ಕಾರು ಮಾರಾಟ ಕಡಿಮೆಯಾಗಲು ಕಾರಣಗಳೇನು?
ಏರಿದ ನೋಂದಣಿ ಶುಲ್ಕ, ವಿಮೆ ಮೊತ್ತದ ಎಫೆಕ್ಟ್ ;ಎಲೆಕ್ಟ್ರಿಕ್ ಕಾರುಗಳತ್ತವೂ ಗ್ರಾಹಕರ ಗಮನ
Team Udayavani, Sep 16, 2019, 6:30 PM IST
ನವದೆಹಲಿ: ಭಾರತೀಯ ಆಟೋ ಉದ್ಯಮದಲ್ಲಿ ಕಾರು ಮಾರಾಟವಾಗದೇ ಕಂಪೆನಿಗಳು ಕಂಗಾಲಾಗಿವೆ. ಇದರಿಂದ ಅಧಿಕೃತ ಡೀಲರ್ಸ್‌ಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಬರೋಬ್ಬರಿ 2 ಲಕ್ಷಕ್ಕೂ ಮಿಕ್ಕಿ ಉದ್ಯೋಗಗಳು ಕಡಿತಗೊಂಡಿವೆ. ಹೀಗೆ ಕಾರು ಮಾರಾಟ ಕಡಿಮೆಯಾಗಲು ಕಾರಣವೇನು? ಇಲ್ಲಿದೆ ಮಾಹಿತಿ.
ಶೇ. 31ರಷ್ಟು ಕುಸಿತ
ದೇಶೀಯ ಪ್ರಯಾಣಿಕರ ವಾಹನಗಳ ಮಾರಾಟದಲ್ಲಿ 31.57ರಷ್ಟು ಕುಸಿತ ಕಂಡಿದೆ. ಹೀಗೆಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರು ಬಿಡುಗಡೆ ಮಾಡಿರುವ ವರದಿ ಹೇಳಿದೆ.
ಬಿಎಸ್-6 ಬೆನ್ನತ್ತಿದ ಗ್ರಾಹಕರು
2020ರಲ್ಲಿ ಮಾರುಕಟ್ಟೆಗೆ ಲಗ್ಗೆಇಡಲಿರುವ ಬಿಎಸ್-6 ಕಾರಿನ ಮೇಲೆ ಗ್ರಾಹಕರು ಹೆಚ್ಚು ಆಕರ್ಷಿಕರಾಗಿದ್ದಾರೆ. ಇದು ಬಿಎಸ್-4 ಕಾರಿನ ಮಾರಾಟದ ಮೇಲೆ ಪ್ರಭಾವ ಬೀರಿದ್ದು, ಬೇಡಿಕೆ ಕುಸಿಯಲು ಒಂದು ಕಾರಣವಾಗಿದೆ. ಇದರ ಹೊರತಾಗಿ 9 ತಿಂಗಳಿನಿಂದ ಕಾರಿನ ಬೆಲೆಯಲ್ಲಿ ಪ್ರತಿ ತಿಂಗಳಿಗೆ ಶೇ. 15ರಷ್ಟು ಹೆಚ್ಚಾಗಿದೆ. ಏರ್‌ಬ್ಯಾಗ್, ರಿವರ್ಸ್ ಸೆನ್ಸಾರ್ ಹಾಗೂ ಎಬಿಸಿ ಮತ್ತು ಕ್ರ್ಯಾಶ್ ಕನ್ಫìಮಿಟಿ ಅಳವಡಿಕೆ ಕಡ್ಡಾವಾಗಿದೆ. ಇಂತಹ ಕೆಲವೊಂದು ನಿಬಂಧನೆಗಳು ಗ್ರಾಹಕರ ಮೇಲೆ ಪ್ರಭಾವ ಬೀರಿದೆ.
