ಐ10 ಲವ್‌ ಯೂ!

ಹುಂಡೈ ಗ್ರಾಂಡ್‌ ಐ10 ನಿಯೋಸ್‌ ಬಿಡುಗಡೆ

Team Udayavani, Sep 16, 2019, 5:05 AM IST

Untitled-1

ಆರಂಭದಿಂದಲೂ ಅಷ್ಟೇ… ಮಧ್ಯಮ ವರ್ಗ, ಅದರಲ್ಲೂ ಸಿಟಿ ಕ್ಲಾಸ್‌ ಅನ್ನೇ ಗಮನದಲ್ಲಿಟ್ಟುಕೊಂಡು ರೂಪಿಸಿರುವ ಕಾರೆಂದರೆ ಅದು ಐ10. ಹ್ಯಾಟ್‌ ಪ್ಯಾಕ್‌ ಗಳ ಸಾಲಿನಲ್ಲಿ ಈ ಕಾರು ಮಾಡಿರುವ ಮೋಡಿ ಅಂತಿದ್ದಲ್ಲ. ನಂತರದಲ್ಲಿ ಗ್ರಾಂಡ್‌ ಐ10 ಬಂದಾಯ್ತು, ಇದೇ ಸರಣಿಯಲ್ಲಿ ಮುಂದೆ ಐ20 ರೂಪಿಸಿದ್ದೂ ಗೊತ್ತೇ ಇದೆ… ಈಗ ಇದೇ ಹುಂಡೈ ಕಂಪನಿ ಗ್ರಾಂಡ್‌ ಐ10 ನಿಯೋಸ್‌ ಎಂಬ ಹೊಸ ಮಾದರಿಯ ಕಾರನ್ನು ಮಾರುಕಟ್ಟೆಗೆ ಬಿಟ್ಟಿದೆ. ಹಲವಾರು ದಿನಗಳ ನಂತರ, ಐ10 ಹೊಸ ಮಾದರಿಯ ಕಾರನ್ನು ಮಾರುಕಟ್ಟೆಗೆ ಬಿಟ್ಟಿದೆ ಅನ್ನೋದು ವಿಶೇಷ. ಅದರಲ್ಲೂ ಮಾರುತಿ ಸುಜುಕಿ ಕಂಪನಿ ಎಲ್ಲಾ ಹಂತಗಳಲ್ಲೂ ತನ್ನ ಕಾರು ಬಿಟ್ಟ ಮೇಲೆ, ಎಲ್ಲಿ ಹುಂಡೈ ತನ್ನ ಮಾರುಕಟ್ಟೆ ಕಳೆದುಕೊಳ್ಳುವುದೋ, ಎಂಬ ಆತಂಕದ ಕ್ಷಣಗಳೂ ಇದ್ದವು. ಇದರ ನಡುವೆಯೇ ಅತ್ತ, ಮಾರುತಿ ಸುಜುಕಿ ನೆಕ್ಸಾ ಎಂಬ ಹೊಸ ಕಂಪನಿಯನ್ನೇ ಸೃಷ್ಟಿಸಿ ಅದರ ಮೂಲಕ ಲಕ್ಸುರಿಯಸ್‌ ಎಂಬ ಮಗದೊಂದು ಟ್ಯಾಗ್‌ ಲೈನ್‌ ಹಾಕಿ ಬಲೆನೋ ಸರಣಿ, ಇಗ್ನಿಸ್‌, ಎಸ್‌-ಕ್ರಾಸ್‌, ಕ್ರೂಸ್‌ ಕಾರುಗಳನ್ನು ಅಲ್ಲಿಂದಲೇ ಮಾರುತ್ತಿದೆ. ಒಂದು ಲೆಕ್ಕದಲ್ಲಿ ಮಾರುತಿ ಈಗ ಹ್ಯಾಚ್‌ ಪ್ಯಾಕ್‌ ಸರಣಿಯಲ್ಲಿ 4 ಲಕ್ಷ ರೂ.ಗಳಿಂದ ಆರಂಭಿಸಿ 9 ಲಕ್ಷ ಅಥವಾ 10 ಲಕ್ಷದವರೆಗೆ ಎಲ್ಲಾ ಮಾದರಿಯ ಕಾರುಗಳನ್ನು ಹೊಂದಿದೆ ಎಂಬುದು ವಿಶೇಷ.

