ಕಲ್ಯಾಣ ಕರ್ನಾಟಕ: ಶರಣ ಪರಂಪರೆಗೆ ಅನ್ವರ್ಥಕ
Team Udayavani, Sep 17, 2019, 5:51 AM IST
ಬೆಂಗಳೂರು: ಈ ದಿನ ಕನ್ನಡ ನಾಡಿನ ಜನತೆ, ಅದರಲ್ಲೂ ಹೈದರಾಬಾದ್-ಕರ್ನಾಟಕ ಜನತೆ ಹೆಮ್ಮೆ ಪಡುವ ದಿನ. ಸೆಪ್ಟಂಬರ್ 17 ರಂದು, ನಮ್ಮ ಕರುನಾಡಿನ ಭಾಗವಾದ ಹೈದರಾಬಾದ್- ಕರ್ನಾಟಕ ಪ್ರಾಂತ್ಯವು ನಿಜಾಮನ ಶೋಷಣೆಯಿಂದ ಸ್ವಾತಂತ್ರ್ಯ ಪಡೆದ ದಿನ, ಭಾರತ ಒಕ್ಕೂಟದ ಭಾಗವಾದ ದಿನ. ಈ ಸಂದರ್ಭದಲ್ಲಿ ನಾಡಿನ ಜನತೆಗೆ ಶುಭಾಶಯಗಳನ್ನು ಕೋರುತ್ತೇನೆ.
ಆದರೆ, ವಿಲೀನ ಪ್ರಕ್ರಿಯೆ ಸಾಕಷ್ಟು ಸಾವು-ನೋವುಗಳ ಅನಂತರ ಸಂದ ಜಯ. ಈ ಹೋರಾಟದಲ್ಲಿ ಪಾಲ್ಗೊಂಡ ಎಲ್ಲ ಮಹನೀಯರಿಗೆ ನಾವು ಚಿರಋಣಿ.
1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಹೈದರಾಬಾದ್- ಕರ್ನಾಟಕಕ್ಕೆ ಸ್ವಾತಂತ್ರ Âವೆಂಬುದು ಮರೀಚಿಕೆಯಾಗಿತ್ತು. ಅಖಂಡ ಭಾರತದ 560ಕ್ಕೂ ಹೆಚ್ಚು ಸಂಸ್ಥಾನಗಳ ಮಹಾರಾಜರು ಭಾರತ ಒಕ್ಕೂಟ ಸೇರಲು ಒಪ್ಪಿ ಕರಾರಿಗೆ ಸಹಿ ಹಾಕಿದ ಸಂದರ್ಭ ದಲ್ಲಿ ಹೈದರಾಬಾದ್ ನಿಜಾಮ ಭಾರತ ಒಕ್ಕೂಟ ಸೇರಲು ತೀವ್ರ ಪ್ರತಿರೋಧವನ್ನು ಒಡ್ಡುತ್ತಾನೆ.
ಭಾರತದ ಉದ್ದಗಲಕ್ಕೂ ಗೆಲುವಿನ ಜಯಭೇರಿ ಮೊಳಗುತ್ತಿದ್ದರೆ ನಿಜಾಮನ ಆಡಳಿತವಿದ್ದ ಪ್ರಾಂತ್ಯದಲ್ಲಿ ಹಿಂಸೆಯನ್ನು ಪ್ರಚೋದಿಸುವ ಘೋಷಣೆಗಳು ಮೊಳಗುತ್ತಿದ್ದವು. ಹೈದರಾಬಾದ್ ನಿಜಾಮ ಮೀರ್ ಉಸ್ಮಾನ್ ಆಲಿಖಾನ ಬಹಾದ್ದೂರನನ್ನು ತನ್ನ ಕೈಗೊಂಬೆಯಾಗಿರಿಸಿಕೊಂಡಿದ್ದ ರಜಾಕರ ನಾಯಕ ಖಾಸಿಂ ರಜ್ವಿ ಹಿಂಸೆಯನ್ನು ಪ್ರಚೋದಿಸುವ ಘೋಷಣೆಯ ಮೂಲಕ ಕೋಮುದಳ್ಳುರಿಗೆ ಕಾರಣನಾಗಿದ್ದ. ಖಾಸಿಂ ರಜ್ವಿ “”ಪ್ರತಿಯೊಬ್ಬ ಮುಸ್ಲಿಮರು ರಜಾಕರ ನಾಗಬೇಕು. ಹೈದರಾಬಾದ್ ಪ್ರಾಂತ್ಯ ಭಾರತದ ಜೊತೆ ವಿಲೀನಗೊಳ್ಳುವುದು ಅÇÉಾ ಹಜರತ್‌ನ ಅಭಿಲಾಷೆಗೆ ವಿರುದ್ಧ ವಾದುದು.
