ಸೀಮೆಯವರಿಗೆ ತೆಲುಗು, ಬೆಳಗಾವಿಯರಿಗೆ ಮರಾಠಿ, ಕೋಲಾರ, ಬೆಂಗಳೂರು ದಕ್ಷಿಣ ತುದಿ ಭಾಗದವರೆಗೆ ತಮಿಳು, ಮಂಗಳೂರು ಕಾಸರಗೋಡು ಭಾಗದವರಿಗೆ ಮಲಯಾಳಂ, ಕಾರವಾರದ ಸೀಮೆಯವರಿಗೆ ಕೊಂಕಣಿ, ಬೆಂಗಳೂರಿನ ಪ್ರತಿಶತ 60 ಭಾಗ ಇತರ ಭಾಷೆಯವರು. ಹಾಗಾಗಿ ನಮ್ಮವರಿಗೇ ಕನ್ನಡದ ಮೇಲೆ ಪ್ರೀತಿ ಇಲ್ಲ. ನಮ್ಮ ಪ್ರಯತ್ನ ಮುಂದುವರೆಸೋಣ.
ಎಸ್. ಸುರೇಶ್ ಸಾಲ್ಯಾನ್: ಪ್ರಾದೇಶಿಕ ಭಾಷೆ ಉಳಿಸುವುದು ಬಿಡುವುದು ನಮ್ಮ ಕೈಯಲ್ಲಿ ಇರುವುದು ವಿನಹ ಪರಭಾಷಿಗರ ಕೈಯಲ್ಲಿ ಅಲ್ಲ. ನಮ್ಮ ಭಾಷೆಯಲ್ಲಿ ನಾವೇ ಮಾತಾಡದೆ ಬೇರೆ ಭಾಷೆಯಲ್ಲಿ ಮಾತಾಡಿದರೆ ನಮ್ಮ ಭಾಷೆಯಲ್ಲಿ ಮಾತಾಡಲು ಪರಭಾಷಿಗರು ಬರಬೇಕೆ?
ಪ್ರಾದೇಶಿಕ ಭಾಷೆ ಉಳಿಸಲು ದೊಡ್ಡ ಕಸರತ್ತು ಮಾಡಬೇಕಾಗಿಲ್ಲ. ಮಾತೃಭಾಷೆಯಲ್ಲಿ ಮಾತಾಡಿ ಮಕ್ಕಳಿಗೂ ಪ್ರೋತ್ಸಾಹಿಸಿ. ಅಷ್ಟೇ ಸಾಕು.
ಸುಗುಣ ಸುಗುಣ: ಹೌದು. 1ರಿಂದ 10ನೇ ತರಗತಿಯತನಕ ಪಾದೇಶಿಕ ಭಾಷೆಯಲ್ಲಿ ಕಲಿತ ಮಕ್ಕಳಿಗೆ ಮಾತ್ರ ಮೀಸಲಾತಿ ಕೊಟ್ಟರೆ ಖಂಡಿತ ಭಾಷೆಗಳು ಉಳಿದಂತೆ.
ಪ್ರೇಮಚಂದ್ರ ಕಾರಂತ್: ಪಕ್ಕದ ರಾಜ್ಯಗಳಲ್ಲಿ ಕೇಳಿದರೆ ಹೆಚ್ಚು ಅಭಿಪ್ರಾಯಗಳು ಬರಬಹುದು. ಅವರು ತಮ್ಮ ಭಾಷೆ ಬಿಟ್ಟುಕೊಡರು, ನಮ್ಮವರು, ನಮ್ಮ ಭಾಷೆ ಚಂದ ಮಾತನಾಡರು, ಹಾಗೂ ಬೇರೆ ಭಾಷೆಗೆ ಪ್ರಾಧಾನ್ಯತೆ ಕೊಡುವರು. ರೈಲಿನಲ್ಲಿ, ಬಸ್ಸಿನಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನೀವು ಈ ಸತ್ಯವನ್ನು ಕಣ್ಣಾರೆ ನೋಡಬಹುದು.
ಮಂಜುನಾಥ ಕೆ ಹುಲಿಯಪ್ಪ: ಹೌದು. ಕಡಿಮೆ ಆಗುತ್ತಿದೆ. ಅದರಲ್ಲೂ ವಿಶೇಷವಾಗಿ ಇದರ ದೊಡ್ಡ ಪರಿಣಾಮ ಕನ್ನಡದ ಮೇಲೆ ಆಗುತ್ತದೆ. ದಕ್ಷಿಣ ಭಾರತದ ಭಾಷೆಗಳಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಮೊದಲ ಭಾಷೆ ಎಂದರೆ ಅದು ಕನ್ನಡವೇ ಆಗಲಿದೆ. ನಮ್ಮ ಸಂಸ್ಕೃತಿ, ಆಚಾರ, ವಿಚಾರ , ಆಹಾರ ಪದ್ದತಿಯಲ್ಲಿ ನಿಧಾನವಾಗಿ ಬದಲಾಗಿದ್ದು ರಾಗಿ ಮುದ್ದೆಯ ಜಾಗದಲ್ಲಿ ಚಪಾತಿ ಬಂದಾಗಲೆ ಎಚ್ಚೆತ್ತುಕೊಳ್ಳಬೇಕಿತ್ತು.