ಇದರ ನಡುವೆಯೇ ಈಗ ಗ್ರಾಂಡ್‌ ಐ10 ನಿಯೋಸ್‌, ಹೊಸ ರೂಪದೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದೆ. ಹುಂಡೈ ಎಂದರೆ ಅದರ ಸ್ಟೆಲ್‌ ಗೆ ಹೆಸರು. ಈ ಕಾರು ಅದೇ ರೀತಿಯಲ್ಲೇ ಬಂದಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಎರಡೂ ಮಾದರಿಗಳಲ್ಲಿ ನಿಯೋಸ್‌ ಕಾರನ್ನು ಬಿಡುಗಡೆ ಮಾಡಲಾಗಿದ್ದು, ಕಾರಿನ ಹೊರಾಂಗಣ ಮತ್ತು ಒಳಾಂಗಣ ಗಮನ ಸೆಳೆಯುತ್ತಿವೆ.

ಮೈಲೇಜ್‌ ಓಕೆ
ಬೇರೆ ಕಾರು ಕಂಪನಿಗಳ ರೀತಿಯಲ್ಲಿ ಮೂರು ಸಿಲಿಂಡರ್‌ ಹಾಕಿ, ಹೆಚ್ಚು ಮೈಲೇಜ್‌ ಕೊಡುತ್ತೇವೆ ಎಂಬ ಜಿದ್ದಿಗೆ ಬಿದ್ದಿಲ್ಲ. ಹೀಗಾಗಿಯೇ 4 ಸಿಲಿಂಡರ್‌ಗಳ ಮತ್ತು 1197 ಸಿಸಿ ಸಾಮರ್ಥ್ಯದ ಪೆಟ್ರೋಲ್‌ ಎಂಜಿನ್‌ ಕಾರಿಗೆ ಪ್ರತಿ ಲೀಟರ್‌ ಗೆ 20 ಕಿ.ಮೀ. ಮೈಲೇಜ್‌ ಕೊಡುತ್ತೇವೆ ಎಂದು ಹೇಳಿಕೊಂಡಿದೆ. ಸಿಟಿಯಲ್ಲಿ ಓಡಿಸುವಾಗ ಹಾಗೂ ಹೀಗೂ ಇದು 14-15 ಕಿ.ಮೀ. ಬರಬಹುದು ಎಂಬ ಅಂದಾಜು ಇರಿಸಿಕೊಳ್ಳಬಹುದು. ಆದರೆ, ಡೀಸೆಲ್‌ ಎಂಜಿನ್‌ ನಲ್ಲಿ ಕೊಂಚ ಸಾಮರ್ಥ್ಯ ಇಳಿಕೆ ಮಾಡಿ, ಪ್ರತಿ ಲೀ. ಡೀಸೆಲ್‌ ಗೆ 26 ಕಿ.ಮೀ.ಗಿಂತ ಹೆಚ್ಚು ಮೈಲೇಜ್‌ ನೀಡುತ್ತೇವೆ ಎಂದು ಕಂಪನಿ ಹೇಳಿಕೊಂಡಿದೆ.

ಕ್ಲಾಸ್‌ ಡಿಸೈನ್‌
ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸದ ವಿಚಾರದಲ್ಲಿ ಹುಂಡೈ ಮಾರುಕಟ್ಟೆಯಲ್ಲಿ ತುಸು ಮುಂದೆಯೇ ಇರುತ್ತದೆ. ನಿಯೋಸ್‌ ನ ಡಿಸೈನ್‌ ಕೂಡ ಗ್ರಾಂಡ್‌ ಆಗಿಯೇ ಇದೆ. ಒಳಾಂಗಣದಲ್ಲಿ ಸೀಟು, ಡಿಜಿಟಲ್‌ ಸ್ಕ್ರೀನ್‌ ಹೊಂದಿರುವ ಮ್ಯೂಸಿಕ್‌ ಸಿಸ್ಟಮ್‌ ಆಂಡ್ರಾಯ… ಆಟೋ ಮತ್ತು ಆಪಲ್‌ ಏರ್‌ ಪ್ಲೇ ಆಪ್ಶನ್‌… ರಿವರ್ಸ್‌ ಸ್ಕ್ರೀನ್‌… ವೈರ್‌ಲೆಸ್‌ ಚಾರ್ಜರ್‌… ಹೀಗೆ ಒಳ್ಳೇ ಫೀಚರ್‌ಗಳಿವೆ. ಅಂತೆಯೇ ಬ್ಯಾಕ್‌ ಸೀಟಿನಲ್ಲಿ ಆರಾಮಾಗಿ ಕುಳಿತುಕೊಳ್ಳಬಹುದು.