ಒಂದು ವೇಳೆ ಭಾರತ ಸರಕಾರ ಹೈದರಾ ಬಾದ್‌ನ್ನು ಪ್ರವೇಶಿಸುವ ಧೈರ್ಯ ಮಾಡಿ ದರೆ ಅದು ಕೋಟ್ಯಂತರ ಜನರ ಮೂಳೆ, ಮಾಂಸವನ್ನು ನೋಡಬೇಕಾಗುತ್ತದೆ. ಪ್ರತಿ ಯೊಬ್ಬ ರಜಾಕರನು ಒಂದು ಕೈಯಲಿ ನಿಜಾಂ ಧ್ವಜ, ಮತ್ತೂಂದು ಕೈಯಲಿ ಖಡ್ಗ ಹಿಡಿದು ಹೋರಾಡಿ ಪ್ರಾಣಾರ್ಪಣೆ ಮಾಡಬೇಕು” ಎಂದು ಕರೆ ನೀಡಿದ್ದ. ಒಂದು ಲಕ್ಷ ಅರೆ ಸೈನಿಕರ ದಂಡು ದೈತ್ಯ ಪ್ರತಿಗಾಮಿ ಶಕ್ತಿಯಾಗಿ ರೂಪುಗೊಂಡಿತ್ತು.
1947-48ರ ಅವಧಿಯಲ್ಲಿ ನಿಜಾಮನ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿತ್ತು. ಹೈದರಾಬಾದ್ ಪ್ರಾಂತ್ಯದ ಹಳ್ಳಿ-ಹಳ್ಳಿ ಗಳಲ್ಲಿ ರಜಾಕರ ಅಮಾನುಷ ಹಿಂಸಾ ಕೃತ್ಯ ತಾಂಡವವಾಡುತ್ತಿತ್ತು. ರಜಾಕರ ಪಾಳೆಗಾರಿಕೆಯಿಂದ ಹೈದರಾಬಾದ್-ಕರ್ನಾಟಕ ಪ್ರದೇಶದ ಒಂದು ಲಕ್ಷಕ್ಕೂ ಹೆಚ್ಚಾ ಜನರು ನಿರಾಶ್ರಿತರಾದರು.
ವಿಪರ್ಯಾಸವೆಂದರೆ, ನಿಜಾಮನ ಬಗ್ಗೆ ಭಾರತದ ಕೊನೆಯ ವೈಸ್‌ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಮೃದು ಧೋರಣೆ ಹೊಂದಿದ್ದರು. ಆದರೆ, ರಜಾಕರ ಮತ್ತು ನಿಜಾಮನ ವರ್ತನೆಯಿಂದ ಮೌಂಟ್ ಬ್ಯಾಟನ್‌ಗೆ ಬೇಸರವುಂಟಾಗಿತ್ತು.
ಸಂಧಾನದ ಮಾತುಕತೆ ಪ್ರಗತಿಯಲ್ಲಿ¨ªಾಗಲೇ ಲಾರ್ಡ್ ಮೌಂಟ್ ಬ್ಯಾಟನ್ ಬ್ರಿಟನ್‌ಗೆ ಹಿಂದಿರುಗಿದ್ದರು.