ತೈಲ ಬೆಲೆ ಏರಿಕೆ
ಭಾರತೀಯ ತೈಲ ನಿಗಮ ಮಂಡಳಿ ನೀಡಿರುವ ಅಂಕಿ-ಅಂಶಗಳ ಪ್ರಕಾರ ನಾಲ್ಕು ವರ್ಷದಿಂದ ತೈಲ ಬೆಲೆಯಲ್ಲಿ ಶೇ. 15ರಷ್ಟು ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿಸಲಾಗಿದ್ದು ಮತ್ತೂಂದು ಕಾರಣವಾಗಿದೆ.
ಜಿಡಿಪಿ ಕುಸಿತ
ಒಟ್ಟು ದೇಶೀಯ ಉತ್ಪನ್ನಗಳ ಮಾರಾಟ ಪ್ರಮಾಣ ಶೇ. 5ಕ್ಕೆ ಇಳಿದಿದ್ದು, ಜೂನ್ ತ್ತೈಮಾಸಿಕದಲ್ಲಿ 6 ವರ್ಷಗಳಲ್ಲಿ ದಾಖಲೆ ಮಟ್ಟದ ಕುಸಿತ ಕಂಡಿದೆ. ಮಾರ್ಚ್ ತ್ತೈಮಾಸಿಕದಲ್ಲಿ ಬೇಡಿಕೆ ಕನಿಷ್ಠ ಎಂದರೆ ಶೇ. 3.1ರಷ್ಟು ಇಳಿಕೆಯಾಗಿದೆ. 2 ವರ್ಷಗಳಲ್ಲಿ ಸೆನ್ಸೆಕ್ಸ್ ಶೇ. 3ರಷ್ಟು ಕುಸಿತ ಕಂಡಿದ್ದು, ಷೇರು ಮಾರುಕಟ್ಟೆಯ ಮೇಲೂ ಇದು ಪರಿಣಾಮ ಬೀರಿದೆ. ಪರೋಕ್ಷವಾಗಿ ತಲಾದಾಯದ ಮೇಲೆ ಪರಿಣಾಮ ಬೀರಿದೆ.
ಮೆಟ್ರೋ , ಓಲಾ, ಊಬರ್ ಕಾರಣ?
ಅತಿಯಾದ ವಾಹನ ದಟ್ಟನೆ, ವಾಹನ ನಿಲುಗಡೆ ಸಮಸ್ಯೆ ಹಾಗೂ ಕಳೆಪೆ ರಸ್ತೆಗಳು ಗ್ರಾಹಕರನ್ನು ಕಟ್ಟಿ ಹಾಕಿವೆ. ಸ್ವಂತ ವಾಹನಗಳನ್ನು ಖರೀದಿ ಮಾಡಿ ದಂಡ ಪಾವತಿ ದುಬಾರಿ ದಂಡ ಪಾವತಿ ಮಾಡುವ ಬದಲು ಲಭ್ಯವಿರುವ ಟ್ಯಾಕ್ಸಿಗಳು, ಓಲಾ, ಊಬರ್‌ಗಳ ಸೇವೆ ಪಡೆಯುತ್ತಿದ್ದಾರೆ. ದೊಡ್ಡ ನಗರಗಳಲ್ಲಿ ಮೆಟ್ರೋ ಸೇವೆಗಳು ಲಭ್ಯವಿದ್ದು, ಕಾರು ಮಾರಾಟಕ್ಕೆ ಹೊಡೆತ ನೀಡಿರುವ ಸಾಧ್ಯತೆ ಇದೆ.
ಐಷಾರಾಮಿ ಕಾರುಗಳ ಬೇಡಿಕೆ
ಕಾರು ಖರೀದಿಸುವ ಗ್ರಾಹಕರು ತುಸು ಐಷಾರಾಮಿ ಕಾರುಗಳಿಗೆ ಬೇಡಿಕೆ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಸಾಮಾನ್ಯ ಕಾರುಗಳು, ಆರಂಭಿಕ ಶ್ರೇಣಿಯ ಕಾಂಪ್ಯಾಕ್ಟ್ ಮತ್ತು ಹ್ಯಾಚ್‌ಬ್ಯಾಕ್‌ಗಳ ಮಾರಾಟದಲ್ಲಿ ಇಳಿಕೆಯಾಗಿದೆ ಎಂದು ಊಹಿಸಲಾಗಿದೆ.
