ಯುವಕರಲ್ಲಿ ಓದುವ ಸಂಸ್ಕೃತಿ ಇಲ್ಲ
Team Udayavani, Sep 16, 2019, 3:00 AM IST
ಮೈಸೂರು: ಯುವ ಪೀಳಿಗೆಯಲ್ಲಿ ಸ್ವತಂತ್ರವಾಗಿ ಓದುವ ಹವ್ಯಾಸ ನಾಶವಾಗುತ್ತಿರುವುದು ಆಘಾತಕಾರಿ ಸಂಗತಿ ಎಂದು ಡಾ.ಜಯಶ್ರೀ ಮುರಳಿ ತಿಳಿಸಿದರು. ಸಂಸ್ಕೃತಿ ಪ್ರಕಾಶನ ಹಾಗೂ ಶ್ರೀನಿಧಿ ಪುಸ್ತಕ ಕೇಂದ್ರದ ವತಿಯಿಂದ ಭಾನುವಾರ ನಗರದ ಗೋಪಾಲಸ್ವಾಮಿ ಶಿಶುವಿಹಾರ ಕಾಲೇಜಿನಲ್ಲಿ ಲೇಖಕ ಡಾ.ವಿ.ರಂಗನಾಥ್ ಅವರ “ನೀವು ನಮ್ಮವರಲ್ಲ, ನಾವೇ ನಿಮ್ಮವರು’ ಮತ್ತು “ನಮ್ಮ ಹೆಮ್ಮೆಯ ರಾಷ್ಟ್ರಧ್ವಜ’ ಕೃತಿಗಳನ್ನು ಅವರು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ಇತ್ತೀಚೆಗೆ ನಮ್ಮ ಜನರಿಗೆ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವೇ ಕಡಿಮೆಯಾಗಿದೆ. ಯಾರೋ ಖರೀದಿಸಿದ ಪುಸ್ತಕದಲ್ಲಿ ತಾವೂ ಓದುತ್ತಾರೆ. ಯುವ ಪೀಳಿಗೆಯಲ್ಲಂತೂ ಓದುವ ಸಂಸ್ಕೃತಿಯೇ ಇಲ್ಲವಾಗಿರುವ ಇಂತಹ ಸ್ಥಿತಿಯಲ್ಲಿ ರಂಗನಾಥ್ ಅವರು ಈ ಕೃತಿಗಳನ್ನು ರಚನೆ ಮಾಡುವ ಮೂಲಕ ನಿವೃತ್ತಿಯ ನಂತರವೂ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಇಂದಿನ ರಾಜಕಾರಣಿಗಳು ತಮ್ಮ ಬೆಳವಣಿಗೆಗಾಗಿ ದೇಶದ ಬಗ್ಗೆ, ರಾಷ್ಟ್ರಧ್ವಜದ ಮೇಲಿನ ಅಭಿಮಾನವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅವರು “ನಮ್ಮ ಹೆಮ್ಮೆಯ ರಾಷ್ಟ್ರಧ್ವಜ’ ಪುಸ್ತಕ ಓದುವ ಮೂಲಕ ರಾಷ್ಟ್ರಧ್ವಜದ ಪರಿಕಲ್ಪನೆ ಮನನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
“ನೀವು ನಮ್ಮವರಲ್ಲ, ನಾವೇ ನಿಮ್ಮವರು’ ಕೃತಿ ಕುರಿತು ಮಾತನಾಡುತ್ತಾ, “ನಾನು ಎಂಬ ಅಹಂ ತ್ಯೆಜಿಸಿದಾಗ ಮಾತ್ರ ಸಮಾಜದಲ್ಲಿ ಒಂದಾಗಲು ಸಾಧ್ಯ ಎಂಬುದುನ್ನು ಈ ಪುಸ್ತಕ ತಿಳಿಸಿದೆ. ಅಲ್ಲದೆ, ಚುನಾವಣೆ, ಚುನಾವಣೆಗೆ ನಿಲ್ಲುವ ಅಭ್ಯರ್ಥಿ ಹಾಗೂ ಶಿಕ್ಷಣದಲ್ಲಿ ಸಂಸ್ಕಾರ ಹೇಗಿರಬೇಕು ಎಂಬುದನ್ನು ಮಾನವೀತೆಯ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದರು. ಭಾರತೀಯ ವಿದ್ಯಾಭವನದ ಅಧ್ಯಕ್ಷ ಪ್ರೊ.ಎ.ವಿ.ನರಸಿಂಹಮೂರ್ತಿ, ಮಹಾರಾಜ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಎಸ್.ಮುರಳಿ, ಲೇಖಕ ಸಂಸ್ಕೃತಿ ಸುಬ್ರಹ್ಮಣ್ಯ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.