“ಒಕ್ಕೂಟ ಸೇರಿ ಚಳುವಳಿ’ಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು 1947ರ ಜೂನ್ 16ರಂದು ಪ್ರಥಮ ಹೈದರಾಬಾದ್ ಕಾಂಗ್ರೆಸ್ ಅಧಿವೇಶನ ನಡೆಸಲಾಯಿತು. ಈ ಸಮಾವೇಶದಲ್ಲಿ ಸ್ವಾಮಿ ರಮಾನಂದ ತೀರ್ಥರು, ಎಸ್.
ನಿಜಲಿಂಗಪ್ಪ, ಕಮಲಾದೇವಿ ಚಟೊಪಾಧ್ಯಾಯ, ಎನ್.ಜಿ, ರಂಗಾ, ಆಳವಂಡಿ ಶಿವಮೂರ್ತಿ ಸ್ವಾಮಿ, ಶಂಕರ್ ದೇವ್ ಮುಂತಾದ ಅಗ್ರಗಣ್ಯರು ಭಾಗವಹಿಸಿ ನಿಜಾಮನ ನಿರಂಕುಶತ್ವಕ್ಕೆ ಕೊನೆಗಾಣಿಸಲು ಸಂಕಲ್ಪ ಮಾಡಿದ್ದರು.
ಇತಿಹಾಸದ ಎಲ್ಲ ಕರಾಳ ಅಧ್ಯಾಯಗಳಿಗೆ ಒಂದು ಅಂತ್ಯವೆಂಬುದು ಇ¨ªೆ ಇರುತ್ತದೆ. ಹಾಗೆಯೇ ರಜಾಕರ ನಾಯಕ ಖಾಸಿಂ ರಜ್ವಿಯ ಹಾಗೂ ನಿಜಾಮನ “ಪ್ರತ್ಯೇಕ ಹೈದರಾಬಾದ್ ಪ್ರಾಂತ್ಯದ’ ಭ್ರಮೆಗೂ ಒಂದು ಕೊನೆಯಿತ್ತು.
ಸ್ವತಂತ್ರ ಭಾರತದ ಪ್ರಥಮ ಉಪ ಪ್ರಧಾನಿ ಹಾಗೂ ಗೃಹ ಸಚಿವ ಸರ್ದಾರ ವಲ್ಲಭಾಯಿ ಪಟೇಲ್ ಅವರ ಅಚಲ ನಿರ್ಧಾರದ ಮುಂದೆ ನಿಜಾಮನಿಗೆ ಬೇರೆ ಮಾರ್ಗಗಳಿರಲಿಲ್ಲ. ಪಟೇಲರಿಗೆ ನಿಜಾಮನ ಜೊತೆ ಯಾವುದೇ ರಾಜಿ-
ಸಂಧಾನದ ಬಗ್ಗೆ ಆಸಕ್ತಿ ಇರಲಿಲ್ಲ. ನಿಜಾಮನ ದ್ವಂದ್ವ ನೀತಿ- ಒಂದು ಕಡೆ ಸಂಧಾನದ ಮಾತು, ಮತ್ತೂಂದು ಕಡೆ ಹೈದರಾಬಾದ್ ಪ್ರಾಂತ್ಯಕ್ಕೆ ಪ್ರತ್ಯೇಕ
ರಾಷ್ಟ್ರದ ಸ್ಥಾನಮಾನ ನೀಡಬೇಕು ಎಂದು ವಿಶ್ವಸಂಸ್ಥೆಗೆ ದೂರು ಕೊಂಡೊಯ್ಯುವುದು- ಸರ್ದಾರ ಪಟೇಲರನ್ನು ಕೆರಳಿಸಿತ್ತು. ಸರ್ದಾರರು ನಿಜಾಮ ಭಾರತ ಒಕ್ಕೂಟದ ಜೊತೆ ಹೈದರಾಬಾದನ್ನು° ವಿಲೀನಗೊಳಿಸಬೇಕು ಇಲ್ಲವೆ ಭಾರತ ಸೇನೆಯ ನಿರ್ದಾಕ್ಷಿಣ್ಯ ದಾಳಿ ಎದುರಿಸಬೇಕು ಎಂದು ಎಚ್ಚರಿಸಿದ್ದರು.
