ಎಲ್ಲರೂ ಲೆಫ್ಟ್
Team Udayavani, Sep 17, 2019, 5:00 AM IST
ನನ್ನ ಗೆಳೆಯರೊಬ್ಬರು ಸಾಹಿತ್ಯದ ಅಭಿರುಚಿ ಹೊಂದಿದ್ದವರು. ಕತೆ, ಕವನ-ಲೇಖನಗಳನ್ನು ಓದುವ, ಬರೆಯುವ ಆಸಕ್ತಿಯನ್ನು ಎಲ್ಲರಲ್ಲೂ ಬೆಳೆಸಬೇಕೆಂದು ಒಂದು ವಾಟ್ಸಾಪ್ ಗ್ರೂಪ್ ರಚಿಸಿದ್ದರು. ಇದರಲ್ಲಿ ಪದವಿ ಕಾಲೇಜಿನಲ್ಲಿ ಐಚ್ಛಿಕ ವಿಷಯವಾಗಿ ಕನ್ನಡ ಓದಿದ ಗೆಳೆಯರನ್ನು ಸೇರಿಸಲಾಗಿತ್ತು. ಪ್ರತಿದಿನ ಅವರೇ ಸ್ವರಚಿತ ಕವನಗಳನ್ನು ಹಾಕುವುದು, ಅದರ ಮೇಲೆ ವಿಮರ್ಶೆ ಮಾಡುವುದು ನಡೆಯುತ್ತಿತ್ತು. ಗುಂಪಿನಲ್ಲಿ ಅನುಭವಿ ಬರಹಗಾರರು ಹೊಸ ಬರಹಗಾರರಿಗೆ ಸಲಹೆಗಳನ್ನು ನೀಡುತ್ತಿದ್ದರು. ಕೆಲವರು ಸಂಘಸಂಸ್ಥೆಗಳು ತಮಗೆ ನೀಡಿರುವ ಪ್ರಶಸ್ತಿಗಳನ್ನು ಅಭಿಮಾನಪೂರ್ವಕವಾಗಿ ಹಾಗೂ ಪ್ರಚಾರ ಮಾಡಲು ಗ್ರೂಪ್‌ನಲ್ಲಿ ಹಾಕುತ್ತಿದ್ದರು. ಒಂದಷ್ಟು ಜನ ಅದಕ್ಕೆ ಲೈಕುಗಳನ್ನು ಒತ್ತಿ ಅವರ ಮನಸ್ಸನ್ನು ಮತ್ತಷ್ಟು ಮುದ ಗೊಳಿಸುತ್ತಿದ್ದರು. ಈ ಲೈಕುಗಳು ಹೆಚ್ಚುತ್ತಿದ್ದಂತೆ, ಸಾಹಿತ್ಯ ವಿಮರ್ಶೆ ಹಿಂದಕ್ಕೆ ಹೋಯಿತು. ಪ್ರಶಸ್ತಿಯ ಪ್ರಚಾರ ಮುಂದಕ್ಕೆ ಬಂತು. ಗ್ರೂಪಿನ ಅಡ್ಮಿನ್ ಮಧ್ಯ ಪ್ರವೇಶಿಸಿ, ನಿಯಮಗಳನ್ನು ಪಾಲಿಸಿರೆಂದು ಎಲ್ಲರಿಗೂ ಎಚ್ಚರಿಕೆ ನೀಡಿದರು. ಹೀಗೆ ಎಚ್ಚರಿಕೆ ನೀಡಿದ ಮೇಲೆ ಎಲ್ಲರೂ ವೈಯಕ್ತಿಕ ಸಂದೇಶ ಅಥವಾ ಪ್ರಶಸ್ತಿಗಳ ಕುರಿತು ಸಂದೇಶವನ್ನು ಹಾಕುವುದನ್ನೇ ಬಿಟ್ಟು ಬಿಟ್ಟರು. ಹೀಗೇ ಹಲವು ತಿಂಗಳುಗಳ ಕಾಲ ನಡೆಯಿತು. ಆ ನಂತರದಲ್ಲಿ ನಿಯಮಿತವಾಗಿ ಕತೆ-ಕವನಗಳು ಚರ್ಚೆಯಾಗುತ್ತಿದ್ದವು. ಈ ಮಧ್ಯೆ ಇದ್ದಕ್ಕಿದ್ದಂತೆ ಅಡ್ಮಿನ್‌ಗೆ ಒಂದು ಪ್ರಶಸ್ತಿ ಬಂತು. ಆ ವಿಚಾರವನ್ನು ವಾಟ್ಸಾಪ್ ಗ್ರೂಪ್‌ಗೆ ಹಾಕಿಯೇ ಬಿಟ್ಟರು.
ತಕ್ಷಣ ಕೆಲವರು, ಹಿಂದೆ ಗ್ರೂಪ್ ನಿಯಮ ಪಾಲಿಸಿ ಎಂದು ಹೇಳಿದ್ದ ಅಡ್ಮಿನ್‌ಗೆà- ನಿಯಮ ಅಂದ ಮೇಲೆ ಎಲ್ಲರಿಗೂ ಒಂದೇ. ನೀವೂ ಪ್ರಶಸ್ತಿ ವಿವರ ಹಾಸುವಂತಿಲ್ಲ ಎಂದರು ! ಹೀಗೆ ಮಾಡಿದವರನ್ನು ಒಬ್ಬೊಬ್ಬರಾಗಿ, ಯಾವ ಮುಲಾಜೂ ಇಲ್ಲದೆ ಗ್ರೂಪ್‌ನಿಂದ ಹೊರ ಹಾಕುತ್ತಾ ಹೋದರು ಅಡ್ಮಿನ್.
ಇದು ಬರು ಬರುತ್ತಾ ಹೆಚ್ಚಾಗುತ್ತಾ ಹೋಯಿತು. ಎಂಭತ್ತು ಸದಸ್ಯರಿದ್ದ ಗ್ರೂಪ್ ಐದೂ ಜನರಿಗೆ ಇಳಿಯಿತು. ಕೊನೆಗೆ ನಾನೂ ಒಳಗೊಂಡಂತೆ ಈ ಐದೂ ಜನರೂ ಅಡ್ಮಿನ್‌ಗೆ ನಮ್ಮ ವಾಟ್ಸಾéಪ್ ಗ್ರೂಪ್ ಎಲ್ಲರ ವಿಶ್ವಾಸ ಕಳೆದುಕೊಂಡಿರುವುದರಿಂದ ವಿಸರ್ಜನೆ ಮಾಡಿ ಎಂದು ವಿನಂತಿಸಿದೆವು. ಇದಕ್ಕೂ ಬಗ್ಗದ ಅಡ್ಮಿನ್, ಮತ್ತೆ ತಮಗೆ ಸಂಘ ಸಂಸ್ಥೆಗಳಿಂದ ಸಂದ ಪ್ರಶಸ್ತಿಗಳನ್ನು ಗ್ರೂಪಿನಲ್ಲಿ ಸುರಿಯಲು ಪ್ರಾರಂಭಿಸಿದರು. ಕೊನೆಗೆ ಉಳಿದ ಐದಾರು ಸ್ನೇಹಿತರು ಒಟ್ಟಿಗೆ ಲೆಫ್ಟ್ ಆದೆವು.
ಮಲ್ಲಪ್ಪ ಫ ಕರೇಣ್ಣನವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.