ಕಾಯಕ-ದಾಸೋಹ ಜಗತ್ತಿಗೆ ನೀಡಿದ್ದು ಬಸವಣ್ಣ
ಮಠಗಳಿಗೆ ಒಂದು ವರ್ಷ ಅನುದಾನ ಬೇಡ •ಮಧ್ಯಂತರ ಚುನಾವಣೆ ಬರದಿರಲು ಹಾರೈಕೆ
Team Udayavani, Sep 18, 2019, 5:58 PM IST
ಕಲಬುರಗಿ: ಶಹಾಬಜಾರದ ಸುಲಫಲ ಮಠದಲ್ಲಿ ಬಸವ ಭವನವನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.
ಕಲಬುರಗಿ: ಕಾಯಕ ಹಾಗೂ ದಾಸೋಹವನ್ನು ಜಗತ್ತಿಗೆ ನೀಡಿದವರು ಬಸವಣ್ಣ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಶಹಾಬಜಾರದ ಸುಲಫಲ ಮಠದಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿತವಾದ ಸುಸಜ್ಜಿತ ಬಸವ ಭವನ ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಶರಣರು ವಚನ ಚಳವಳಿ ಮೂಲಕ ಸಮಾನತೆ ಅಡಿಗಲ್ಲು ಮೇಲೆ ಸಮ ಸಮಾಜ ನಿರ್ಮಿಸಿದವರು. ಶುದ್ಧ ಕನ್ನಡ ಧರ್ಮದ ತಳಹದಿ ಮೇಲೆ ಆತ್ಮಾಭಿಮಾನದ ಜೀವನ ತೋರಿಸಿದವರು ಎಂದು ಬಣ್ಣಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಡಾ| ಡಿ.ಎಂ. ನಂಜುಂಡಪ್ಪ ಉನ್ನತ ಅಧ್ಯಯನ ವರದಿ ಅನುಷ್ಠಾನಕ್ಕೆ ಚಿಂತನೆ ಮಾಡಲಾಗುವುದು. ರಾಜ್ಯದ 23 ತಾಲೂಕಿನಲ್ಲಿ ಭೀಕರ ನೆರೆ ಹಾವಳಿ ಕಂಡುಬಂದಿದೆ. ಇದರಿಂದಾಗಿ 35ರಿಂದ 40 ಸಾವಿರ ಕೋಟಿ ರೂ.ನಷ್ಟು ಆಸ್ತಿ, ಬೆಳೆ ಹಾನಿಗೀಡಾಗಿದೆ. ನೆರೆ-ಬರ ಎರಡೂ ಸಮರ್ಥವಾಗಿ ಎದುರಿಸಲಾಗುವುದು. ಮಠಮಾನ್ಯಗಳು ಸಿಎಂ ಪರಿಹಾರ ನಿಧಿಗೆ ಉದಾರವಾಗಿ ಸಹಾಯ ಸಲ್ಲಿಸುತ್ತಿದ್ದಾರೆ. ಇದು ಸಾಮಾಜಿಕ ಕಾಳಜಿ ನಿರೂಪಿಸುತ್ತದೆ ಎಂದು ಸಿಎಂ ಹೇಳಿದರು.
ಸುಲಫಲ ಮಠದ ಮಹಾಂತ ಶಿವಾಚಾರ್ಯರು ಮಾತನಾಡಿ, ರಾಜ್ಯದಲ್ಲಿ ಜನರು ನೆರೆ ಸಂಕಷ್ಟದಿಂದಿರುವಾಗ ಒಂದು ವರ್ಷ ಮಠ-ಮಾನ್ಯಗಳಿಗೆ ಅನುದಾನ ಕೊಡಬೇಡಿ. ಮುಂದೆ ಧಾರಾಳವಾಗಿ ನೀಡಿ. ಬಿಎಸ್‌ವೈ ನೇತೃತ್ವದ ಸರ್ಕಾರ ಸುಭದ್ರವಾಗಿರಲಿ, ಈಗಿರುವ ಅವಧಿಯನ್ನು ಪೂರೈಸಲಿ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗಿದರಲಿ ಎಂದು ಆಶೀರ್ವಚನ ನೀಡಿದರು. ಮುಂದುವರಿದು ಮಾತನಾಡಿದ ಶ್ರೀಗಳು, ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ತಮ್ಮದೆ ಕೊಡುಗೆ ನೀಡಿರುವ, ತ್ರಿವಿಧ ದಾಸೋಹಿಗಳಾದ ಡಾ| ಶರಣಬಸಪ್ಪ ಅಪ್ಪ ಸೇವೆ ಗುರುತಿಸಿ ರಾಜ್ಯ ಸರ್ಕಾರ ಕರ್ನಾಟಕ ರತ್ನ ನೀಡಬೇಕು. ಜತೆಗೆ ಕೇಂದ್ರದ ಮೇಲೆ ಒತ್ತಡ ಹೇರಿ ಪದ್ಮವಿಭೂಷಣ ಪ್ರಶಸ್ತಿ ದೊರಕಿಸಿ ಕೊಡಬೇಕೆಂದು ಆಗ್ರಹಿಸಿದರು.
ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೀಠಾಧಿಪತಿ, ಶರಣಬಸವ ವಿವಿ ಕುಲಾಪತಿ ಪೂಜ್ಯ ಡಾ| ಶರಣಬಸಪ್ಪ ಅಪ್ಪ ಆಶೀವರ್ಚನ ನೀಡಿದರು. ಗದಗ-ಡಂಬಳದ ಜಗದ್ಗುರು ತೋಂಟದಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಸಚಿವ ಜೆ.ಸಿ.ಮಾಧುಸ್ವಾಮಿ, ಚವದಾಪುರಿ ಹಿರೇಮಠದ ರೇವಣಸಿದ್ಧ ಶಿವಾಚಾರ್ಯರು, ಬಸವ ಭವನದ ದಾಸೋಹಿ ಎಸ್. ಬಸವರಾಜ, ಸಂಸದ ಡಾ| ಉಮೇಶ ಜಾಧವ, ಶಾಸಕರಾದ ದತ್ತಾತ್ರೇಯ ಸಿ.ಪಾಟೀಲ ರೇವೂರ್, ಎಂ.ವೈ. ಪಾಟೀಲ, ಬಸವರಾಜ ಮತ್ತಿಮಡು, ಡಾ| ಆವಿನಾಶ ಜಾಧವ, ಮೇಲ್ಮನೆ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಎನ್. ರವಿಕುಮಾರ, ಬಿ.ಜಿ.ಪಾಟೀಲ, ಮಾಜಿ ಸಚಿವರಾದ ಬಾಬುರಾವ ಚಿಂಚನಸೂರ, ಡಾ| ಎ.ಬಿ.ಮಾಲಕರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ, ಮಾಜಿ ಎಂಎಲ್ಸಿ ಶಶೀಲ ಜಿ. ನಮೋಶಿ, ಚಂದು ಪಾಟೀಲ ಹಾಗೂ ಇನ್ನಿತರರಿದ್ದರು. ಸೊನ್ನದ ಡಾ| ಶಿವಾನಂದ ಸ್ವಾಮೀಜಿ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.