ಹಿಂದೂ ಸಾಗರದಲ್ಲಿ ಚೀನಾ ಚಲನವಲನ
Team Udayavani, Sep 17, 2019, 5:35 AM IST
ನವದೆಹಲಿ: ಹಿಂದೂ ಮಹಾ ಸಾಗರದಲ್ಲಿ ಇತ್ತೀಚೆಗೆ ಚೀನಾದ ನೌಕಾಪಡೆಗೆ ಸೇರಿದ 7 ನೌಕೆಗಳು ಓಡಾಡಿರುವುದನ್ನು ಭಾರತೀಯ ನೌಕಾಪಡೆಯ ವಿಚಕ್ಷಣ ದಳ ಪತ್ತೆ ಹಚ್ಚಿದೆ. ಇದು ದಕ್ಷಿಣ ಸಾಗರ ಪ್ರಾಂತ್ಯದಲ್ಲಿ ಭಾರತದ ಮುಂದೆ ಚೀನಾ ತೋರುತ್ತಿರುವ ತನ್ನ ಶಕ್ತಿ ಪ್ರದರ್ಶನ ಎಂದೇ ಪರಿಗಣಿಸಲಾಗಿದೆ.
ಅಮೆರಿಕ ಮೂಲದ ಪಿ-8ಐ ಆ್ಯಂಟಿ ಸಬ್‌ಮರಿನ್ ವಾರ್‌ಫೇರ್ ಎಂಬ ಗುಪ್ತಚರ ವಿಮಾನಗಳ ಮೂಲಕ ಭಾರತೀಯ ನೌಕಾಪಡೆಯ ವಿಚಕ್ಷಣ ದಳ, ಚೀನಾದ ಹಡಗುಗಳ ಫೋಟೋಗಳನ್ನು ಕ್ಲಿಕ್ಕಿಸಿದ್ದು, ಏಳು ನೌಕೆಗಳಲ್ಲಿ 27,000 ಟನ್ ತೂಕದ ಲ್ಯಾಂಡಿಂಗ್ ಪ್ಲಾಟ್‌ಫಾರಂ ಡಾಕ್ (ಎಲ್‌ಪಿಡಿ) “ಕ್ಸಿಯಾನ್ -32′ ಎಂಬ ದೈತ್ಯ ಸಮರ ನೌಕೆ ಕೂಡ ಸೇರಿದೆ. ಇದೇ ತಿಂಗಳ ಆರಂಭದಲ್ಲಿ ಹಿಂದೂ ಮಹಾ ಸಾಗರದ ದಕ್ಷಿಣ ಭಾಗದ ಮೂಲಕ ಸಾಗಿಹೋಗಿರುವ ಚೀನಾದ ಈ ಎಲ್ಲಾ ನೌಕೆಗಳು, ಶ್ರೀಲಂಕಾದ ಕರಾವಳಿಯನ್ನು ಪ್ರವೇಶಿಸಿವೆ ಎಂದು ಹೇಳಲಾಗಿದೆ.
