ಗಡ್ಡದ ಹುಡುಗಿ
Team Udayavani, Sep 18, 2019, 5:01 AM IST
ಹರ್‌ನಾಮ್ ಕೌರ್, ಭಾರತೀಯ ಮೂಲದ ಇಂಗ್ಲೆಂಡ್ ನಿವಾಸಿ. 29 ವರ್ಷದ ಈ ಯುವತಿಯ ಹೆಸರು 2015ರಲ್ಲಿ ಗಿನ್ನೆಸ್ ಪುಸ್ತಕಕ್ಕೆ ಸೇರಿತು. “ಅತಿ ಉದ್ದ ಗಡ್ಡ ಹೊಂದಿರುವ ಜಗತ್ತಿನ ಕಿರಿಯ ಮಹಿಳೆ’ ಎಂಬ ದಾಖಲೆ ಅವಳ ಹೆಸರಿನಲ್ಲಿದೆ. “ಏನಂದ್ರೀ? ಗಡ್ಡ ಇರುವ ಹುಡುಗೀನಾ?’ ಅಂತ ಅಚ್ಚರಿಯಾಗಬೇಡಿ. ಹೌದು, ಗಡ್ಡವೇ!
ಹರ್‌ನಾಮ್‌ಗೆ 11 ವರ್ಷವಾಗಿದ್ದಾಗ ಮುಖದ ಮೇಲೆ ಕೂದಲು ಬೆಳೆಯತೊಡಗಿತು. ಆಗ ಎಲ್ಲ ಹುಡುಗಿಯರಂತೆ ಆಕೆ ಕೂಡಾ ಹೆದರಿಕೊಂಡಳು. ಯಾರಿಗೂ ಗೊತ್ತಾಗಬಾರದೆಂದು ಕದ್ದು ಮುಚ್ಚಿ ಶೇವ್ ಮಾಡಿದಳು, ವ್ಯಾಕ್ಸಿಂಗ್‌ನ ಮೊರೆ ಹೋದಳು. ಆದರೆ, ಕೈ,ಕಾಲು, ಮುಖ, ಎದೆ ಮೇಲೆಲ್ಲಾ ರೋಮಗಳು ಬೆಳೆಯತೊಡಗಿದಾಗ ಅದನ್ನು ಮುಚ್ಚಿಡುವುದು ಆಕೆಗೆ ಸಾಧ್ಯವಾಗಲಿಲ್ಲ.ಆ ಸಂದರ್ಭದಲ್ಲಿ ಹರ್‌ನಾಮ್ ಅನುಭವಿಸಿದ ಯಾತನೆ, ಅವಮಾನ ಅಷ್ಟಿಷ್ಟಲ್ಲ. ಕೊನೆಗೆ ಡಾಕ್ಟರ್ ಬಳಿ ಹೋದಾಗ ಗೊತ್ತಾಯ್ತು ಆಕೆಗೆ ಪಿಸಿಓಎಸ್ ಸಮಸ್ಯೆ ಇದೆ ಎಂದು. ವಾಸ್ತವವನ್ನು ಒಪ್ಪಿಕೊಂಡ ಹರ್‌ನಾಮ್ ಆ ದಿನ ಒಂದು ನಿರ್ಧಾರಕ್ಕೆ ಬಂದಳು. ಅದೇನೆಂದರೆ, ಇನ್ಮುಂದೆ ಶೇವ್ ಮಾಡುವುದಿಲ್ಲ, ಗಂಡಸರಂತೆ ಉದ್ದ ಗಡ್ಡ ಬಿಡುತ್ತೇನೆ ಎಂದು!
“ಸಮಾಜದ ಪ್ರಕಾರ ಹೆಣ್ಣಿನ ಸೌಂದರ್ಯದ ಮಾನದಂಡ ಏನೇ ಇರಲಿ. ನಾನು ನನ್ನ ಮೀಸೆ, ಗಡ್ಡವನ್ನು ಪ್ರೀತಿಸುತ್ತೇನೆ. ಆ ಕುರಿತು ಖಂಡಿತಾ ನನಗೆ ಕೀಳರಿಮೆ ಇಲ್ಲ. ಯಾವ ಕಾರಣದಿಂದ ಜನ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರೋ, ಅದೇ ಕಾರಣಕ್ಕೆ ಗಿನ್ನೆಸ್ ದಾಖಲೆ ಮಾಡಿದ್ದೇನೆ ಎಂಬ ಹೆಮ್ಮೆಯಿಂದೆ’ ಅಂತಾಳೆ ಹರ್‌ನಾಮ್ ಕೌರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.