ಓಂ ಕೈಯಲ್ಲಿ 786
ಮತ್ತೊಂದ್ ಸಿನ್ಮಾಗೆ ರೆಡಿ
Team Udayavani, Sep 19, 2019, 3:01 AM IST
ಓಂ ಪ್ರಕಾಶ್‌ರಾವ್ ಹಾಗೇನೆ. ಸದಾ ಒಂದಿಲ್ಲೊಂದು ಕೆಲಸದಲ್ಲಿ ಬಿಝಿಯಾಗಿರುತ್ತಾರೆ. ಅದರಲ್ಲೂ ಸಿನಿಮಾ ವಿಷಯಕ್ಕೆ ಬಂದರಂತೂ, ಸದ್ದಿಲ್ಲದೆಯೇ ಒಂದರ ಮೇಲೊಂದು ಸಿನಿಮಾ ಮಾಡುತ್ತಲೇ ಇರುತ್ತಾರೆ. ಹಾಗೆಯೇ ಒಂದಷ್ಟು ಸಿನಿಮಾಗಳನ್ನೂ ಸಹ ಒಂದಾದ ಮೇಲೊಂದರಂತೆ ಅನೌನ್ಸ್ ಮಾಡುತ್ತಲೇ ಇರುತ್ತಾರೆ. ಒಮ್ಮೊಮ್ಮೆ ಓಂ ಪ್ರಕಾಶ್‌ರಾವ್ ಯಾವ ಚಿತ್ರ ಯಾವಾಗ ಮಾಡುತ್ತಾರೆ ಅನ್ನೋದೇ ಗೊಂದಲಕ್ಕೆ ಕಾರಣವಾಗಿಬಿಡುತ್ತೆ.
ಇವೆಲ್ಲದರ ನಡುವೆಯೇ ಅವರೀಗ ಮತ್ತೊಂದು ಹೊಸ ಚಿತ್ರವನ್ನೂ ಅನೌನ್ಸ್ ಮಾಡಿದ್ದಾರೆ. ಈ ಬಾರಿ ಅವರು “786′ ನಂಬರ್ ಹಿಂದೆ ಹೊರಟಿದ್ದಾರೆ. ಅಂದರೆ, ಓಂ ಪ್ರಕಾಶ್ ಅವರು ತಮ್ಮ ಹೊಸ ಚಿತ್ರಕ್ಕೆ “ಕೆಎ 01 ಎಂ ಓ786′ ಎಂದು ಹೆಸರಿಟ್ಟಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದೊಂದು ವಾಹನದ ನಂಬರ್ ಎಂಬುದು ಗೊತ್ತಾಗುತ್ತೆ. ಆದರೆ, ಅದು ಬೈಕ್ ನಂಬರ್ರೋ, ಕಾರಿನ ಸಂಖ್ಯೆಯೋ ಅಥವಾ ಲಾರಿ, ಬಸ್ಸಿನ ನಂಬರ್ರೋ ಎಂಬುದಕ್ಕೆ ಸಿನಿಮಾ ಬರುವವರೆಗೂ ಕಾಯಬೇಕು.
ಸಾಮಾನ್ಯವಾಗಿ ಓಂ ಪ್ರಕಾಶ್ ರಾವ್ ಸಿನಿಮಾಗಳು ಅಂದಾಕ್ಷಣ ಅಲ್ಲಿ ಆ್ಯಕ್ಷನ್‌ಗೆ ಹೆಚ್ಚು ಜಾಗವಿರುತ್ತದೆ. ಜೊತೆಗೆ ಕಾಮಿಡಿಗೇನೂ ಕೊರತೆ ಇರೋದಿಲ್ಲ. ಆದರೆ, ಈ ಚಿತ್ರದ ಶೀರ್ಷಿಕೆಯನ್ನು ಗಮನಿಸಿದರೆ, ಇದೊಂದು ಪಕ್ಕಾ ಸಸ್ಪೆನ್ಸ್-ಥ್ರಿಲ್ಲರ್ ಜಾನರ್ ಸಿನಿಮಾ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತೆ. ಅದೇನೆ ಇರಲಿ, ಓಂ ಪ್ರಕಾಶ್‌ರಾವ್ ನಿರ್ದೇಶನದ ಅಕೌಂಟ್‌ಗೆ “ಕೆಎ 01 ಎಂಓ 786′ ಚಿತ್ರ ಹೊಸ ಸೇರ್ಪಡೆ ಎನ್ನಬಹುದು.
ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿರುವ ಓಂ ಪ್ರಕಾಶ್‌ರಾವ್, ಈ ಬಾರಿ ಹೊಸ ಹೀರೋಗೆ ನಿರ್ದೇಶನ ಮಾಡಲು ಹೊರಟಿದ್ದಾರೆ. ಹೌದು, ಈ ಹಿಂದೆ “ಗೂಳಿಹಟ್ಟಿ’, “ಹಾಲು ತುಪ್ಪ’ ಮತ್ತು “ಉಡುಂಬಾ’ ಚಿತ್ರಗಳಲ್ಲಿ ನಟಿಸಿದ್ದ ಪವನ್ ಶೌರ್ಯ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಚಿತ್ರದಲ್ಲಿ ಮೇಘನಾ ಭಾರದ್ವಾಜ್, ಕೃತಿಕಾ, ಮಂಜೇಶ್, ಸ್ವಸ್ತಿಕ್ ಶಂಕರ್, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಚಿತ್ರಾ ಶೆಣೈ ಸೇರಿದಂತೆ ಹಲವರು ಕಾಣಿಸಿಕೊಳ್ಳುತ್ತಿದ್ದಾರೆ.
ಅಂದಹಾಗೆ, ಓಂ ಪ್ರಕಾಶ್‌ರಾವ್ ನಿರ್ದೇಶಿಸಲಿರುವ “ಕೆಎ 01 ಎಂಓ 786′ ಚಿತ್ರಕ್ಕೆ ಯಾವಾಗ ಚಾಲನೆ ಸಿಗಲಿದೆ, ಎಲ್ಲೆಲ್ಲಿ ಚಿತ್ರೀಕರಣ ನಡೆಯಲಿದೆ, ಚಿತ್ರದಲ್ಲಿ ತಂತ್ರಜ್ಞರು ಯಾರೆಲ್ಲಾ ಇರುತ್ತಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಸದ್ಯಕ್ಕೆ ಓಂ ಪ್ರಕಾಶ್‌ರಾವ್ ಅವರು ರವಿಚಂದ್ರನ್ ಹಾಗು ಉಪೇಂದ್ರ ಅಭಿನಯದ “ರವಿಚಂದ್ರ’ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.