ವಿದೇಶದ ಉದ್ಯೋಗ ಬಿಟ್ಟು ಕೃಷಿ,ಹೈನುಗಾರಿಕೆ !
ನಂದಳಿಕೆ ಗೋಳಿಕಟ್ಟೆಯ ಡೊಮಿನಿಕ್ ಎಡ್ವರ್ಡ್ ದಂಪತಿಯ ಮಾದರಿ ಕಾರ್ಯ
Team Udayavani, Sep 19, 2019, 5:51 AM IST
ಬೆಳ್ಮಣ್: ವಿದೇಶದಲ್ಲಿದ್ದು ಕೈ ತುಂಬಾ ಸಂಪಾದನೆಯಿದ್ದರೂ ಕೃಷಿಯೊಂದಿಗೆೆ ಹಳ್ಳಿ ಬದುಕಿಗೆ ಮಾರು ಹೋಗಿ ಹುಟ್ಟೂರಿನಲ್ಲಿ ಆಡು ಸಾಕಣೆ, ದನ ಸಾಕಣೆಯ ಹಾಗೂ ವಿವಿಧ ಕೃಷಿ ಚಟುವಟಿಕೆಗಳನ್ನು ಮಾಡಿ ಲಾಭ ಪಡೆಯತ್ತಿರುವ ನಂದಳಿಕೆ ಗೋಳಿಕಟ್ಟೆಯ ಡೊಮಿನಿಕ್ ಎಡ್ವರ್ಡ್ ಹಾಗೂ ಮರಿಯಾ ಗ್ರೆಟ್ಟಾ ದಂಪತಿ ಮಾದರಿಯೆನಿಸಿದ್ದಾರೆ.
ಆಡು ಸಾಕಣೆ
ಇವರು ವಿವಿಧ ಆಡುಗಳನ್ನು ಸಾಕುತ್ತಿದ್ದು ಅವುಗಳನ್ನು ಮಾಂಸ ಮಾರಾಟಕ್ಕಾಗಿ ಬಳಸದೇ ಬಗೆ ಬಗೆಯ ಹೈಬ್ರಿಡ್ ತಳಿಗಳ ಉತ್ಪಾದನೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಲಾಭ ಗಳಿಸುತ್ತಿದ್ದಾರೆ. ಪಂಜಾಬಿ ಬೆತೆಲ್, ಜಮುನಾ ಪಾರಿ, ಶಿರೋಯಿ ರಾಜಸ್ತಾನ್, ಉಸ್ಮಾನಾ ಬಾರಿ ಸಹಿತ ವಿವಿಧ ತಳಿಗಳ ಆಡುಗಳಿದ್ದು ಅವುಗಳನ್ನು ಕ್ರಾಸಿಂಗ್ ನಡೆಸಿ ಬಣ್ಣ ಬಣ್ಣಗಳ ತಳಿಗಳನ್ನು ಪಡೆಯುತ್ತಾರೆ. ಪ್ರಸ್ತುತ ಇವರ ಬಳಿ 36 ಬಗೆಯ ವರ್ಣ ರಂಜಿತ ಆಡುಗಳಿವೆ.
ಆಡುಗಳ ಹಿಕ್ಕೆಗೂ ಇದೆ ಬೇಡಿಕೆ
ಈ ಆಡುಗಳ ಹಿಕ್ಕೆ (ತ್ಯಾಜ್ಯ)ಗಳನ್ನು ಕಲೆ ಹಾಕಿ ಗೋಣಿ ಚೀಲಗಳಲ್ಲಿ ತಲಾ 50 ಕೆ.ಜಿಯ ಗೋಣಿಗಳಾಗಿ ವಿಂಗಡಿಸಿ ಮಾರಾಟ ಮಾಡಲಾಗುತ್ತಿದೆ. ಗೋಣಿಯೊಂದಕ್ಕೆ 300 ರೂ. ಬೆಲೆ ಮಾರುಕಟ್ಟೆಯಲ್ಲಿದೆ ಎನ್ನುತ್ತಾರೆ ಈ ದಂಪತಿ.
ಆಡು ಸಾಕಣೆಯ ಜತೆ ಸುಮಾರು ಎರಡು ಎಕ್ರೆ ಜಮೀನಿನಲ್ಲಿ ಈ ದಂಪತಿ ಅಪ್ಪಟ ಸಾವಯವ ಗೊಬ್ಬರ ಬಳಸಿ ಭತ್ತದ ಕೃಷಿ ಹೊರತು ಪಡಿಸಿ ಹೆಚ್ಚಿನ ವ್ಯವಸಾಯ ನಡೆಸುತ್ತಿದ್ದಾರೆ. ಇವರ ಬಳಿ 5 ಮೇರು ದರ್ಜೆಯ ದನಗಳೂ ಇವೆ. ಮಲ್ಲಿಗೆ ಕೃಷಿ, ಜೇನು ಸಾಕಣೆ, ಅಡಿಕೆ, ತೆಂಗು, ಬಾಳೆ ಗಿಡ, ಪಪ್ಪಾಯಿ, ತೊಂಡೆ, ಬೆಂಡೆ ಸಹಿತ ವಿವಿಧ ತರಕಾರಿಗಳ ಜತೆ ಹಣ್ಣು ಹಂಪಲುಗಳ ಗಿಡಗಳನ್ನೂ ಇವರು ಬೆಳೆಸಿದ್ದಾರೆ.
ನೆಮ್ಮದಿ ಮುಖ್ಯ
ಬದುಕಲು ಹಣ ಮುಖ್ಯವಲ್ಲ, ನೆಮ್ಮದಿ ಮುಖ್ಯ. ಆಡು ಸಾಕಣೆಯ ಜತೆ ವಿಶೇಷ ತಳಿಗಳ ನಿರ್ಮಾಣ, ಕೃಷಿ ಚಟುವಟಿಕೆಗಳಲ್ಲಿ ಸಂತೃಪ್ತಿ ಕಾಣುತ್ತಿದ್ದೇವೆ. ನಮ್ಮ ಕೃಷಿ ಭೂಮಿಯ ಹಸಿರು ನಮ್ಮ ಉಸಿರಾಗಿದೆ. ವಿದೇಶದ ಲಕ್ಷಗಟ್ಟಲೆ ಹಣಕ್ಕಿಂತಲೂ ಹುಟ್ಟೂರಿನ ಈ ಕೃಷಿ ಬದುಕಿನ ಶ್ರಮಭರಿತ ಆದಾಯ ಅಮೂಲ್ಯವಾದುದು.
-ಡೊಮಿನಿಕ್ ಎಡ್ವರ್ಡ್ ನೊರೊನ್ಹಾ
ಶರತ್ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.