ಅದರ ಫಲವಾಗಿ ಭಾರತ ಸರಕಾರದ ಪೊಲೀಸ್ ಆಕ್ಷನ್ ಮೂಲಕ ಹೈದರಾಬಾದ್ ಪ್ರಾಂತ್ಯದ ವಿಮೋಚನೆಯ ನಿರ್ಧಾರ ಕೈಗೊಂಡಿತು. ಪಟೇಲರು 1948ರ ಸೆಪ್ಟೆಂಬರ್ 13ರಂದು ಪೊಲೀಸ್ ಕಾರ್ಯಾಚರಣೆಗೆ ಅಂಕಿತ ಹಾಕಿದರು. ಮೇಜರ್ ಜನರಲ್ ಜೆ. ಎನ್. ಚೌಧರಿ ನೇತೃತ್ವದಲ್ಲಿ ಭಾರತೀಯ ಪಡೆಗಳು ಹನ್ನೆರಡು ದಿಕ್ಕಿನಿಂದ ಹೈದರಾಬಾದ್ ಮೇಲೆ ದಾಳಿ ಮಾಡಿದವು.
ನಿಜಾಮನಿಗೆ ಶರಣಾಗತಿ ಬಿಟ್ಟು ಬೇರೆ ಯಾವುದೇ ಉಪಾಯಗಳಿರಲಿಲ್ಲ. ಇದರ ಪರಿಣಾಮವಾಗಿ ನಿಜಾಮನು ಹೈದರಾಬಾದ್ ಪ್ರಾಂತ್ಯವನ್ನು ಭಾರತ ಒಕ್ಕೂಟದೊಂದಿಗೆ ವಿಲೀನಗೊಳಿಸುವ ಒಪ್ಪಂದಕ್ಕೆ 1948 ಸೆಪ್ಟೆಂಬರ್ 18ರಂದು ಸಹಿ ಹಾಕಿದ.
ರಜಾಕರ ನಾಯಕ ಖಾಸಿಂ ರಜ್ವಿಯನ್ನು ಬಂಧಿಸಿ ಸೆರೆಮನೆಗೆ ದೂಡಲಾಯಿತು, ಹೈದರಾಬಾದ್-ಕರ್ನಾಟಕ ಪ್ರಾಂತ್ಯವು ವಿಮೋಚನೆಗೊಂಡಿತು.
ಈ ಸುದಿನದಂದು ಕರ್ನಾಟಕ ಸರ್ಕಾರವು ಹೈದರಾಬಾದ್-ಕರ್ನಾಟಕ ಪ್ರಾಂತ್ಯವನ್ನು “ಕಲ್ಯಾಣ ಕರ್ನಾಟಕ’ ಎಂದು ಮರು ನಾಮಕರಣ ಮಾಡಿದೆ.
ನಮ್ಮ ಸರ್ಕಾರ 71 ವರ್ಷಗಳ ಹಳೆಯ ಹೆಸರನ್ನು ಮರು ನಾಮಕರಣದೊಂದಿಗೆ ಅಂತ್ಯಗೊಳಿಸುತ್ತಿದೆ. ಹೊಸ ನಾಮಕರಣವು ಈ ಭಾಗಕ್ಕೆ ಅನ್ವರ್ಥಕವಾಗಿರುವುದಕ್ಕೆ ಅತೀವ ಸಂತಸತಂದಿದೆ.
ಕಲ್ಯಾಣ ಕರ್ನಾಟಕ ಹೆಸರು ನಮ್ಮ ಶರಣ ಪರಂಪರೆಯ ಇತಿಹಾಸವನ್ನು
ಬಿಂಬಿಸುವುದರ ಜೊತೆಗೆ ಈ ಪ್ರಾಂತ್ಯದ ಅಭಿವೃದ್ಧಿಗೆ ಹೊಸ ಆಯಾಮ ನೀಡಲೆಂದು ಇಚ್ಚಿಸುತ್ತೇನೆ.
