ಸೂರತ್ ನಲ್ಲಿ ದೇಶದಲ್ಲೇ ಮೊದಲ ಬಾರಿಗೆ ‘ಹೂಸು’ ಬಿಡುವ ಸ್ಪರ್ಧೆ!
ಗೆದ್ದವರಿಗೆ ಟ್ರೋಫಿ, ನಗದು ಬಹುಮಾನ ಖಚಿತ
Team Udayavani, Sep 15, 2019, 6:21 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸೂರತ್: ಹ್ಹೆಹ್ಹೆಹ್ಹೆ.. ಇದೇನ್ರೀ ಸ್ಪರ್ಧೆ, ಅಂತ ನಕ್ಕು ಸುಮ್ಮನಾಗಬೇಡಿ.. ಹಾಗಂತ ಛೀ.. ಇದೇನ್ರೀ.. ಇಂತಹ ಸ್ಪರ್ಧೆ ಯಾರಾದರೂ ಆಯೋಜಿಸುತ್ತಾರಾ? ಅಂತ ಮೂದಲಿಸಬೇಡಿ. ನಿಜಕ್ಕೂ ಇದೇ ಮೊದಲ ಬಾರಿಗೆ ಹೂಸು ಬಿಡುವ ಸ್ಪರ್ಧೆಯನ್ನು ಭಾರತದಲ್ಲಿ ಆಯೋಜಿಸಲಾಗುತ್ತಿದೆ. ದೊಡ್ಡದಾಗಿ, ಸುದೀರ್ಘವಾಗಿ ಹೂಸು ಬಿಡುವವರಿಗೆ ಇಲ್ಲಿದೆ ಗೆಲ್ಲುವ ಅವಕಾಶ. ಇದಕ್ಕಾಗಿ ‘ವಾಟ್ ದಿ ಫಾರ್ಟ್’ ಹೆಸರಿನಲ್ಲಿ ಸ್ಪರ್ಧೆ ನಡೆಯಲಿದೆ. ಸೆ.22ರ ರವಿವಾರ ಸ್ಪರ್ಧೆ ನಡೆಯಲಿದ್ದು, ಯತೀನ್ ಸಂಗೋಯಿ ಮತ್ತು ಮೌಲ್ ಸಂಘ್ವೀ ಎಂಬವರು ಈ ಸ್ಪರ್ಧೆ ಆಯೋಜಿಸಿದ್ದಾರೆ.
ಅಚ್ಚರಿ ಎಂದರೆ ಈ ಸ್ಪರ್ಧೆಯ ಆಲೋಚನೆ ಹೇಗೆ ಹುಟ್ಟಿತು ಎಂದು ಕಳಿದ್ದಕ್ಕೆ ಸಿಂಗೋಯಿ ವಿಚಿತ್ರ ಉತ್ತರ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ನಾನು ಕುಟುಂಬದವರೊಂದಿಗೆ ಸಿನೆಮಾ ನೋಡುತ್ತಿದ್ದೆ. ಈ ವೇಳೆ ಒಂದು ದೊಡ್ಡ ಹೂಸು ಬಿಟ್ಟಿದ್ದು ಎಲ್ಲರೂ ನಕ್ಕರು. ಇದೇ ವೇಳೆ ಹೀಗೊಂದು ಸ್ಪರ್ಧೆ ಮಾಡಿದರೆ ಹೇಗೆ? ನಾನು ಗೆಲ್ಲಬಹುದಲ್ಲವೇ? ಎಂಬ ಆಲೋಚನೆ ಹುಟ್ಟಿತು. ಅಲ್ಲದೇ ಇದುವರೆಗೆ ಭಾರತದಲ್ಲಿ ಇಂಥದ್ದೊಂದು ಸ್ಪರ್ಧೆ ಆಯೋಜನೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ಸಂಗೋಯಿ ಅವರ ಪ್ರಕಾರ ಮೂರು ರೀತಿಯಲ್ಲಿ ಸ್ಪರ್ಧೆ ನಡೆಯಲಿದೆ. 60 ಸೆಕೆಂಡ್ ಸಮಯವಿರಲಿದೆ. ಸ್ಟ್ಯಾಂಡ್ ಅಪ್ ಹಾಸ್ಯಗಾರ ದೇವಾಂಗ್ ರಾವಲ್, ಸ್ಥಳೀಯ ವೈದ್ಯರು ಜಡ್ಜ್ ಗಳಾಗಿ ಭಾಗಿಯಾಗಲಿದ್ದಾರೆ. ಗೆದ್ದವರಿಗೆ ಟ್ರೋಫಿಯೊಂದಿಗೆ 5 ಸಾವಿರ ರೂ.ಗಳಿಂದ 15 ಸಾವಿರ ರೂ.ವರೆಗೆ ನಗದು ಬಹುಮಾನ ಕೊಡಲಾಗುವುದು. ಈವರೆಗೆ 50 ಮಂದಿ ಸ್ಪರ್ಧಾಳುಗಳು ಸ್ಪರ್ಧೆಗೆ ಹೆಸರು ನೋಂದಣಿ ಮಾಡಿದ್ದಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.