![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Sep 16, 2019, 3:07 AM IST
ಬೆಂಗಳೂರು: ವಾರಾಂತ್ಯದಲ್ಲಿ ಪ್ರವಾಸಕ್ಕೆ ಹೋಗುವ ಐಟಿ-ಬಿಟಿ ಉದ್ಯೋಗಿಗಳು ಈಗ ನಗರದ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ನಿರತರಾಗಿದ್ದಾರೆ. ಈ ಮೂಲಕ ನಗರದಲ್ಲಿ ಎರಡೇ ವರ್ಷದಲ್ಲಿ ಐದು ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ.
ಇಂತಹದ್ದೊಂದು ಬದಲಾವಣೆಗೆ ಕಾರಣರಾದವರು ವಾಯು ಸೇನೆಯ ಮಾಜಿ ಪೈಲೆಟ್ ಪ್ರತಾಪ್ ಭೀಮಸೇನ ರಾವ್. ರಸ್ತೆ ಗುಂಡಿಗಳನ್ನು ಮುಚ್ಚುವ ಉದ್ದೇಶದಿಂದಲೇ ಪ್ರತಾಪ್ ಅವರು 2016ರಲ್ಲಿ “ಪಾಟ್‌ಹೋಲ್ ರಾಜಾ’ ಸಂಸ್ಥೆ ಪ್ರಾರಂಭಿಸಿದ್ದಾರೆ. ಈಗ ಈ ಸಂಸ್ಥೆ ಸದಸ್ಯರು ಹೈದರಾಬಾದ್, ಚೆನ್ನೈ ಹಾಗೂ ಮುಂಬೈ ಸೇರಿ ಹಲವು ನಗರಗಳಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದಾರೆ.
ಐಟಿ-ಬಿಟಿ ಉದ್ಯೋಗಿಗಳ ನೆರವಿನೊಂದಿಗೆ “ಪಾಟ್‌ಹೋಲ್ ರಾಜಾ’ ಸಂಸ್ಥೆ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದೆ. ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ 20ಕ್ಕೂ ಹೆಚ್ಚು ಸಂಸ್ಥೆಗಳು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅಡಿ ಹಣ ನೀಡುತ್ತಿದ್ದು, ಸಾರ್ವಜನಿಕರೂ ಇದಕ್ಕೆ ಆರ್ಥಿಕವಾಗಿ ನೆರವಾಗುತ್ತಿರುವುದು ವಿಶೇಷ.
ರಸ್ತೆ ಗುಂಡಿಗಳ ಬಗ್ಗೆ ಸಾರ್ವಜನಿಕರು ಪಾಟ್‌ಹೋಲ್ ರಾಜ ಸಂಸ್ಥೆಯ ಫೇಸ್‌ಬುಕ್, ವಾಟ್ಸ್‌ಆ್ಯಪ್ ಹಾಗೂ ವೆಬ್‌ಸೈಟ್‌ಗಳಲ್ಲಿ ಚಿತ್ರ ಸಹಿತವಾಗಿ ದೂರು ದಾಖಲಿಸುತ್ತಾರೆ. ಈ ರೀತಿ ದಾಖಲಾದ ರಸ್ತೆ ಗುಂಡಿ ದೂರುಗಳನ್ನು ಪಟ್ಟಿ ಮಾಡಿಕೊಂಡು ಪಾಟ್‌ಹೋಲ್ ರಾಜ ಸಂಸ್ಥೆ ರಸ್ತೆ ಗುಂಡಿ ಮುಚ್ಚುತ್ತಿದೆ.
ನಗರದ ವಿವಿಧ ಭಾಗಗಳಿಂದ ಸಾರ್ವಜನಿಕರು ರಸ್ತೆ ಗುಂಡಿಗಳ ಬಗ್ಗೆ ದೂರು ದಾಖಲಿಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ದಾಖಲಾಗುವ ದೂರುಗಳನ್ನು ಪಟ್ಟಿ ಮಾಡಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಇದಕ್ಕೆ ಕೋಲ್ಡ್ ಅಸ್ಫಾಲ್ಟ್ ಎನ್ನುವ ಡಾಂಬರನ್ನು ಬಳಸಲಾಗುತ್ತಿದ್ದು, ಕೆಲವೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳು° ಮುಚ್ಚಬಹುದಾಗಿದೆ.
