![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
![Kodagu-Polcie](https://www.udayavani.com/wp-content/uploads/2025/02/Kodagu-Polcie-415x249.jpg)
Team Udayavani, Sep 17, 2019, 3:04 AM IST
ಕನ್ನಡಕ್ಕೆ ಪರಭಾಷೆ ನಟಿಯರ ಆಗಮನ ಹೊಸದೇನಲ್ಲ. ಆದರೆ, ಕನ್ನಡ ಚಿತ್ರದ ಮೂಲಕ ಗಮನಸೆಳೆಯುವುದರ ಜೊತೆಗೆ ಭರವಸೆ ಮೂಡಿಸುವುದು ನಿಜಕ್ಕೂ ಹೊಸ ವಿಷಯ. ಸದ್ಯಕ್ಕೆ ಈಗ “ಪೈಲ್ವಾನ್’ ಬೆಡಗಿ ಆಕಾಂಕ್ಷಾ ಸಿಂಗ್ ಅಂಥದ್ದೊಂದು ಭರವಸೆ ಮೂಡಿಸಿದ್ದಾರೆ. ಹೌದು, ಇತ್ತೀಚೆಗಷ್ಟೇ ತೆರೆಗೆ ಬಂದ “ಪೈಲ್ವಾನ್’ ಚಿತ್ರ ಮೆಚ್ಚುಗೆ ಪಡೆದಿದೆ. ಅಷ್ಟೇ ಅಲ್ಲ, ಆ ಚಿತ್ರದಲ್ಲಿ ಸುದೀಪ್ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿರುವ ಆಕಾಂಕ್ಷ ಸಿಂಗ್ ಕೂಡ ನೋಡುಗರ ಗಮನ ಸೆಳೆದಿದ್ದಾರೆ.
ಪರಭಾಷೆಯಿಂದ ಬರುವ ಬಹುತೇಕ ನಟಿಯರು ಗ್ಲಾಮರ್‌ಗಷ್ಟೇ ಸೀಮಿತವಾಗಿರುವುದನ್ನು ಇಲ್ಲಿ ಗಮನಿಸಬಹುದು. ಹಾಗಂತ, ನಟನೆ ಇಲ್ಲವೆಂದಲ್ಲ, ಆದರೆ, ಆಕಾಂಕ್ಷಾ ಸಿಂಗ್ ಗ್ಲಾಮರಸ್ ಆಗಿರುವುದಷ್ಟೇ ಅಲ್ಲ, ತಮ್ಮ ಪ್ರಬುದ್ಧ ನಟನೆಯಲ್ಲೂ ಸೈ ಎನಿಸಿಕೊಳ್ಳುವ ಮೂಲಕ ಸುದೀಪ್‌ಗೆ ಸರಿಯಾದ ಜೋಡಿ ಎಂದೆನಿಸಿಕೊಂಡಿದ್ದಾರೆ. ಇದು ಸಹಜವಾಗಿಯೇ ಆಕಾಂಕ್ಷ ಸಿಂಗ್ ಅವರಿಗೂ ಖುಷಿ ಹೆಚ್ಚಿಸಿದೆ.
ಸದ್ಯಕ್ಕೆ ಆಕಾಂಕ್ಷಾ ಸಿಂಗ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ಬೇರೂರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಕನ್ನಡದ ಬೆರಳೆಣಿಕೆ ನಟಿಯರು ಪರಭಾಷೆಯತ್ತ ಮುಖ ಮಾಡಿ, ಅಲ್ಲಿ ನೆಲೆಕಂಡುಕೊಳ್ಳುತ್ತಿರುವ ಹೊತ್ತಲ್ಲಿ, ಪರಭಾಷೆಯಿಂದ ಬಂದ ಆಕಾಂಕ್ಷಾ ಸಿಂಗ್, ಇಲ್ಲಿನ ಮಂದಿಯ ಮೆಚ್ಚುಗೆ ಗಳಿಸುವ ಮೂಲಕ ಮೆಲ್ಲನೆ ನೆಲೆಕಾಣುವ ಸೂಚನೆ ಕೊಡುತ್ತಿದ್ದಾರೆ. ಈಗಾಗಲೇ ಒಂದಷ್ಟು ಮಂದಿ ಆಕಾಂಕ್ಷ ಸಿಂಗ್ ಅವರನ್ನು ಸಂಪರ್ಕಿಸುವ ಪ್ರಯತ್ನದಲ್ಲೂ ಇದ್ದಾರೆ ಎಂಬುದೇ ಈ ಹೊತ್ತಿನ ವಿಶೇಷ.
ರಾಜಸ್ಥಾನ ಮೂಲದ ಆಕಾಂಕ್ಷ ಸಿಂಗ್‌ಗೆ “ಪೈಲ್ವಾನ್’ ಕನ್ನಡದ ಮೊದಲ ಚಿತ್ರ. ಹಾಗಂತ, ಸಿನಿಮಾ ಅನುಭವ ಇಲ್ಲವೆಂದಲ್ಲ, ಹಿಂದಿ ಕಿರುತೆರೆಯಲ್ಲಿ ನಾಲ್ಕೈದು ವರ್ಷಗಳ ಕಾಲ ಮಿಂಚಿದವರು. ಆ ಬಳಿಕ ಬೆರಳೆಣಿಕೆಯ ಹಿಂದಿ, ತೆಲುಗು ಚಿತ್ರಗಳಲ್ಲೂ ನಟಿಸಿದ್ದಾರೆ. ಈಗ ಇದೇ ಮೊದಲ ಬಾರಿಗೆ ಕನ್ನಡದ “ಪೈಲ್ವಾನ’ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗಿಳಿದ ಅವರ ನಟನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿರುವುದಲ್ಲದೆ, ಪರಭಾಷೆಯಿಂದ ಬಂದ ನಟಿಯೊಬ್ಬಳು ಒಂದಷ್ಟು ಭರವಸೆ ಮೂಡಿಸಿರುವುದಂತೂ ಸುಳ್ಳಲ್ಲ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.