ಹೆಚ್ಚಿದ ಬಡ್ಡಿದರ
ಕಳೆದ ಹಲವಾರು ತಿಂಗಳುಗಳಲ್ಲಿ ಆರ್‌ಬಿಐ ರೆಪೋ ದರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಬ್ಯಾಂಕುಗಳು ಗ್ರಾಹಕ ಉಪಯೋಗಿ ಯೋಜನೆಗಳನ್ನು ಕಲ್ಪಿಸಿಕೊಡುವುದನ್ನು ನಿಲ್ಲಿಸಿವೆ. ಇದು ಕಂತುಗಳಲ್ಲಿ ವಾಹನ ಕೊಂಡುಕೊಳ್ಳುವವರ ಮೇಲೆ ಪರಿಣಾಮ ಬೀರಿದೆ.
ನೋಂದಣಿ, ವಿಮೆ ಮೊತ್ತ ಏರಿಕೆ
ಇತ್ತೀಚಿನ ದಿನಗಳಲ್ಲಿ ವಾಹನ ನೋಂದಣಿ ಶುಲ್ಕ, ವಿಮೆ ಮೊತ್ತದಲ್ಲಿ ಏರಿಕೆಯಾಗಿದೆ. ಮೂರು ವರ್ಷದವರೆಗೆ ವಿಮೆ ಕಾಲಾವಧಿಯನ್ನು ವಿಸ್ತರಿಸಲಾಗಿದೆ. ಮಾತ್ರವಲ್ಲದೇ ನೂತನ ಮೋಟಾರ್ ವಾಹನ ಕಾಯ್ದೆಯೂ ಪರಿಣಾಮ ಬೀರಿರುವ ಸಾಧ್ಯತೆ ಇದೆ.
ಕಳಪೆ ರಸ್ತೆಗಳು
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಗಳನ್ನು ವಿಸ್ತರಿಸಿದ್ದರೂ, ನಗರಗಳಲ್ಲಿನ ರಸ್ತೆಗಳ ಗುಣಮಟ್ಟ ಕಳಪೆಯಾಗಿದೆ. ಹೆದ್ದಾರಿಗಳೇ ಕಳಪೆಯಾಗಿದೆ. ಹೆಚ್ಚಿದ ಜಿಎಸ್‌ಟಿಯೂ ಗ್ರಾಹಕರನ್ನು ತಡೆಹಿಡಿದಿರುವ ಸಾಧ್ಯತೆ ಇದೆ.
ಗೊಂದಲ ಸೃಷ್ಟಿಸಿದ ಇವಿ ಪಾಲಿಸಿ
ಬ್ಯಾಟರಿ ಚಾಲಿತ ವಾಹನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಪೆಟ್ರೋಲ್-ಡೀಸೆಲ್ ಬೆಲೆಗಿಂತ ಅಗ್ಗವಾಗಲಿದೆ. ಇಂಧನ ಕಾರುಗಳಿಗಿಂತ ಇಲೆಕ್ಟ್ರಾನಿಕ್ ಕಾರ್‌ಗಳನ್ನು ಖರೀದಿ ಉತ್ತಮ ಎಂಬ ಭಾವನೆಯಿಂದ ಸದ್ಯ ಕಾರು ಖರೀದಿ ಬೇಡ ಎಂಬ ಭಾವನೆಯೂ ಗ್ರಾಹಕರದ್ದು ಎನ್ನಲಾಗಿದೆ.
ಕಾರುಗಳ ಮಾರಾಟ (ಶೇ. 41ಕುಸಿತ)
-2019
1,15,957
-2018
1,96,847
ಟಾಪ್ 5 ಕಾರು ತಯಾರಿಕ ಸಂಸ್ಥೆಗಳ ಮಾರಾಟ
– ಮಾರುತಿ ಸುಜುಕಿ 65,993
– ಹುಂಡೈ 22,716
– ಹೋಂಡಾ 6830
– ಟೊಯೋಟಾ 5,017
– ರೆನೋ 4,681
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.