ಅಬ್ಬಬ್ಬಾ.. ಈ ಮೀನಿಗೆ ಡೈನೋಸಾರ್ ಕಣ್ಣು!
ನಾರ್ವೆ ಸಮುದ್ರ ತೀರದಲ್ಲಿ ವಿಚಿತ್ರ ಮೀನು
Team Udayavani, Sep 18, 2019, 8:00 PM IST
ಓಸ್ಲೋ: ನೋಡಲು ಅದು ಸಾಮಾನ್ಯ ಸಮುದ್ರ ಮೀನು. ಆದರೆ ಕಣ್ಣು ಮಾತ್ರ ಅಬ್ಬಬ್ಬಾ ಎನ್ನುವಷ್ಟು ದೊಡ್ಡ. ಇಷ್ಟೊಂದು ದೊಡ್ಡ ಕಣ್ಣಿನ ಮೀನು ಸಿಕ್ಕಿದ್ದು ದೂರದ ನಾರ್ವೆಯ ಸಮುದ್ರ ತೀರದಲ್ಲಿ. ಕಣ್ಣಿನ ಕಾರಣಕ್ಕೇ ಈ ಮೀನು ಭಾರೀ ಸುದ್ದಿ ಮಾಡಿದೆ.
ಮೀನುಗಾರಿಕೆ ಕಂಪೆನಿಯ ಗೈಡ್ ಆಗಿರುವ ಆಸ್ಕರ್ ಲುಂಧಲ್ ಎಂಬವರು ಈ ಮೀನನ್ನು ಹಿಡಿದಿದ್ದಾರೆ. ಗಾಳ ಹಾಕಿದ್ದಾಗ ದೊಡ್ಡದೇನಾದರೂ ಸಿಗಬಹುದು ಎಂದುಕೊಂಡಿದ್ದೆ ಆದರೆ ಅದರ ಕಣ್ಣು ನೋಡಿ ಒಮ್ಮೆ ಗಾಬರಿಯಾಯಿತು. ದೊಡ್ಡ ಮೀನು ಸಿಕ್ಕಿಹಾಕಿಕೊಂಡಿತೇ ಎಂದು ಹೆದರಿದ್ದೆ ಎಂದು ಹೇಳಿದ್ದಾರೆ. ಅಂದಹಾಗೆ ಇದು ರ್ಯಾಟ್‌ಫಿಶ್ ಜಾತಿಯ ಮೀನು. ಸುಮಾರು 3 ಕೋಟಿ ವರ್ಷಗಳ ಹಿಂದಿನ ಶಾರ್ಕ್ ಜಾತಿಗೆ ಸೇರಿದ ಮೀನು ಇದಾಗಿದ್ದು ಅತ್ಯಂತ ಅಪರೂಪ ಆಳ ಸಮುದ್ರದಲ್ಲಿ ಇವುಗಳು ಇರುತ್ತವಂತೆ. ಕಣ್ಣಿಗೆ ಕಾಣುವುದು ಅಪರೂಪದಲ್ಲಿ ಅಪರೂಪ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.