ಚನ್ನಬಸವ ಮಾಲಿ ಪಾಟೀಲ್; ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಅದು ನಮ್ಮ ಕೈಯಲ್ಲಿದೆ. ಹೆಚ್ಚಾಗಿ ಕನ್ನಡದಲ್ಲಿ ಮಾತನಾಡಿ ಸೊಸಿಯಲ್ ಮಿಡಿಯಾದಲ್ಲಿ ಕನ್ನಡವನ್ನು ಬಳಸಿ ನಮ್ಮ ತಪ್ಪನ್ನು ನಾವೆ ತಿದ್ದಿಕೊಳ್ಳಬೇಕು.
ಬೇರೆಯವರ ಮೇಲೆ ಗೂಬೆ ಕೂರಿಸಿದರೆ ಅದಕ್ಕೆ ಅರ್ಥವಿಲ್ಲಾ.
ಕೆ ಎಸ್ ಅಕ್ಷಯ್ ಕುಮಾರ್; ವಿವಿಧತೆಯಲ್ಲಿ ಏಕತೆ ಎಂಬ ಸದ್ಭಾವದೊಂದಿಗೆ ಬದುಕುತ್ತಿರುವ ದೇಶ ನನ್ನದು, ಆದರೆ ವ್ಯವಸ್ಥಿತವಾಗಿ ಇಂದು ಪ್ರಾದೇಶಿಕತೆಯ ಗಟ್ಟಿ ಬೇರಿಗೆ ಕೊಡಲಿ ಏಟು ನೀಡುತ್ತಿದ್ದಾರೆ
ಉದಯ್ ಕುಮಾರ್: ದುರುದ್ದೇಶದಿಂದ ಒತ್ತಡ ಹೇರಲಾಗುತ್ತಿದೆ. ವಿಪಕ್ಷಗಳಿಗೂ ಸಮನಾದ ಅವಕಾಶಗಳು ಇದ್ದಿದ್ದರೆ ಈ ರೀತಿಯ ಪ್ರಚೋದನೆಗೆ ಅವಕಾಶಗಳು ಇರುತ್ತಿರಲಿಲ್ಲ
ಸುರೇಶ್ ಕುಮಾರ್ ಕೆ: ಹಿಂದಿ ಭಾಷೆಯನ್ನು ಏಕೈಕ ಆಡಳಿತ ಭಾಷೆಯನ್ನಾಗಿ ಮಾಡುವ ಕುತಂತ್ರ ಮೊದಲಿನಿಂದಲೂ ನಡೆಯುತ್ತಾ ಇದೆ ಆದರೆ ಈಗ ಆಡಳಿತ ನಡೆಸುವ ಜನರಿಗೆ ವೈವಿಧ್ಯತೆಯಲ್ಲಿ ನಂಬಿಕೆ ಇಲ್ಲ . ಲೋಕಸಭೆ ಮತ್ತು ರಾಜ್ಯಸಭೆ ಎರೆಡುರಲ್ಲೂ ಬಹುಮತ ಇದೆ. ಜನ ಎಚ್ಚೆತ್ತುಕೊಳ್ಳದಿದ್ದರೆ ಏನೂ ಮಾಡುವುದಕ್ಕೂ ಹೇಸುವುದಿಲ್ಲ . ವೈವಿಧ್ಯತೆಯ ಭಾರತದಲ್ಲಿ ಒಂದು ಭಾಷೆಯನ್ನು ರಾಷ್ಟ್ರೀಯ ಭಾಷೆಯಾಗಿಸಿದರೆ ಬೇರೆ ಪ್ರಾದೇಶಿಕ ಭಾಷೆಗಳು ಎರೇಡನೆ ದರ್ಜೆಗೆ ಇಳಿಯುತ್ತವೆ
ಪೂರ್ಣಪ್ರಜ್ಞ ಪಿಎಸ್: ನಿಜಕ್ಕೂ ಕಡಿಮೆ ಆಗಿದೆ, ಪ್ರತಿ ಮನೆ – ಮನೆಯಿಂದ ಹಿಡಿದು, ಪ್ರತಿ ಕಛೇರಿ, ಎಲ್ಲ ಕಡೆಗಳಲ್ಲಿ ಇಂಗ್ಲಿಷ್ ತನ್ನ ಪಾರಮ್ಯ ಮೆರೆಯುತ್ತಿದೆ, ಹಿಂದಿ ಮಾತನಾಡುವ ಜನ ಜಾಸ್ತಿ ಇರಬಹುದು ಆದರೆ ಉತ್ತರ ಭಾರತವನ್ನು ಮಾತ್ರ ಓಲೈಸಿ, ದಕ್ಷಿಣ ಭಾರತೀಯರನ್ನು ಕಡೆಗಣಿಸಿದಂತೆ, ಇತರ ಪ್ರಾದೇಶಿಕ ಭಾಷೆಗಳು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಭಾವನೆ ಮೂಡುವಂತಾಗಿದೆ, ಖಾಸಗಿ ಮತ್ತು ಸರಕಾರಿ ಕಚೇರಿಗಳಲ್ಲಿ ಇಂಗ್ಲೀಷ್ ಹಾಗೂ ಹಿಂದಿ ಪಾರಮ್ಯದಿಂದಾಗಿ ಹೆತ್ತವರು ಕೂಡ ತಮ್ಮ ಮಕ್ಕಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಕೊಡಿಸಲು ಹಿಂದೇಟು ಹಾಕುವಂತಾಗಿದೆ. ಇದರಿಂದಾಗಿ ಮುಂದೊಂದು ದಿನ ಪ್ರಾದೇಶಿಕ ಭಾಷೆಯ ಜೊತೆಗೆ ಆ ಸ್ಥಳದ ಆಚಾರ-ಆಹಾರ, ವಿಚಾರಧಾರೆಯೋಂದಿಗೆ ಒಂದು ಸಂಸ್ಕೃತಿಯೇ ನಾಶವಾಗಬಹುದು.
ಭಾಗ್ಯಲಕ್ಷ್ಮೀ ಪಡ್ಕಿ: ಇತರ ಭಾಷೆಗಳ ಜನರ ಪ್ರಾಬಲ್ಯ ಮತ್ತು ಕನ್ನಡ ಚೆನ್ನಾಗಿ ಬಲ್ಲ ಸ್ಥಳೀಯರು, ಇತರ ರಾಜ್ಯ ಮತ್ತು ದೇಶಗಳಿಗೆ ಹೋಗುವುದು ಹೆಚ್ಚಾಗುತ್ತಿದೆ. ಇದರಿಂದಾಗಿ, ನಮ್ಮ ಬೆಂಗಳೂರಲ್ಲಿ ಕನ್ನಡದ ಕಲರವ ಕಡಿಮೆಯಾಗಿದೆ. ಕನ್ನಡ ಬಲ್ಲವರಿಗೆ ಕೆಲಸ ಸಿಗುವಂತಾಗಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಕನ್ನಡ ಪದಗಳನ್ನು ಕನ್ನಡದಲ್ಲೇ ಬರೆಯಬೇಕು.
ಉಮೇಶ್ ಗಾಣಿಗ: ಕಡಿಮೆ ಆಗ್ತಾ ಇಲ್ಲ , ಉದ್ದೇಶಪೂರ್ವಕವಾಗಿಯೇ ಪ್ರಾದೇಶಿಕ ಭಾಷೆಗಳನ್ನ ತುಳಿಯೋ ಪ್ರಯತ್ನವನ್ನ ಉತ್ತರ ಭಾರತದವರು ಮಾಡ್ತಾ ಇದಾರೆ, ಇದು ಖಂಡಿತ ಒಳ್ಳೆಯ ಬೆಳವಣಿಗೆಯಲ್ಲ ಇದು ಹೀಗೆ ಮುಂದುವರೆದರೆ ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಿ ಒಂದೊಂದು ಪ್ರಾದೇಶಿಕ ರಾಜ್ಯಗಳು ಒಂದೊಂದು ದೇಶವಾಗೊದು ದೂರವಿಲ್ಲ!! ಪ್ರಾದೇಶಿಕ ಭಾಷೆಯ ಮೇಲೆ ಕೇಂದ್ರ/ಉತ್ತರ ಭಾರತೀಯರು ದಬ್ಬಾಳಿಕೆ ಮಾಡೋದನ್ನ ಬಿಡಬೇಕು, ಭಾರತದ ಅರ್ಥವ್ಯವಸ್ಥೆ ಕುಸಿದಿದೆ ಮೊದಲು ಆ ಕಡೆ ಗಮನ ಕೊಡಬೇಕು, ಕೆಲಸಕ್ಕೆ ಬಾರದ ವಿಷಯಕ್ಕೆ ಕೈ ಹಾಕಿ ಮುಂದೆ ಆಗೋ ಅನಾಹುತಗಳಿಗೆ ತಕ್ಕ ಬೆಲೆ ತರಬೇಕಾದೀತು ಕೇಂದ್ರ ಸಕಾ೯ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.