ಫ್ರಾನ್ಸ್ ದೇಶವು 18ನೇ ಶತಮಾನದಲ್ಲಿ ರಾಜಕೀಯ ಮತ್ತು ಸಾಮಾಜಿಕ ಕ್ರಾಂತಿಯಿಂದ ಇತಿಹಾಸ ಸೃಷ್ಟಿಸಿರಬಹುದು. ಆದರೆ ನಮ್ಮ ಶರಣ
ಸಂಸ್ಕೃತಿಯು 12ನೇ ಶತಮಾನದಲ್ಲಿಯೇ ಭಕ್ತಿ ಸಾಹಿತ್ಯ, ಸಾಮಾಜಿಕ ನ್ಯಾಯ ಮತ್ತು ಮಹಿಳಾ ಸಮಾನತೆಯ ಅದ್ಭುತ ಚಿಂತನೆಗೆ ಮುನ್ನುಡಿ ಬರೆದಿ¨ªಾರೆ. ಕಳಚೂರಿ ಬಿಜ್ಜಳನ ಮುಖ್ಯಮಂತ್ರಿಯಗಿದ್ದ ಬಸವಣ್ಣ ವಿಶ್ವಗುರುವಾಗಿ ತನ್ನ ಅನುಭವ ಮಂಟಪದ ಮೂಲಕ ಸಮಾನ ಮನಸ್ಕ ಚಿಂತಕರನ್ನು ಕಲ್ಯಾಣ ಪ್ರಾಂತ್ಯಕ್ಕೆ ಬರ ಮಾಡಿಕೊಂಡರು. ಆ ಮೂಲಕ ಕಲ್ಯಾಣ ಪ್ರಾಂತ್ಯವು ವೈಚಾರಿಕ ಕ್ರಾಂತಿಯ ಕೇಂದ್ರವಾಯಿತು. ಈ ಪ್ರಾಂತ್ಯವು ವಚನಕಾರ್ತಿ ಅಕ್ಕಮಹಾದೇವಿ, ಯೋಗಿ ಅಲ್ಲಮ ಪ್ರಭು, ಶರಣ ಚನ್ನಬಸವಣ್ಣ ಹಾಗೂ ಇತರ ಶಿವ-ಶರಣರ ಸಾಹಿತ್ಯ ಕೃಷಿ ಮತ್ತು ಸಾಮಾಜಿಕ ಚಿಂತನೆಗೆ ಪ್ರೇರಣೆಯಾಗಿದೆ.
ಇಂತಹ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದ ಪ್ರಾಂತ್ಯವು ನಿಜಾಮನ ಶೋಷಣೆಗೆ ಗುರಿಯಾಗಿದ್ದು ಈ ನಾಡಿನ ದುರಾದೃಷ್ಟ, ಐತಿಹಾಸಿಕ ದುರಂತ. ಈ ಪ್ರಾಂತ್ಯದ ಹೊಸ ಹೆಸರಿನಲ್ಲಿರುವ ಕಲ್ಯಾಣ ಎಂಬ ಪದವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಧ್ಯೇಯವನ್ನು ಎತ್ತಿ ಹಿಡಿಯುತ್ತದೆ. ಅಷ್ಟೆ ಅಲ್ಲದೆ, ಇದು ಶರಣ ಸಂಸ್ಕೃತಿಯ ಇತಿಹಾಸವನ್ನು ನೆನೆಯುವಂತೆ ಮಾಡುತ್ತದೆ. “ಕಲ್ಯಾಣ ಕರ್ನಾಟಕ’ ಎಂಬ ಹೊಸ ಹೆಸರು ಈ ನಾಡಿನ ಜನ ಮಾನಸದಲ್ಲಿ ಚಿರಸ್ಥಾಯಿಯಾಗಿರುತ್ತೆಂದು ಆಶಿಸುತ್ತೇನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
MUST WATCH
ಹೊಸ ಸೇರ್ಪಡೆ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.