ಇದು ಪರಿಸರ ಸ್ನೇಹಿ ಡಾಂಬರಾಗಿದ್ದು, ಇದರಲ್ಲಿ ಪ್ಲಾಸ್ಟಿಕ್, ರಬ್ಬರ್ ಮಿಶ್ರವಾಗಿರುತ್ತದೆ. ಹೀಗಾಗಿ, ಒಮ್ಮೆ ಈ ಡಾಂಬರು ಹಾಕಿದರೆ ಆ ಪ್ರದೇಶದಲ್ಲಿ ಮತ್ತೆ ರಸ್ತೆಗಳಲ್ಲಿ ಗುಂಡಿ ಕಾಣಿಸಿಕೊಳ್ಳುವುದಿಲ್ಲ. ಒಂದು ಚದರ ಮೀಟರ್ ರಸ್ತೆ ಗುಂಡಿ ಮಚ್ಚುವುದಕ್ಕೆ 2500 ವೆಚ್ಚವಾಗುತ್ತಿದೆ ಎಂದು ಅವರು ವಿವರಿಸುತ್ತಾರೆ.
ಮಕ್ಕಳಿಗೆ ಜಾಗೃತಿ: ರಸ್ತೆ ಸುರಕ್ಷತೆಯ ಬಗ್ಗೆ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸುವಲ್ಲೂ ಪಾಟ್‌ಹೋಲ್ ರಾಜ ಸಂಸ್ಥೆ ನಿರತವಾಗಿದೆ. ರಸ್ತೆಗಳಲ್ಲಿನ ಸೂರಕ್ಷತಾ ಫಲಕ, ಕ್ರಾಸ್‌ಗಳಲ್ಲಿ ನಿರ್ದಿಷ್ಟ ಬಣ್ಣ ಬಳೆದು ಜಾಗೃತಿ ಮೂಡಿಸುವ ಕೆಲಸವನ್ನೂ ಸಂಸ್ಥೆ ಮಾಡುತ್ತಿದೆ.
ನೀವೂ ದೂರು ನೀಡಬಹುದು: ನಗರದ ರಸ್ತೆ ಗುಂಡಿಗಳ ಬಗ್ಗೆ ನೀವೂ ದೂರು ನೀಡಬಹುದು. ಪಾಟ್‌ಹೋಲ್ ರಾಜ ಸಂಸ್ಥೆಯ ವಾಟ್ಸ್‌ಅಪ್ ನಂ. 8147684653 ಅಥವಾ potholeraja.com ದೂರು ದಾಖಲಿಸಬಹುದು.
ಸ್ನೇಹಿತರ ಪುತ್ರಿಯ ಬಲಿ ಪಡೆದಿತ್ತು…: “2014ರಲ್ಲಿ ಸ್ನೇಹಿತರ ಮಗಳು ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ರೀತಿ ಬೇರೆ ಯಾರಿಗೂ ಆಗಬಾರದು ಎನ್ನುವ ಉದ್ದೇಶದಿಂದ ಸಂಸ್ಥೆಯನ್ನು ಪ್ರಾರಂಭಿಸಲಾಯಿತು’ ಎನ್ನುತ್ತಾರೆ ಪಾಟ್‌ಹೋಲ್ ರಾಜ ಸಂಸ್ಥೆಯ ಸಂಸ್ಥಾಪಕ ಪ್ರತಾಪ್ ಭೀಮಸೇನ ರಾವ್. ರಸ್ತೆ ಗುಂಡಿಗಳಿಂದಲೇ ಸಾರ್ವಜನಿಕರು ಜೀವ ಕಳೆದುಕೊಳ್ಳುವಂತೆ ಆಗಬಾರದು. ಇದರಿಂದ ಅವರ ಕುಟುಂಬವೇ ಬೀದಿಗೆ ಬೀಳುತ್ತವೆ. ಹೀಗಾಗಿ, ರಸ್ತೆ ಗುಂಡಿ ಸಮಸ್ಯೆಗೆ ಬಿಬಿಎಂಪಿಯನ್ನು ದೂರುತ್ತಾ ಕೂರುವ ಬದಲು, ಸ್ವತಃ ಬದಲಾವಣೆಗೆ ಮುಂದಾಗಬೇಕು ಎಂಬುದು ಅವರ ವಾದ.
* ಹಿತೇಶ್ ವೈ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.