ಅಪಾಯದಲ್ಲಿದೆ ಕಾಗಿಣಾ ಸೇತುವೆ
ಭಾರಿ ವಾಹನಗಳ ಭಾರ ತಾಳದೆ ಕಳೆದುಕೊಂಡಿದೆ ಶಕ್ತಿ •ಮುರಿದು ಬಿದ್ದಿವೆ ರಕ್ಷಣಾ ಕಂಬಗಳು
Team Udayavani, Sep 16, 2019, 11:08 AM IST
•ಮಡಿವಾಳಪ್ಪ ಹೇರೂರ
ವಾಡಿ: ಕಾಗಿಣಾ ನದಿಗೆ ನಿರ್ಮಿಸಲಾಗಿರುವ ಸೇತುವೆ ಈಗ ಅಪಾಯದ ಅಂಚಿನಲ್ಲಿದೆ. ವಾಹನಗಳ ನಿರಂತರ ಅಪಘಾತ ಘಟನೆಗಳಿಗೆ ತುತ್ತಾಗಿ ಸೇತುವೆ ಮೇಲಿನ ಸುರಕ್ಷಾ ಕಂಬಗಳು ಪುಡಿಪುಡಿಯಾಗಿವೆ. ಸೇತುವೆಯತ್ತ ಬರುವ ವಾಹನಗಳಿಗೆ ಸ್ವಾಗತ ಕೋರಲು ಹೆಜ್ಜೆ-ಹೆಜ್ಜೆಗೂ ಕಂದಕಗಳು ಸೃಷ್ಟಿಯಾಗಿವೆ. ಇಕ್ಕಟ್ಟಾದ ಸೇತುವೆ ಮೇಲೆ ಹಲವಾತು ದುರ್ಘಟನೆಗಳಿಗೆ ಸಂಭವಿಸಿವೆ.
ಕಲಬುರಗಿ-ಯಾದಗಿರಿ ನಡುವಿನ ರಾಜ್ಯ ಹೆದ್ದಾರಿ ಈಗ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಿದೆ. ಕೇಂದ್ರ ಮಾಜಿ ಸಚಿವ ಡಾ| ಮಲ್ಲಿಕಾರ್ಜುನ ಖರ್ಗೆ ಅವರ ಇಚ್ಛಾಶಕ್ತಿಯಿಂದ ಸಾರಿಗೆ ಸೌಲಭ್ಯ ಹಿಂದೆಂದಿಗಿಂತಲೂ ಉತ್ತಮವಾಗಿದೆ. ಬಸ್ ಸಂಚಾರವೇ ಇಲ್ಲವಾಗಿದ್ದ ಈ ರಸ್ತೆಯಲ್ಲೀಗ ಪ್ರತಿ 15 ನಿಮಿಷಕ್ಕೊಂದು ಈಶಾನ್ಯ ಸಾರಿಗೆ ಸಂಸ್ಥೆ ಬಸ್‌ಗಳು ಹಾಗೂ ಪ್ರತಿ ನಿಮಿಷಕ್ಕೊಂದು ಸಿಮೆಂಟ್ ಲಾರಿ ಸಾಗುವುದನ್ನು ಕಾಣಬಹುದಾಗಿದೆ.
ರಸ್ತೆ ಅಭಿವೃದ್ಧಿಯಾಗಿದೆ ಆದರೆ ಶಿಥಿಲ ಸೇತುವೆ ಅಪಾಯ ಆಹ್ವಾನಿಸುತ್ತಿದ್ದರೂ ಯಾರೂ ಕೇಳುವವರು ಇಲ್ಲದಂತಾಗಿದೆ.
ವಾಡಿ ಮತ್ತು ಶಹಾಬಾದ ನಗರಗಳ ಮಧ್ಯೆ ಸಂಪರ್ಕ ಕೊಂಡಿಯಾಗಿರುವ ಕಾಗಿಣಾ ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ. ವಾಡಿ ಎಸಿಸಿ ಕಂಪನಿ, ಚಿತ್ತಾಪುರದ ಒರಿಯಂಟ್ ಸಿಮೆಂಟ್ ಘಟಕ ಹಾಗೂ ಸುಮಾರು 400ಕ್ಕೂ ಹೆಚ್ಚು ಕಲ್ಲು ಗಣಿಗಳು ಕಾರ್ಯನಿರ್ವಹಿಸುತ್ತಿವೆ. ಸಿಮೆಂಟ್ ಸೇರಿದಂತೆ ಪರ್ಷಿ ಕಲ್ಲುಗಳು ಹೊರ ರಾಜ್ಯಗಳಿಗೆ ರಫ್ತಾಗುತ್ತವೆ. ಗೂಡ್ಸ್ ಲಾರಿಗಳ ಓಡಾಟಕ್ಕೇನು ಲೆಕ್ಕವಿಲ್ಲ. ಭಾರಿ ವಾಹನಗಳ ಭಾರ ತಾಳದೆ ಕಾಗಿಣಾ ಸೇತುವೆ ತನ್ನ ಶಕ್ತಿ ಸಾಮರ್ಥ್ಯ ಕಳೆದುಕೊಂಡಿರುವ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.
ಭಾರಿ ವಾಹನಗಳ ಡಿಕ್ಕಿಯಿಂದ ಸೇತುವೆ ಮೇಲೆ ಎರಡೂ ಬದಿಯಲ್ಲಿ ಅಳವಡಿಸಲಾಗಿರುವ ಕಾಂಕ್ರಿಟ್ ರಕ್ಷಣಾ ಗೋಡೆಗಳು ಮುರಿದು ಬಿದ್ದಿವೆ. ಜೀವ ಕೈಯಲ್ಲಿ ಹಿಡಿದುಕೊಂಡು ಸೇತುವೆ ದಾಟಬೇಕಾದ ಭೀತಿ ಎದುರಾಗಿದೆ.
ಇತ್ತ ಚಿತ್ತ ಹರಿಸುವರೇ ಸಂಸದ ಜಾಧವ
ಗ್ರಾಮೀಣ ರಸ್ತೆಯಂತಿದ್ದ ಹದಗೆಟ್ಟ ಕಲಬುರಗಿ-ಗುತ್ತಿ ನಡುವಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸಿರುವ ಮಾಜಿ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಕಿರಿದಾದ, ಯಮಸ್ವರೂಪಿ ಕಾಗಿಣಾ ಸೇತುವೆ ಅಗಲೀಕರಣ ಮಾಡಿಸುವಲ್ಲಿ ಮರೆತಂತೆ ಕಾಣುತ್ತಿದೆ. ಈಗ ಸಂಸದ ಡಾ| ಉಮೇಶ ಜಾಧವ ಕಾಗಿಣಾ ಸೇತುವೆ ಅಗಲೀಕರಣಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವರೇ ಎಂಬ ಪ್ರಶ್ನೆ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.