“ರಾಮಾರ್ಜುನ’ನಿಗೆ ಪುನೀತ್ ಗಾನ
ಅನೀಶ್ ಮೂರು ಚಿತ್ರಗಳಿಗೆ ಹ್ಯಾಟ್ರಿಕ್ ಹಾಡು
Team Udayavani, Sep 18, 2019, 3:01 AM IST
ಅನೀಶ್ ತೇಜೇಶ್ವರ್ ಅಭಿನಯದ “ರಾಮಾರ್ಜುನ’ ಚಿತ್ರದ ಮಾತಿನ ಭಾಗ ಮುಗಿದಿದ್ದು, ಇನ್ನೇನು ಹಾಡಿನ ಚಿತ್ರೀಕರಣ ಪೂರ್ಣಗೊಂಡರೆ ಚಿತ್ರಕ್ಕೆ ಕುಂಬಳಕಾಯಿ. ಈಗ ಈ ಚಿತ್ರದ ಹೊಸ ಸುದ್ದಿಯೆಂದರೆ, ಚಿತ್ರದ ಹಾಡೊಂದಕ್ಕೆ ಪುನೀತ್‌ರಾಜಕುಮಾರ್ ಧ್ವನಿಯಾಗಿದ್ದಾರೆ. ಹೌದು, ಅನೀಶ್ ಅವರ ಹಿಂದಿನ “ಅಕಿರ’ ಹಾಗು ವಾಸು ನಾನ್ ಪಕ್ಕಾ ಕಮರ್ಷಿಯಲ್’ ಈ ಎರಡು ಚಿತ್ರಗಳಲ್ಲೂ ಹಾಡಿದ್ದ ಪುನೀತ್‌ರಾಜಕುಮಾರ್, ಈಗ “ರಾಮಾರ್ಜುನ’ ಚಿತ್ರಕ್ಕೂ ಹಾಡುವ ಮೂಲಕ ಹ್ಯಾಟ್ರಿಕ್ ಮಾಡಿದ್ದಾರೆ.
ಅಂದಹಾಗೆ, “ಅಕಿರ’ ನಿರ್ದೇಶಕ ನವೀನ್‌ರೆಡ್ಡಿ ಅವರು ಬರೆದಿರುವ “ಮನಸೇ ಚೂರು ದಾರಿಯನ್ನುತೋರು ನೀನು…’ ಹಾಡಿಗೆ ಪುನೀತ್ ರಾಜಕುಮಾರ್ ಅವರು ಇತ್ತೀಚೆಗೆ ಆಕಾಶ್ ಆಡಿಯೋದಲ್ಲಿ ಧ್ವನಿಯಾಗುವ ಮೂಲಕ ಚಿತ್ರತಂಡಕ್ಕೂ ಶುಭಹಾರೈಸಿದ್ದಾರೆ. ಈ ಕುರಿತು ಹೇಳಿಕೊಳ್ಳುವ ನಿರ್ದೇಶಕ ಕಮ್ ನಟ ಅನೀಶ್, “ನನ್ನ ಹಿಂದಿನ ಎರಡು ಚಿತ್ರಗಳಿಗೂ ಹಾಡಿದ್ದ ಪುನೀತ್ ಸರ್, ಈಗ ಮೂರನೇ ಚಿತ್ರಕ್ಕೂ ಹಾಡಿದ್ದಾರೆ. ಹಾಡು ಚೆನ್ನಾಗಿ ಮೂಡಿಬಂದಿದೆ.
“ಅಕಿರ’ ಮತ್ತು “ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರಗಳಲ್ಲಿ ಹಾಡಿದ್ದ ಹಾಡು ಸೂಪರ್ ಹಿಟ್ ಆಗಿತ್ತು. ಹಾಗಾಗಿ ಅಪ್ಪು ಸರ್ ಅಭಿಮಾನಿಗಳು ಅಪ್ಪು ಅವರ ಹಾಡು ಇದೆಯಾ ಅಂತಾನೇ ಕೇಳುತ್ತಿದ್ದರೂ, ನನಗೂ ಹಾಡು ಹಾಡಿಸುವ ಐಡಿಯಾ ಇತ್ತು. ಅದಕ್ಕೆ ತಕ್ಕ ಸಾಹಿತ್ಯ ಸಿಕ್ಕಿತ್ತು ಪುನೀತ್ ಸರ್ ಅವರ ಬಳಿ ಹಾಡಿಸಿದ್ದೇನೆ. ಅಕ್ಟೋಬರ್ ಮೊದಲ ವಾರ ಅಪ್ಪು ಸರ್ ಹಾಡಿರುವ ಹಾಡು ಬಿಡುಗಡೆ ಮಾಡುವ ತಯಾರಿಯೂ ನಡೆಯುತ್ತಿದೆ.
ಸಾಮಾನ್ಯವಾಗಿ ಅಪ್ಪು ಸರ್ ಕಡೆಯಿಂದ ಎಲ್ಲರೂ ಇಂಟ್ರಡಕ್ಷನ್ ಹಾಡು ಹಾಡಿಸುತ್ತಾರೆ. ಆದರೆ, ನಾನು ರೊಮ್ಯಾಂಟಿಕ್ ಹಾಡು ಹಾಡಿಸಿದ್ದೇನೆ. ಹಿಂದಿನ ಚಿತ್ರದಲ್ಲೂ ಎರಡು ರೊಮ್ಯಾಂಟಿಕ್ ಸಾಂಗ್ ಹಾಡಿದ್ದರು. ಇಲ್ಲೂ ಅದು ಮುಂದುವರೆದಿದೆ. ಹಾಡು ಹೊರಬಂದಾಗ, ಎಲ್ಲರಿಗೂ ಇಷ್ಟವಾಗಲಿದೆ’ ಎನ್ನುತ್ತಾರೆ ಅನೀಶ್. ಚಿತ್ರದಲ್ಲಿ ಅನೀಶ್‌ಗೆ ನಿಶ್ವಿಕಾ ನಾಯಕಿಯಾಗಿದ್ದಾರೆ. ಉಳಿದಂತೆ ರಂಗಾಯಣ ರಘು, ಶರತ್‌ಲೋಹಿತಾಶ್ವ, ಹರೀಶ್ ರಾಜ್, ಅರುಣ ಬಾಲರಾಜ್, ಸ್ವಾತಿ, ಗಿರೀಶ್ ಶಿವಣ್ಣ, ದೀಪಕ್ ಶೆಟ್ಟಿ ಇತರರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.