ಕುಮಾರ ಪರ್ವತದಲ್ಲಿ ನಾಪತ್ತೆಯಾಗಿದ್ದ ಯುವಕ ಸುರಕ್ಷಿತವಾಗಿ ಪತ್ತೆ
Team Udayavani, Sep 17, 2019, 12:37 PM IST
ಸುಬ್ರಹ್ಮಣ್ಯ: ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಕುಮಾರ ಪರ್ವತ ಚಾರಣಕ್ಕೆ ಶನಿವಾರ ತೆರಳಿದ ತಂಡದ ಪೈಕಿ ಸಂಗಡಿಗರಿಂದ ಬೇರ್ಪಟ್ಟು ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಗಾಯತ್ರಿ ನಗರದ ನಿವಾಸಿ ಸಂತೋಷ್ ಮಂಗಳವಾರ ಸುರಕ್ಷಿತವಾಗಿ ಪತ್ತೆಯಾಗಿದ್ದಾನೆ.
ಸಂತೋಷ್ ದೇವರಗದ್ದೆಯ ಒಂದು ಮನೆಗೆ ತಲುಪಿದ್ದಾನೆ. ನಾಪತ್ತೆಯಾದ ಬಳಿಕ ಕಾಡಿನಲ್ಲಿ ಮರೆಯಾದ ಆತ ದೇಗುಲಕ್ಕೆ ಕಾಡಿನಿಂದ ನೀರು ಸರಬರಾಜಿಗೆ ಅಳವಡಿಸಿದ್ದ ಪೈಪುಗಳ ಮೂಲಕವೆ ಸಾಗಿ ಬಂದು ದೇವರಗದ್ದೆ ತಲುಪಿದ್ದಾನೆ.
ಶುಕ್ರವಾರ ಕುಕ್ಕೆಯಿಂದ ಚಾರಣಕ್ಕೆ ತೆರಳಿದ್ದ 12 ಮಂದಿ ತಂಡ ರವಿವಾರ ಹಿಂತಿರುಗುತ್ತಿದ್ದ ವೇಳೆ ಸಂತೋಷ್ ತಪ್ಪಿಸಿಕೊಂಡಿದ್ದ. ತಂಡದಲ್ಲಿದ್ದ 5 ಮಂದಿ ಎದುರಿಗೆ ಇದ್ದು ಮಧ್ಯದಲ್ಲಿ ಸಂತೋಷ್, ಅವರ ಹಿಂದಿನಿಂದ ಆರು ಜನರು ಬರುತ್ತಿದ್ದರು. ಈ ನಡುವೆ ಕೇವಲ ಹತ್ತು ನಿಮಿಷದ ಅಂತರದಲ್ಲಿ ಸಂತೋಷ್ ಕಾಣೆಯಾಗಿದ್ದ.
ದೇವರಗದ್ದೆ ಮನೆಗೆ ಹಿಂತರುಗಿದ ನಂತರ ʼಉದಯವಾಣಿʼಯೊಂದಿಗೆ ಮಾತನಾಡಿದ ಸಂತೋಷ್, “ದಾರಿ ತಪ್ಪಿದ್ದರಿಂದ ನಾನು ಎರಡು ರಾತ್ರಿ ಕಾಡಿನಲ್ಲೇ ಕಳೆದೆ. ಬಂಡೆಕಲ್ಲುಗಲ ಮೇಲೆ ಮಲಗಿದ್ದೆ. ತೊರೆಯ ನೀರನ್ನು ಕುಡಿದು ಹಸಿವು ನೀಗಿಸಿಕೊಂಡಿದ್ದೆ. ಯಾವುದೇ ಕಾಡು ಪ್ರಾಣಿಗಳು ಎದುರಾಗಲಿಲ್ಲ” ಎಂದು ಹೇಳಿಕೊಂಡರು.
ದಾರಿ ಹುಡುಕುತ್ತಾ ಕಾಡಿನಲ್ಲಿ ಅಲೆದಾಡುವಾಗ ಪೈಪ್ ಪೈನ್ ಕಾಣಿಸಿತು. ಇದು ಯಾವುದಾದರು ಒಂದು ಊರಿಗೆ ಖಂಡಿತ ಸೇರುವುದೆಂಬ ನಂಬಿಕೆಯಿಂದ ಅದೇ ಪೈಪ್ ಲೈನ್ ಅನ್ನು ಅನುಸರಿಸುತ್ತಾ ಬಂದೆ ಎಂದು ಸಂತೋಷ್ ಕಾಡಿನಿಂದ ಹೊರಬಂದ ರೀತಿಯನ್ನು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.