ಕೃಷ್ಣಾ, ಗೋದಾವರಿ, ಕಾವೇರಿ ನದಿ ಜೋಡಣೆಗೆ ಕೇಂದ್ರಕ್ಕೆ ಮನವಿ: ಬೊಮ್ಮಾಯಿ
Team Udayavani, Sep 15, 2019, 7:54 PM IST
ಚಿಕ್ಕಬಳ್ಳಾಪುರ: ರಾಜ್ಯದ ಬರ ಜಿಲ್ಲೆಗಳನ್ನು ಗಮನದಲ್ಲಿ ಇಟ್ಟುಕೊಂಡು ಹಾಗೂ ಕುಡಿಯುವ ನೀರಿಮ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಕೃಷ್ಣಾ, ಗೋದಾವರಿ ಹಾಗೂ ಕಾವೇರಿ ನದಿ ಜೋಡಣೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದೆಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಜಿಲ್ಲೆಯ ಗೌರಿಬಿದನೂರು ಪಟ್ಟಣದ ಬಸವೇಶ್ವರರ ರಸ್ತೆಯಲ್ಲಿ ಭಾನುವಾರ ಸ್ಥಳೀಯ ವೀರಶೈವ ಸೇವಾ ಸಮಿತಿ ಹಮ್ಮಿಕೊಂಡಿದ್ದ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ಅಭಿನಂಧನಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಬಯಲು ಸೀಮೆ ಜಿಲ್ಲೆಗಳಿಗೆ ರೂಪಿಸಿ ಅನುಷ್ಟಾನಗೊಳಿಸುತ್ತಿರುವ ಎತ್ತಿನ ಹೊಳೆ ಯೋಜನೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸಿಎಂ ಯಡಿಯೂರಪ್ಪಗೆ ಮನವಿ ಮಾಡಲಾಗುವುದೆಂದರು.
ಅವಿಭಜಿತ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಯಲ್ಲಿ ತಲೆದೋರಿರುವ ಅಂತರ್ಜಲ ಕುಸಿತ ಹಾಗೂ ನೀರಿನ ಸಮಸ್ಯೆಯನ್ನು ಪರಿಹರಿಸಲು ಎತ್ತಿನಹೊಳೆ ಯೋಜನೆಯ ಕಾಮಗಾರಿಯು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆಂದ ಅವರು, ಕಾವೇರಿ ಗೋದಾವರಿ ಹಾಗೂ ಕೃಷ್ಣಾ ನದಿಗಳ ಜೋಡಣೆಯ ಮೂಲಕ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರವು ನದಿಜೋಡಣೆ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದ್ದು, ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಬೇಕಾದ ಎಲ್ಲಾರೀತಿಯ ಸಹಕಾರವನ್ನು ರಾಜ್ಯ ಸರ್ಕಾರವು ಕೇಂದ್ರಕ್ಕೆ ಕಾಲಕಾಲಕ್ಕೆ ನೀಡುವ ಮೂಲಕ, ಹಾಗೂ ಮುಖ್ಯಮಂತ್ರಿಗಳಿಗೆ ನೀರಿನ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುವ ಮೂಲಕ ನೀರಾವರಿ ಯೋಜನೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಿದೆ ಎಂದರು.
ವೀರಶೈವ ಎಂದರೆ ಕಾಯಕ ಮತ್ತು ದಾಸೋಹ ಎಂದು ಅರ್ಥ, ಇಂತಹ ಸೇವೆಯಿಂದಲೇ ನಮ್ಮ ಸಮುದಾಯದವರು ವೀರರಂತಿರಬೇಕಿದೆ ಎಂದ ಅವರು ಯಾರು ಕಾಯಕವನ್ನು ಮಾಡಿ ಅದರ ಮೂಲಕ ದಾಸೋಹ ಮಾಡುತ್ತಾರೋ ಅವರೇ ನಿಜವಾದ ವೀರಶೈವರು ಎಂದು ಪ್ರತಿಪಾದಿಸಿದರು.
