ಮಾನವ ರಹಿತ ಡ್ರೋನ್ ಮಾದರಿ ವಿಮಾನ ಪತನ
Team Udayavani, Sep 18, 2019, 5:38 AM IST
ನಾಯಕನಹಟ್ಟಿ (ಚಿತ್ರದುರ್ಗ): ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸುತ್ತಿರುವ ಮಾನವ ರಹಿತ ಡ್ರೋನ್ ಮಾದರಿ ವಿಮಾನ ತಾಂತ್ರಿಕ ದೋಷದಿಂದ ನೆಲಕ್ಕಪ್ಪಳಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜೋಡಿಚಿಕ್ಕೇನಹಳ್ಳಿಯಲ್ಲಿ ನಡೆದಿದೆ.
ಮಂಗಳವಾರ ಬೆಳಗ್ಗೆ 6.30ರ ಸುಮಾರಿಗೆ ಡಿಆರ್‌ಡಿಒ ರನ್‌ವೇಯಿಂದ ಪರೀûಾರ್ಥ ಹಾರಾಟ ನಡೆಸುತ್ತಿದ್ದ ವಿಮಾನವು 15 ನಿಮಿಷಗಳ ಅಂತರದಲ್ಲೇ ಏರೋನಾಟಿಕಲ್ ಟೆಸ್ಟ್ ರೇಂಜ್‌ನ ರಾಡಾರ್‌ನಿಂದ ಸಂಪರ್ಕ ಕಡಿದುಕೊಂಡು ನೆಲಕ್ಕೆ ಅಪ್ಪಳಿಸಿತು.
ತಪಸ್-4 ಎಡಿಇ 19 ಎಂದು ಬರೆಯ ಲಾಗಿರುವ ವಿಮಾನ ಚಳ್ಳಕೆರೆ ತಾಲೂಕಿನ ಕುದಾಪುರ ಡಿಆರ್‌ಡಿಒ ಕೇಂದ್ರದಿಂದ ಹೊರಟು ಹಾಸನದ ವಾಯುನೆಲೆಯವರೆಗೆ ಹೋಗಿ ಬರಬೇಕಿತ್ತು ಎನ್ನಲಾಗಿದ್ದು, ಡಿಆರ್‌ಡಿಒ ಕೇಂದ್ರದಿಂದ 17 ಕಿ.ಮೀ. ದೂರದಲ್ಲೇ ಪತನವಾಗಿದೆ.
ಗಿರಕಿ ಹೊಡೆದು ಬಿತ್ತು
ನಸುಕಿನ ಜಾವ ಭಾರೀ ಸದ್ದಿನೊಂದಿಗೆ ಹಾರಿ ಬಂದ ಡ್ರೋನ್ ಮಾದರಿಯ ರುಸ್ತುಂ 2 ವಿಮಾನವನ್ನು ಜೋಡಿಚಿಕ್ಕೇನಹಳ್ಳಿ ಗ್ರಾಮಸ್ಥರು ಕಂಡರು. ಆಗಸದಲ್ಲೇ ಗಿರಕಿ ಹೊಡೆ ಯುವು ದನ್ನು ನೋಡಿ ತತ್‌ಕ್ಷಣ ವೀಡಿಯೋ ಕೂಡ ಮಾಡಿದ್ದಾರೆ. ನೋಡ ನೋಡು ತ್ತಿದ್ದಂತೆ ವಿಮಾನ ಭಾರೀ ಸದ್ದಿ ನೊಂದಿಗೆ ಬಿದ್ದಿದೆ. ಈ ವೇಳೆ ಆತಂಕಗೊಂಡ ನೂರಾರು ಗ್ರಾಮಸ್ಥರು ವಿಮಾನದ ಹತ್ತಿರ ಬಂದು ಅದರಲ್ಲಿ ಯಾರಾದರೂ ಇದ್ದಾರೆಯೇ ಎಂದು ಹುಡುಕಾಡಿದರು. ಬರೀ ವೈರ್‌ಗಳು, ಯಂತ್ರಗಳನ್ನಷ್ಟೇ ಕಂಡಾಗ ಸಮಾ ಧಾನಗೊಂಡರು.
ಸೆಲ್ಫಿ ತೆಗೆದ ಜನ
ಮೊದಲ ಬಾರಿ ಇಂಥದ್ದೊಂದು ವಿಮಾನವನ್ನು ಕಂಡ ಹಳ್ಳಿಯ ಜನರು ವಿಮಾನದ ಮೇಲೆ ಹತ್ತಿ ಓಡಾಡಿದರು. ಸೆಲ್ಫಿ ತೆಗೆದುಕೊಂಡು ವೀಡಿಯೋ ಮಾಡಿದರು. ಚಿತ್ರದುರ್ಗ ಎಸ್ಪಿ ಡಾ| ಕೆ. ಅರುಣ್ ಹಾಗೂ ಚಳ್ಳಕೆರೆ ಪೊಲೀಸರು ಘಟನ ಸ್ಥಳಕ್ಕೆ ದೌಡಾಯಿಸಿ ಅಲ್ಲಿದ್ದ ಜನರನ್ನು ಚದುರಿಸಿದರು.
ಲಾರಿಯಲ್ಲಿ ಅವಶೇಷ
ವಿಮಾನ ಪತನಗೊಂಡ ಜಾಗ ಹುಡುಕಿಕೊಂಡು ಸ್ಥಳಕ್ಕೆ ಬಂದ ಡಿಆರ್‌ಡಿಒ ಅಧಿಕಾರಿಗಳು, ಎಂಜಿನಿಯರ್‌ಗಳು ಹಾಗೂ ಮಿಲಿಟರಿಯವರು ಇಡೀ ಪ್ರದೇಶ ಸುತ್ತುವರಿದು ಅಲ್ಲಿದ್ದ ಜನರಿಗೆ ಪ್ರವೇಶ ನಿರ್ಬಂಧಿ ಸಿದರು. ಕೆಲವೇ ಹೊತ್ತಿನಲ್ಲಿ ಇಡೀ ವಿಮಾನವನ್ನು ಬಿಚ್ಚಿ ಅದರ ಅವಶೇಷಗಳನ್ನು ಎರಡು ಲಾರಿಗಳಲ್ಲಿ ಡಿಆರ್‌ಡಿಒ ಕೇಂದ್ರಕ್ಕೆ ಸಾಗಿಸಿದರು.
ಮಾಹಿತಿ ನೀಡಲಿಲ್ಲ
ಪತನವಾದ ವಿಮಾನ ಕುರಿತು ಡಿಆರ್‌ಡಿಒ ಅಧಿಕಾರಿಗಳನ್ನು ಪ್ರಶ್ನಿಸಿದಾಗ ವಿಷಮ ವಾತಾವರಣ ಕಾರಣಕ್ಕೆ ಸಂಪರ್ಕ ಕಳೆದುಕೊಂಡು ಪತನವಾಗಿದೆ ಎಂದಷ್ಟೇ ಹೇಳಿದ ಅವರು, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.