ಅಂದ ಹಾಗೆ ಈ ಕಾರಿನ ಬೆಲೆ 4 ಲಕ್ಷದಿಂದ 9 ಲಕ್ಷ ರೂ.ಗಳ ವರೆಗೆ ಇದೆ. ಆದರೆ, ಇದು ಎಕ್ಸ್‌ ಶೋ ರೂಂ ಬೆಲೆ. ಇದರಲ್ಲಿ ರೋಡ್‌ ಟ್ಯಾಕ್ಸ್‌ ಇನ್ಸುರೆನ್ಸ್‌ ಸೇರಿದಂತೆ ಇನ್ನಿತರೆ ಇತರೆ ಖರ್ಚುಗಳನ್ನು ಲೆಕ್ಕ ಹಾಕಿದರೆ ಕೊಂಚ ದುಬಾರಿಯಾಗಬಹುದು.
ಇದರ ಜತೆಯಲ್ಲಿ ಈ ಕಾರಿಗೆ ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಸ್ವಿಫ್ಟ್ ಸರಣಿ, ನೆಕ್ಸಾದ ಬಲೆನೋ, ಟಾಟಾದ ಟಿಯಾಗೋ ಮತ್ತು ಟಿಗೋರ್‌, ತನ್ನದೇ ಕಂಪನಿಯ ಸ್ಯಾಂಟ್ರೋ ಸೇರಿದಂತೆ ಹಲವಾರು ಕಾರುಗಳ ಸ್ಪರ್ಧೆ ಉಂಟು.

ಪೆಟ್ರೋಲ್‌ಗಿಂತ ಡೀಸೆಲ್‌ ಸೂಪರ್‌
ಮೈಲೇಜ್‌ ಮತ್ತು ಸಾಮರ್ಥ್ಯದ ಲೆಕ್ಕಾಚಾರದಲ್ಲಿ ಪೆಟ್ರೋಲ್‌ ಗಿಂತ ಡೀಸೆಲ್‌ ಮಾದರಿಯ ಕಾರು ಕೊಂಚ ಓಕೆ ಎಂಬುದು ಆಟೋಮೊಬೈಲ್‌ ಮಾರುಕಟ್ಟೆಯ ವಿಶ್ಲೇಷಕರ ಅಂಬೋಣ. ಮೈಲೇಜ್‌ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಪೆಟ್ರೋಲ್‌ ಗೆ 20.7 ಕಿ.ಮೀ., ಆದರೆ, ಡೀಸೆಲ್‌ 26.2 ಕಿ.ಮೀ. ನೀಡುತ್ತದೆ ಎಂದು ಕಂಪನಿಯೇ ಹೇಳಿಕೊಂಡಿರುವುದರಿಂದ ಸಿಟಿ ರೈಡ್‌ ನಲ್ಲಿ ಅಂದಾಜು 18-20 ಕೊಡಬಹುದು ಎಂದು ಹೇಳಲಾಗುತ್ತಿದೆ.

ಸುರಕ್ಷತಾ ಸವಲತ್ತುಗಳು
– ಏರ್‌ ಬ್ಯಾಗ್‌
– ಪ್ಯಾಸೆಂಜರ್‌ ಏರ್‌ ಬ್ಯಾಗ್‌
– ಎ ಬಿ ಎಸ್‌
– ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಪೋಗ್ರಾಮ್‌
– ಚೈಲ್ಡ… ಸೆಫ್ಟಿ ಲಾಕ್‌
– ಪವರ್‌ ಡೋರ್‌ ಲಾಕ್‌
– ಸೆಂಟ್ರಲ್‌ ಲಾಕಿಂಗ್‌ (ಎರಾ ಸರಣಿ+ ಮ್ಯಾಗ್ನಾ ಸರಣಿ)
– ರೇರ್‌ ವೈಪರ್‌(ಎರಾ-ಮ್ಯಾಗ್ನಾ+ ಆಸ್ತಾ ಸರಣಿ)

-ಸೋಮಶೇಖರ ಸಿ.ಜೆ.

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.