ಕಾಯಕಕ್ಕೂ ಕರ್ತವ ಕೆಲಸ ಪೂರ್ಣಗೊಳ್ಳುವವರೆಗೆ ಹಿಂದಕ್ಕೆ ಹೆಜ್ಜೆಯಿಡದೆ ಕಾಯಕವನ್ನು ಪ್ರಮುಖವಾಗಿ ಭಾರತದಲ್ಲಿ ಅನ್ನದಾಸೋಹ ಮತ್ತು ಅಕ್ಷರ ದಾಸೋಹಗಳ ಚಿಂತನೆಯನ್ನು ತಂದವರು ಬಸವಣ್ಣನವರು ಈ ಒಂದು ಚಿಂತನೆಯನ್ನು ಹುಟ್ಟುಹಾಕಿದ ಸಮಾಜವೇ ವೀರಶೈವ ಸಮಾಜ ಎನ್ನಬಹುದು, ಜೈನರು ಅಹಿಂಸಾ ಧರ್ಮವನ್ನು ದೇಶದಲ್ಲಿ ಪ್ರತಿಪಾದಿಸಿತು, ಭಾರತದಲ್ಲಿ ಭಕ್ತಿ ಪಂಥದ ಚಳುವಳಿಯನ್ನು ಹುಟ್ಟು ಹಾಕಿದವರು ವೀರಶೈವರೇ ಎಂದರು.
ನನ್ನ ಅವಧಿಯಲ್ಲಿ ನೀರಾವರಿ ಯೋಜನೆ;
ಈ ಹಿಂದೆ ನಾನು ಬೃಹತ್ ನೀರಾವರಿ ಸಚಿವನಾಗಿದ್ದಾಗ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಲ್ಲಿನ ನೀರು ಮತ್ತು ಅಂತರ್ಜಲ ಸಮಸ್ಯೆಯನ್ನು ಮನಗೊಂಡು ಎತ್ತಿನಹೊಳೆ ಯೋಜನೆಯನ್ನು ರೂಪಿಸಿ ಸಮಗ್ರ ಯೋಜನಾ ವರದಿಯನ್ನು ತಯಾರಿಸಲಾಯಿತು, ಅಂದಿನ ನಮ್ಮ ಸರ್ಕಾರ ನಮೂದನೆಯನ್ನು ನೀಡಿ ಆರ್ಥಿಕ ಅನುಮೋದನೆಯನ್ನೂ ನೀಡಿತ್ತು ಎಂದು ತಿಳಿಸಿದ ಅವರು ಅವಿಭಜಿತ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಯಲ್ಲಿ ಹಿಂದೆ ತೋಟಗಾರಿಕೆ ಬೆಳೆಗೆ ಹೆಸರಾಗಿತ್ತು ಹೈನುಗಾರಿಕೆ ಉತ್ತಮವಾಗಿತ್ತು ಇದನ್ನು ನಾನು ಬಲ್ಲೆ ಆದರೆ ಎರಡು ದಶಕಗಳಿಂದ ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿದೆ ಈ ಸಮಸ್ಯೆಗೆ ಪರಿಸರವನ್ನು ಸಂರಕ್ಷಿಸಲು ಗಿಡಮರಗಳನ್ನು ಬೆಳೆಸಬೇಕು, ಮಳೆ ನೀರನ್ನು ಸಂಗ್ರಹ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಶ್ರೀಶೈಲಪೀಠದ ಶ್ರೀ ಚನ್ನ ಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ತುಮಕೂರು ಸಿದ್ದಗಂಗಾ ಮಠದ ಅಧ್ಯಕ್ಷರಾದ ಸಿದ್ದಲಿಂಗಸ್ವಾಮಿಗಳು, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮನುಬಳಿಗಾರ್, ತಾಲೂಕು ವೀರಶೈವ ಸೇವಾಸಮಿತಿ ಅಧ್ಯಕ್ಷರಾದ ಎಲ್.ಮಹಾದೇವಯ್ಯ ಕಾರ್ಯಾಧ್ಯಕ್ಷರಾದ ಶಶಿಧರ್, ಎಸ್.ಎಸ್.ಪಾಟೀಲ್,ಕೆಪಿಟಿಸಿಎಲ್ ನಿರ್ದೇಶಕರಾದ ಶಿವಕುಮಾರ್, ಉಪಾಧ್ಯಕ್ಷರಾದ ಮಲ್ಲೇಶಣ್ಣ, ಕಾರ್ಯದರ್ಶಿಗಳಾದ ಶಿವಪ್ರಸಾದ್, ಖಜಾಂಚಿ ನಂಜಪ್ಪ ವಿದ್ಯಾರ್ಥಿನಿಲಯದ ಅಧ್ಯಕ್ಷರಾದ ಚಿಕ್ಕಣ್ಣ ನಿರ್ದೇಶಕರಾದ ನವೀನ್ ಕುಮಾರ್ ಉಮಾದೇವಿ ದೇವರಾಜು ಶಂಕ್ರಪ್ಪ ರೇವಣಸಿದ್ದೇಶ್ವರ ನಂಜುಂಡಪ್ಪ ಪರಮೇಶ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
MUST WATCH
ಹೊಸ ಸೇರ್ಪಡೆ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.