ಮತ್ತೂಂದು ಕುತೂಹಲಕಾರಿ ವಿಚಾರವೇನೆಂದರೆ, ಚೀನಾದ ಏಳು ನೌಕೆಗಳ ಜತೆಗೆ, “ಕೌಂಟರ್-ಪೈರಸಿ 32′, “ಕೌಂಟರ್-ಪೈರಸಿ 33′ ಎಂಬ ಚೀನಾದ ವಿಶೇಷ ಪಡೆಗಳ ತಲಾ ಮೂರು ನೌಕೆಗಳೂ ಇರುವುದು. ವಾಸ್ತವವಾಗಿ, ಆ ನೌಕೆಗಳನ್ನು ಯೆಮನ್ ದೇಶದ ಅಡೆನ್ ಕೊಲ್ಲಿಯಲ್ಲಿ ಕಾರ್ಯನಿರ್ವಹಿಸುವಂತೆ ಚೀನಾ ನೇಮಿಸಿದೆ. ಚೀನಾದ ಕೋಟ್ಯಂತರ ಮೌಲ್ಯದ ಉತ್ಪನ್ನಗಳು ಸೌದಿ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ಕಡೆಗೆ ಯೆಮೆನ್ ಸಾಗರ ಗಡಿಯ ಮೂಲಕ ಸಾಗುವುದರಿಂದ ಅಲ್ಲಿ ಕಳ್ಳಸಾಗಣೆದಾರರ, ಹಡಗುಗಳ್ಳರ ಕಾಟ ತಪ್ಪಿಸಿಕೊಳ್ಳಲು ಚೀನಾ, ತನ್ನ ಯುದ್ಧ ನೌಕೆಗಳನ್ನು ಈ ಮಾರ್ಗದಲ್ಲಿ ಕಾವಲಿಗಾಗಿ ನಿಯೋಜಿಸಿರುತ್ತದೆ. ಅವುಗಳಲ್ಲಿ ಚೀನಾದ ಎಲ್‌ಪಿಡಿ ಜತೆಗೆ, ಕೌಂಟರ್-ಪೈರಸಿ 32, ಕೌಂಟರ್ ಪೈರಸಿ 33 ನೌಕೆಗಳ ಪಾತ್ರ ಹಿರಿದು. ಆದರೆ, ಆ ಹಡಗುಗಳು ಹಿಂದೂ ಮಹಾಸಾಗರದತ್ತ ಏಕೆ ಬಂದವು, ಅದರಲ್ಲೂ, ಚೀನಾದ ಏಳೂ ನೌಕೆಗಳು ಭಾರತೀಯ ಭೂಭಾಗಕ್ಕೆ ಹತ್ತಿರವಿರುವ ಸಾಗರ ಪ್ರದೇಶದಲ್ಲಿ ಹಾದು ಹೋಗಿರು ವುದಾದರೂ ಏತಕ್ಕೆ ಎಂಬ ಪ್ರಶ್ನೆಗಳು ಎದ್ದಿವೆ.
ಚೀನಾದಿಂದ ಶಕ್ತಿ ಪ್ರದರ್ಶನ ಪ್ರಯತ್ನ?
ಹಿಂದೂ ಮಹಾ ಸಾಗರದಲ್ಲಿ ಚೀನಾ ತನ್ನ ಶಕ್ತಿ ಪ್ರದರ್ಶನ ತೋರಲು ಇತ್ತೀಚೆಗೆ ಭಾರೀ ಆಸಕ್ತಿ ತೋರುತ್ತಿದ್ದು, ಅದಕ್ಕಾಗಿಯೇ, ತನ್ನ ನೌಕಾಪಡೆಯಲ್ಲಿನ ದೈತ್ಯ ಸಮರ ನೌಕೆಗಳನ್ನು ಓಡಾಡಿಸುತ್ತದೆ ಎಂದು ಹೇಳಲಾಗುತ್ತಿದೆ. ಇತ್ತ, ಭಾರತ ನೌಕಾಪಡೆ ಸಹ ತನ್ನ ಏಕೈಕ ಸಮರ ನೌಕೆಯಾದ “ವಿಕ್ರಮಾದಿತ್ಯ’ನನ್ನು ಕಾವಲಿಗೆ ನೇಮಿಸಿದೆ. 2ನೇ ಸಮರ ನೌಕೆ ಕೊಚಿನ್‌ನಲ್ಲಿ ಸಂಪೂರ್ಣ ಸ್ವದೇಶಿ ತಂತ್ರ ಜ್ಞಾನದೊಂದಿಗೆ ಸಿದ್ಧಗೊಳ್ಳುತ್ತಿದ್ದು, ಮೂರ ನೇ ಸಮರ ನೌಕೆಯ ತಯಾರಿಕೆಗೂ ಭಾರತ ಸನ್ನದ್ಧವಾಗಿದೆ. ಆ ಮೂಲಕ, ಚೀನಾಕ್ಕೆ ತನ್ನ ಸಾಮರ್ಥ್ಯ ತೋರಿಸಲು ಭಾರತವೂ ಸಜ್ಜಾಗಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.